ದೇಗುಲಗಳ ಹಣ ಲೂಟಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

KannadaprabhaNewsNetwork | Published : Mar 4, 2025 12:37 AM

ಸಾರಾಂಶ

ರಾಜ್ಯ ಸರ್ಕಾರ ಈ ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಎಸ್‌ಐಟಿ ರಚಿಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ರಾಣಿಬೆನ್ನೂರು: ರಾಜ್ಯದ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಕೆಲವು ಅಧಿಕಾರಿಗಳು ಹಿಂದೂ ದೇವಸ್ಥಾನಗಳಿಗೆ ಸೇರಬೇಕಾದ ಕೋಟ್ಯಂತರ ರುಪಾಯಿಗಳನ್ನು ಲೂಟಿ ಮಾಡುತ್ತಿರುವುದನ್ನು ಖಂಡಿಸಿ ಹಾಗೂ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಸೋಮವಾರ ನಗರದಲ್ಲಿ ಕರ್ನಾಟಕ ಮಂದಿರ ಮಹಾಸಂಘದ ಸದಸ್ಯರು ಗ್ರೇಡ್- 2 ತಹಸೀಲ್ದಾರ್ ಅರುಣ ಕಾರಗಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ಸಾಸಲು ಹೋಬಳಿ ರೆವಿನ್ಯೂ ಇನ್‌ಸ್ಪೆಕ್ಟರ್ ಹೇಮಂತಕುಮಾರ 2023ರಲ್ಲಿ ಇಬ್ಬರು ತಹಸೀಲ್ದಾರ್ ಮತ್ತು ಒಬ್ಬ ಕೇಸ್ ವರ್ಕರ್ ನಕಲಿ ಸಹಿ ಹಾಗೂ ಮುದ್ರೆ ಬಳಸಿ ಧಾರ್ಮಿಕ ದತ್ತಿ ಇಲಾಖೆಯ ₹60 ಲಕ್ಷಗಳನ್ನು ತನ್ನ ಪತ್ನಿ ಮತ್ತು ಸಂಬಂಧಿಕರ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ.

ಇದೇ ರೀತಿ ಲಿಂಗಸ್ಗೂರಿನ ತಹಸೀಲ್ದಾರ್ ಕಚೇರಿ ದ್ವಿತೀಯದರ್ಜೆ ಸಹಾಯಕ ಯಲ್ಲಪ್ಪ ದೇವಸ್ಥಾನಗಳ ಅರ್ಚಕರಿಗೆ ಮೀಸಲಿಟ್ಟ ₹1,87,86,561 ಹಣವನ್ನು ಹಣವನ್ನು ತನ್ನ ಹೆಂಡತಿ, ಮಕ್ಕಳ ಹೆಸರಿನಲ್ಲಿ ನಕಲಿ ಬ್ಯಾಂಕ್ ಖಾತೆಗಳನ್ನು ತೆರೆದು ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡಿದ್ದಾರೆ. ಆದ್ದರಿಂದ ರಾಜ್ಯ ಸರ್ಕಾರ ಈ ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಎಸ್‌ಐಟಿ ರಚಿಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ. ಕೃಷ್ಣಾಸಾ ಪವಾರ, ನಾಗರಾಜ ಬದಿ, ಅನಿಲ ರಾಜೋಳಿ, ಸಂಜೀವ್ ಕೊಪ್ಪದ, ಮಲ್ಲಿಕಾರ್ಜುನ ತೆಗ್ಗಿನ, ಮಂಜುನಾಥ ಬದ್ನಿಕಾಯಿ, ವೆಂಕಟೇಶ ಮಿಸ್ಕಿನ, ಶಿವಕುಮಾರ ಹಿರೇಮಠ, ಚಂದ್ರಗೌಡ ಭರಮಗೌಡರ, ರಾಜೇಂದ್ರಕುಮಾರ, ವಿಜಯಕುಮಾರ ಇಟಗಿ, ಪ್ರವೀಣ ಯಾದವಾಡ ಮತ್ತಿತರರಿದ್ದರು.ರಾಜ್ಯಮಟ್ಟದ ಕ್ರಿಕೆಟ್ ಟೂರ್ನಿಗೆ ತೆರೆ

ರಟ್ಟೀಹಳ್ಳಿ: ಬೀರಲಿಂಗೇಶ್ವರ ಗೆಳೆಯರ ಬಳಗದ ವತಿಯಿಂದ ಮಹಾ ಶಿವರಾತ್ರಿ ಹಾಗೂ ದಿ. ಚೇತನ್ ಜಾಡರ, ದಿ. ಸೋಮು ದೊಡ್ಡಮನಿ, ದಿ. ರಾಜು ಹರವಿಶೆಟ್ಟರ್, ದಿ. ಸಿದ್ದು ಸುಣಗಾರ ಇವರ ಸ್ಮರಣಾರ್ಥ ರಾಜ್ಯ ಮಟ್ಟದ ಟೆನಿಸ್ ಬಾಲ್ ಕ್ರಿಕೆಟ್‌ ಟೂರ್ನಮೆಂಟ್ 3 ದಿನಗಳ ಕಾಲ ಜರುಗಿತು.

ಕ್ರಿಕೆಟ್ ಟೂರ್ನಮೆಂಟ್‍ ಪಟ್ಟಣದ ಹೊಸ ಬಸ್‌ ನಿಲ್ದಾಣದ ಪಕ್ಕ ನಾಗನಗೌಡ ಮಾಜಿಗೌಡ್ರ ಇವರ ಪ್ಲಾಟ್‍ನಲ್ಲಿ ನಡೆದವು. ಒಟ್ಟು 10 ಟೀಮ್‍ಗಳು ಭಾಗವಹಿಸಿದ್ದವು. ಫೈನಲ್‌ನಲ್ಲಿ ಬೀರಲಿಂಗೇಶ್ವರ ಕ್ರಿಕೆಟ್ ಕ್ಲಬ್ ಹಾಗೂ ವೀರಭದ್ರೇಶ್ವರ ಕ್ರಿಕೆಟ್ ಕ್ಲಬ್ ಮಧ್ಯೆ ನಡೆದ ಹಣಾಹಣಿಯಲ್ಲಿ ಸಮಬಲ ಸಾಧಿಸಿದ್ದರಿಂದ ಪ್ರಥಮ ಬಹುಮಾನವನ್ನು ಎರಡು ತಂಡಗಳು ತಮ್ಮ ಮಡಿಲಿಗೆ ಸೇರಿಸಿಕೊಂಡವು. 2 ತಂಡಗಳು ಸಮಬಲ ಸಾಧಿಸಿದ್ದರಿಂದ 2 ತಂಡಕ್ಕೆ ಪ್ರಥಮ ಬಹುಮಾನವಾಗಿ ತಲಾ ₹25 ಸಾವಿರ ಹಾಗೂ ಟ್ರೋಫಿ ನೀಡಲಾಯಿತು.ಬಿಜೆಪಿ ಮುಖಂಡ ಈರಣ್ಣ ಎಡಚಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂದೀಪ ಪಾಟೀಲ್, ಬಸವರಾಜ ಆಡಿನವರ, ಸುನೀಲ್ ಸರಶೆಟ್ಟರ್, ಪ್ರಶಾಂತ ದ್ಯಾವಕ್ಕಳವರ, ಕೊಟ್ರಪ್ಪ ದ್ಯಾವಕ್ಕಳವರ, ಸಿದ್ದು ಸಾವಕ್ಕಳವರ, ಸಿದ್ದು ಹಲಗೇರಿ, ಅರುಣ ಗುಬ್ಬಿ ಮಂಜು ಅಂಗರಗಟ್ಟಿ, ಬಸವರಾಜ ಚಲವಾದಿ, ಪವನ ಚಲವಾದಿ, ನಾಗನಗೌಡ ಪ್ಯಾಟಿಗೌಡ್ರ, ಅರುಣ ಬೆಣ್ಣಿ, ಶಿವರಾಜ ಶೆಟ್ಟೆಮ್ಮನವರ, ಅನಿಲ ಹೊಳಜೋಗಿ ಮುಂತಾದವರು ಇದ್ದರು.

Share this article