ದೇವಾಲಯ ರಚನೆಗೆ ಮೂಲ ಮಾನವ ದೇಹ ರಚನಾ ಶಾಸ್ತ್ರ

KannadaprabhaNewsNetwork |  
Published : Oct 04, 2024, 01:04 AM ISTUpdated : Oct 04, 2024, 01:05 AM IST
34 | Kannada Prabha

ಸಾರಾಂಶ

ದೇಗುಲಗಳಲ್ಲಿ ನಡೆಯುವ ಎಲ್ಲಾ ವಿಧಿ ವಿಧಾನಗಳಿಗೂ ವೈಜ್ಞಾನಿಕ ಕಾರಣಗಳು ಇವೆ

ಕನ್ನಡಪ್ರಭ ವಾರ್ತೆ ಮೈಸೂರುದೇಗುಲಗಳು ಮಾನವ ದೇಹದ ಪ್ರತಿಬಿಂಬ. ಅದ್ಭುತ ವಿಜ್ಞಾನ ಅದರ ಹಿಂದೆ ಅಡಗಿದೆ ಎಂದು ರಾಜ್ಯ ಮುಕ್ತ ವಿವಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದ ಅಧ್ಯಕ್ಷ ಡಾ. ಶಲ್ವಪಿಳ್ಳೈ ಅಯ್ಯಂಗಾರ್ ತಿಳಿಸಿದರು.ನಗರದ ಹರಿ ವಿದ್ಯಾಲಯದ ಸಂಸ್ಥಾಪಕರ ದಿನ ಹಾಗೂ ಗಾಂಧಿ ಜಯಂತಿ ಅಂಗವಾಗಿ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ದೇಗುಲಗಳಲ್ಲಿ ನಡೆಯುವ ಎಲ್ಲಾ ವಿಧಿ ವಿಧಾನಗಳಿಗೂ ವೈಜ್ಞಾನಿಕ ಕಾರಣಗಳು ಇವೆ. ಗಂಟಾನಾದ ಆಲಿಕೆಯಿಂದ ಏಕಾಗ್ರತೆ ಬರುತ್ತದೆ. ಶಾಲಗ್ರಾಮ ಶಿಲೆಯ ನೀರಿನ ಸೇವನೆಯಿಂದ ಅರೋಗ್ಯ ವೃದ್ಧಿಯಾಗುತ್ತದೆ. ಇಂತಹ ವೈಜ್ಞಾನಿಕ ಆಧಾರಗಳಿಂದ ಕೂಡಿರುವ ದಶ ಸಹಸ್ರ ವರ್ಷಗಳ ಇತಿಹಾಸ ಹೊಂದಿರುವ ನಮ್ಮ ದೇಶದ ಪ್ರಾಚೀನ ದೇವಾಲಯಗಳ ಬಗ್ಗೆ ಪ್ರತಿ ನಾಗರಿಕನೂ ಹೆಮ್ಮೆ ಪಡಬೇಕು ಎಂದರು.ಇದೇ ವೇಳೆ ಹರಿ ವಿದ್ಯಾಲಯದ ಸಂಸ್ಥಾಪಕರಾದ ಹೊಸಮನೆ ಹಲಮೇಲಮ್ಮ ರಾಮಸ್ವಾಮಿ ಅಯ್ಯಂಗಾರ್ ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿರುವ ಕೊಡುಗೆಗಳನ್ನು ಸ್ಮರಿಸಲಾಯಿತು.ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ್ ಹೊಸಮನೆ, ಕಾರ್ಯದರ್ಶಿ ಎಚ್.ಆರ್. ಭಗವಾನ್, ಜನಾರ್ಧನ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅತಿವೇಗ ಎಂದರೆ ನಿರ್ಲಕ್ಷ್ಯದ ಚಾಲನೆ ಅಲ್ಲ: ಹೈಕೋರ್ಟ್‌
‘ಜಾಹೀರಾತಲ್ಲಿ ಗಾಂಧೀಜಿ ಬಳಕೆ ಗಾಂಧೀಜಿಯರ ಮೌಲ್ಯಗಳ ಹತ್ಯೆ’