ಕರಿಕಟ್ಟಿಹಳ್ಳಿ ಶಾಲೆಗೆ ಉಚಿತ ಟೀವಿ ಕೊಡುಗೆ

KannadaprabhaNewsNetwork | Published : Jul 31, 2024 1:07 AM

ಸಾರಾಂಶ

ಹಳೇಬೀಡು ಸಮೀಪದ ಕರಿಕಟ್ಟೆಹಳ್ಳಿ ಗ್ರಾಮದಲ್ಲಿ ವಿದ್ಯಾಂಜಲಿ ಕಾರ್ಯಕ್ರಮದಲ್ಲಿ ಗ್ರಾಮದ ಶಾಲೆಗೆ ಉಚಿತವಾಗಿ ೩೨ ಇಂಚಿನ ಟೀವಿಯನ್ನು ನೀಡಲಾಯಿತು. ಸರ್ಕಾರಿ ಶಾಲೆಯನ್ನು ಉಳಿಸಿ ಬೆಳೆಸಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಅಡಿಯಲ್ಲಿ ನಿವೃತ್ತಿ ಶಿಕ್ಷಕರು, ಸರ್ಕಾರ ಅಧಿಕಾರಿಗಳು, ರಕ್ಷಣಾ ಸಿಬ್ಬಂದಿಗಳು, ಹಾಗೂ ಹಳೆಯ ವಿದ್ಯಾರ್ಥಿ ಸ್ವಯಂಸೇವಕರು ಸೇರಿ ಈ ಚಟುವಟಿಕೆ ನಡೆಸಿದರೆ ಸರ್ಕಾರಿ ಶಾಲೆಗಳು ಉಳಿಯುತ್ತದೆ ಎಂದು ಶಿಕ್ಷಣ ಇಲಾಖೆಯ ಅಭಿಯಾನವಾಗಿದೆ ಎಂದು ಬೇಲೂರು ಕ್ಷೇತ್ರ ಶಿಕ್ಷಣ ಇಲಾಖೆಯ ಬಿ.ಆರ್‌.ಪಿ. ಮೋಹನ್ ರಾಜ್‌ ತಿಳಿಸಿದರು.

ಕನ್ನಡಪ್ರಭ ವಾರ್ತೆ ಹಳೇಬೀಡು

"ವಿದ್ಯಾಂಜಲಿ " ಎಂಬುವುದು ಸಂಸ್ಕೃತ ಭಾಷೆಯಲ್ಲಿ ಸರಿಯಾದ ಜ್ಞಾನ ಅಥವಾ ಸ್ಪಷ್ಟತೆ ಮತ್ತು ಅಂಜಲಿ ಎಂದರೆ ಎರಡು ಕೈಗಳಿಂದ ಅರ್ಪಣೆ ಮಾಡುವುದು ಎಂಬ ಅರ್ಥ ಬರುತ್ತದೆ ಎಂದು ಬೇಲೂರು ಕ್ಷೇತ್ರ ಶಿಕ್ಷಣ ಇಲಾಖೆಯ ಬಿ.ಆರ್‌.ಪಿ. ಮೋಹನ್ ರಾಜ್ ತಿಳಿಸಿದರು.

ಹಳೇಬೀಡು ಸಮೀಪದ ಕರಿಕಟ್ಟೆಹಳ್ಳಿ ಗ್ರಾಮದಲ್ಲಿ ವಿದ್ಯಾಂಜಲಿ ಕಾರ್ಯಕ್ರಮದಲ್ಲಿ ಗ್ರಾಮದ ಶಾಲೆಗೆ ಉಚಿತವಾಗಿ ೩೨ ಇಂಚಿನ ಟಿವಿಯನ್ನು ನೀಡಿದ ಈ ಗ್ರಾಮದ ವಿಶ್ವನಾಥ್ ಮಕ್ಕಳಾದ ದಯಾನಂದ ಮತ್ತು ಮೋಹನ್ ಸೋದರರಿಗೆ ಧನ್ಯವಾದ ಅರ್ಪಿಸುತ್ತಾ, ವಿದ್ಯಾಂಜಲಿಯು ಶಾಲೆಯ ಸ್ವಯಂಸೇವಕರ ಕಾರ್ಯಕ್ರಮವಾಗಿದೆ. ಸರ್ಕಾರಿ ಶಾಲೆಯನ್ನು ಉಳಿಸಿ ಬೆಳೆಸಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಅಡಿಯಲ್ಲಿ ನಿವೃತ್ತಿ ಶಿಕ್ಷಕರು, ಸರ್ಕಾರ ಅಧಿಕಾರಿಗಳು, ರಕ್ಷಣಾ ಸಿಬ್ಬಂದಿಗಳು, ಹಾಗೂ ಹಳೆಯ ವಿದ್ಯಾರ್ಥಿ ಸ್ವಯಂಸೇವಕರು ಸೇರಿ ಈ ಚಟುವಟಿಕೆ ನಡೆಸಿದರೆ ಸರ್ಕಾರಿ ಶಾಲೆಗಳು ಉಳಿಯುತ್ತದೆ ಎಂದು ಶಿಕ್ಷಣ ಇಲಾಖೆಯ ಅಭಿಯಾನವಾಗಿದೆ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿ ಸೇವೆ ಸಲ್ಲಿಸುತ್ತಿರುವ ದಯಾನಂದ್ ಮಾತನಾಡುತ್ತ, ನಾವು ಸರ್ಕಾರಿ ಶಾಲೆಯಲ್ಲಿ ಓದಿ ಒಳ್ಳೆಯ ಉನ್ನತ ಸ್ಥಾನಕ್ಕೆ ಹೋಗಿದ್ದೇವೆ. ನಮ್ಮ ಗುರುಗಳ ಮಾರ್ಗದರ್ಶನದಿಂದ ನಮ್ಮ ಗ್ರಾಮದ ಮಕ್ಕಳ ಹಿತದೃಷ್ಟಿಯಿಂದ ಮಕ್ಕಳಗೆ ವಿದ್ಯಾಭ್ಯಾಸಕ್ಕಾಗಿ ಅನುಕೂಲವಾಗಲಿ ಎಂದು ಟಿವಿಯನ್ನು ನೀಡಿದ್ದೇವೆ. ಇದಕ್ಕೆ ನನ್ನ ಕುಟುಂಬದವರಿಗೆ ಧನ್ಯವಾದಗಳು ಎಂದು ತಿಳಿಸಿದರು.

ಹಳೆ ವಿಧ್ಯಾರ್ಥಿ ಮೋಹನ್‌ ಕುಮಾರ್ ಮಾತನಾಡುತ್ತ, ಇಂದಿನ ಮಕ್ಕಳು ಮೊಬೈಲ್ ನ್ನು ನೋಡುವುದನ್ನು ಬಿಟ್ಟು ಪುಸ್ತಕ, ಪೇಪರ್ ಅದರ ಜೊತೆ ಸುದ್ದಿವಾರ್ತೆ ನೋಡಿದರೆ ಮಕ್ಕಳಲ್ಲಿ ಒಳ್ಳೆಯ ಜ್ಞಾನ ಬರುತ್ತದೆ. ಶಾಲೆಗೆ, ಊರಿಗೆ ಒಳ್ಳೆ ಹೆಸರು ಬರುತ್ತದೆ. ವಿದ್ಯಾವಂತರಾಗಿ ಬಾಳಿ ಸರ್ಕಾರಿ ಶಾಲೆ ಉಳಿಸಿದರೆ ಬಡವ ಮಧ್ಯಮ ವರ್ಗದವರು, ರೈತ ಕುಟುಂಬದವರಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಎಸ್.ಡಿ.ಎಮ್. ಅಧ್ಯಕ್ಷರಾದ ವಿನೋದ್, ಮಾರುತಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸೋಮಶೇಖರ್ ಹಾಗೂ ಗ್ರಾಮಸ್ಥರಾದ ನಾಗರಾಜು ರವೀಶ್, ತೀರ್ಥಪ್ಪ, ಸುಧಾಮಣಿ ಸಂಧ್ಯಾ, ಕುಮಾರ್, ಮುಖ್ಯ ಶಿಕ್ಷಕರ ದೇವರಾಜು, ಸಹ ಶಿಕ್ಷಕರಾದ ಭರತ್, ತಾರಾ ಹಾಜರಿದ್ದರು. .

Share this article