ದೇಗುಲ ಪರಂಪರೆ ಜನರ ಬದುಕು ಗಟ್ಟಿಗೊಳಿಸಲಿದೆ: ಮಲ್ಲಿಕಾರ್ಜುನ

KannadaprabhaNewsNetwork |  
Published : May 07, 2026, 02:00 AM IST
6ಕೆಎಂಎನ್ ಡಿ31 | Kannada Prabha

ಸಾರಾಂಶ

ದೇಗುಲ ಮಾನಸಿಕ ನೆಮ್ಮದಿ, ಶಾಂತಿ ನೀಡಿದರೆ, ಶಾಲೆಗಳು ಜ್ಞಾನದೇಗುಲವಾಗಿದೆ. ಎರಡನ್ನುಜೋಪಾನವಾಗಿ ನೋಡಿಕೊಂಡು ಹೋದಲ್ಲಿ ಸುಂದರ ಸಮಾಜ ನಿರ್ಮಾಣವಾಗಲಿದೆ. ಜಪ, ತಪ, ಧ್ಯಾನಗಳಿಂದ ಶಾರೀರಿಕ, ಆರೋಗ್ಯಕರ ವಾತಾವರಣ ಸೃಷ್ಟಿಯಾಗಲಿದೆ.

ಕಿಕ್ಕೇರಿ:

ಜನರ ಬದುಕು ಗಟ್ಟಿಗೊಳಿಸುವ ದೇಗುಲ, ಪೂಜಾರಾಧನೆ ಸಂಸ್ಕೃತಿಯನ್ನು ಪಾಲಿಸಲು ಮುಂದಾಗಬೇಕು ಎಂದು ಸಮಾಜ ಸೇವಕ ಆರ್‌ಟಿಒ ಮಲ್ಲಿಕಾರ್ಜುನ ತಿಳಿಸಿದರು.

ಹೋಬಳಿಯ ಮಾರ್ಗೋನಹಳ್ಳಿಯಲ್ಲಿ ಲೋಕಾರ್ಪಣೆಯಾದ ನವೀಕೃತ ವೀರಭದ್ರೇಶ್ವರ, ಭದ್ರಕಾಳಮ್ಮ ದೇಗುಲ ಉದ್ಘಾಟನೆ ಸಮಾರಂಭದಲ್ಲಿ ದೇಗುಲ ಅಭಿವೃದ್ಧಿಗಾಗಿ ಧನಸಹಾಯ ನೀಡಿ ಮಾತನಾಡಿ, ಭಾರತ ನಿಂತಿರುವುದೇ ಧಾರ್ಮಿಕ ಭಾವನೆಯ ತಳಹದಿಯಲ್ಲಿ. ದೇಗುಲ ಆರಾಧನೆ, ಪೂಜೆ, ಹೋಮ, ಹವನಗಳಲ್ಲಿ ವೈಜ್ಞಾನಿಕ ಮಹತ್ವ ಇದೆ. ಗ್ರಾಮಗಳನ್ನು ಸೌಹಾರ್ದತೆಯಿಂದ ಬೆಸೆಯುವ ಶ್ರದ್ಧಾ ಕೇಂದ್ರ ದೇಗುಲವಾಗಿದೆ ಎಂದರು.

ದೇಗುಲ ಮಾನಸಿಕ ನೆಮ್ಮದಿ, ಶಾಂತಿ ನೀಡಿದರೆ, ಶಾಲೆಗಳು ಜ್ಞಾನದೇಗುಲವಾಗಿದೆ. ಎರಡನ್ನುಜೋಪಾನವಾಗಿ ನೋಡಿಕೊಂಡು ಹೋದಲ್ಲಿ ಸುಂದರ ಸಮಾಜ ನಿರ್ಮಾಣವಾಗಲಿದೆ. ಜಪ, ತಪ, ಧ್ಯಾನಗಳಿಂದ ಶಾರೀರಿಕ, ಆರೋಗ್ಯಕರ ವಾತಾವರಣ ಸೃಷ್ಟಿಯಾಗಲಿದೆ. ಯುವಕರು ನಮ್ಮ ಪೂರ್ವಜರು ಹಾಕಿಕೊಟ್ಟರ ಪರಂಪರೆ ಉಳಿಸಿಕೊಂಡು ನೆಮ್ಮದಿ ಬದುಕು ಕಾಣಬೇಕು ಎಂದರು.

ಮಹಿಳೆಯರು ಮಂಗಳವಾದ್ಯದೊಂದಿಗೆ ಹೇಮಾವತಿ ನದಿಯಿಂದ ಪವಿತ್ರಗಂಗೆಯನ್ನು ಕಳಸದಲ್ಲಿ ತುಂಬಿಕೊಂಡು ಮೆರವಣಿಗೆ ಮೂಲಕ ತಂದರು. ದೇವರಿಗೆ ಗಂಗಾಜಲಾಭಿಷೇಕ, ಪಂಚಮೃತ, ಎಳನೀರು ಅಭಿಷೇಕ ನೆರವೇರಿಸಲಾಯಿತು. ವಿವಿಧ ಸುಗಂಧ ಪುಷ್ಪಗಳಿಂದ ಅಲಂಕಾರ, ವಸ್ತ್ರಾಭರಣ ತೊಡಿಸಿ ಧೂಪ, ದೀಪ ಸೇವೆ ಅರ್ಪಿಸಲಾಯಿತು. ವಿವಿಧ ಹೋಮ ಹವನ, ಅರ್ಚನೆಗಳು ಜರುಗಿತು.

ಮಹಾ ಮಂಗಳಾರತಿ, ತೀರ್ಥ ಪ್ರಸಾದ, ಮಹಾಪ್ರಸಾದ ಭಕ್ತರಿಗೆ ನೀಡಲಾಯತು, ಅನ್ನದಾಸೋಹ ನಡೆಯಿತು. ಈ ವೇಳೆ ನಾಗರಾಜು, ಪ್ರಕಾಶ್, ನಾಗರಾಜಶೆಟ್ಟಿ, ಯೋಗೇಶ್, ಶ್ರೀನಿವಾಸ ಮುಂತಾದವರು ಇದ್ದರು.ಬಿಜೆಪಿಗೆ ಜಯ: ಕಾರ್ಯಕರ್ತರಿಗೆ ಹೊಸ ಹುಮ್ಮಸ್ಸು

ಮಂಡ್ಯ: ದೇಶದ ಎರಡು ರಾಜ್ಯ ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಬಿಜೆಪಿ ಅಭೂತ ಪೂರ್ವ ಗೆಲುವು ಕಾರ್ಯಕರ್ತರಿಗೆ ಹೊಸ ಹುಮ್ಮಸ್ಸು ತಂದುಕೊಟ್ಟಿದೆ ಎಂದು ಬಿಜೆಪಿ ಮುಖಂಡ ಎಸ್.ಜೆ.ಆನಂದ್ ತಿಳಿಸಿದ್ದಾರೆ.ಈ ಕುರಿತು ಹೇಳಿಕೆ ನೀಡಿರುವ ಆನಂದ್, ಪ್ರಧಾನಿ ಮೋದಿ ಹಾಗೂ ಗೃಹ ಮಂತ್ರಿ ಅಮಿತ್ ಶಾ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಪಶ್ಚಿಮ ಬಂಗಾಳ, ಅಸ್ಸಾಂ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದ್ದು, ಈ ಗೆಲುವಿನ ಹಿಂದೆ ನಮ್ಮ ಪಕ್ಷದ ನಾಯಕರ ಶ್ರಮ ಅಪಾರವಾಗಿದೆ ಎಂದಿದ್ದಾರೆ.

ಕರ್ನಾಟಕದಲ್ಲೂ 2028ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಪಶ್ಚಿಮ ಬಂಗಾಳ ಮಾದರಿಯಲ್ಲಿ ಅಧಿಕಾರಕ್ಕೆ ತರಬೇಕಿದೆ. ರಾಜ್ಯದಲ್ಲಿ ಮುಂದೆ ನಡೆಯುವ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವುದು, ಕಾಂಗ್ರೆಸ್ ಬೇರನ್ನು ಬುಡ ಸಮೇತ ಕಿತ್ತು ಹಾಕಬೇಕು. ಆ ನಿಟ್ಟಿನಲ್ಲಿ ನಾಯಕರು, ಕಾರ್ಯಕರ್ತರು ಒಮ್ಮತವಾಗಿ ಈಗಿನಿಂದಲೇ ಕೆಲಸ ಮಾಡಬೇಕಿದೆ ಎಂದು ಆನಂದ್ ಸಲಹೆ ನೀಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೂಡ್ಸ್‌ ಶೆಡ್ ಲಾರಿ ನಿಲುಗಡೆ ಜಾಗ ಉಳಿಸಿ
ಶೀಘ್ರ ಕಾಮಗಾರಿ ಪೂರ್ಣಗೊಳಿಸಿ: ರಾವ್