ದೇವಸ್ಥಾನಗಳು ಶಾಂತಿ, ನೆಮ್ಮದಿಯ ತಾಣಗಳು

KannadaprabhaNewsNetwork |  
Published : Sep 12, 2026, 01:15 AM IST
ತಾಲೂಕಿನ ಚಿಕ್ಕಮಾಲೂರು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಹಟ್ಟಿ ಮಾರಮ್ಮ ನೂತನ ವಿಗ್ರಹ ಪ್ರತಿಷ್ಠಾಪಮಾ ಸಮಾರಂಭದಲ್ಲಿ  ಜಿಪಂ ಮಾಜಿ ಅಧ್ಯಕ್ಷೆ ಶಾಂತಲಾ ರಾಜಣ್ಣ ಮಾತನಾಡಿದರು.  | Kannada Prabha

ಸಾರಾಂಶ

ದೇವಸ್ಥಾನಗಳು ಗ್ರಾಮೀಣರಲ್ಲಿ ಸ್ನೇಹ, ಸೌಹಾರ್ದದಿಂದ ಹೊಂದಿಕೊಡು ಬಾಳಿ ಬದುಕಲು ಪ್ರೇರಣೆ ನೀಡುತ್ತವೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಶಾಂತಲಾ ರಾಜಣ್ಣ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಮಧುಗಿರಿ

ದೇವಸ್ಥಾನಗಳು ಗ್ರಾಮೀಣರಲ್ಲಿ ಸ್ನೇಹ, ಸೌಹಾರ್ದದಿಂದ ಹೊಂದಿಕೊಡು ಬಾಳಿ ಬದುಕಲು ಪ್ರೇರಣೆ ನೀಡುತ್ತವೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಶಾಂತಲಾ ರಾಜಣ್ಣ ಅಭಿಪ್ರಾಯಪಟ್ಟರು.

ತಾಲೂಕಿನ ಕೊಡಿಗೇನಹಳ್ಳಿ ಹೋಬಳಿ ಚಿಕ್ಕಮಾಲೂರು ಗ್ರಾಮದಲ್ಲಿ ಹಟ್ಟಿ ಮಾರಮ್ಮ ನೂತನ ದೇವಸ್ಥಾನ ಹಾಗೂ ಹಟ್ಟಿ ಮಾರಮ್ಮ ನೂತನ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ದೇಗುಲಗಳು ಜನರಲ್ಲಿ ತಾರತಮ್ಯವಿಲ್ಲದೆ ಎಲ್ಲರೂ ಒಗ್ಗೂಡಿ ಸಹಕಾರ ಮನೋಭಾವದಿಂದ ಜೀವನ ನಡೆಸಲು ಸ್ಪೂರ್ತಿ ನೀಡುತ್ತವೆ. ದೇವಸ್ಥಾನಗಳನ್ನು ಕಟ್ಟುವುದರಿಂದ ಗ್ರಾಮಗಳಲ್ಲಿ ನಮ್ಮ ಸನಾತನ ಸಂಸ್ಕೃತಿ ,ಪರಂಪರೆ ಉಳಿಯುತ್ತದೆ. ಹಬ್ಬ ಹರಿದಿನಗಳಲ್ಲಿ ಎಲ್ಲ ಧರ್ಮದ ಜನರು ಒಗ್ಗೂಡಿ ದೇವರ ಉತ್ಸವಗಳನ್ನು ಮಾಡುವುದರಿಂದ ಭಾವೈಕ್ಯತೆ ವೃದ್ಧಿಸುತ್ತದೆ. ಅಪರಾಧ ಚಟುವಟಿಕೆಗಳು ಕಡಿಮೆಯಾಗಿ ಯುವ ಜನಾಂಗ ಸನ್ಮಾರ್ಗದಲ್ಲಿ ನಡೆಯಲು ದೇವಸ್ಥಾನಗಳು ಪ್ರೇರೆಪಿಸುತ್ತವೆ ಎಂದರು.

ಕಾರ್ಯಕ್ರಮದಲ್ಲಿ ದೇಗುಲದ ವ್ಯವಸ್ಥಾಪಕ ಎಲ್‌.ರಾಮಯ್ಯ.ಗ್ರಾಪಂ ಮಾಜಿ ಅಧ್ಯಕ್ಷ ವಿ.ಆರ್‌.ಭಾಸ್ಕರ್ ,ಆರ್. ವೆಂಕಟೇಶ್,ಟಿಪಿಎಸ್ ನಾಗರಾಜು,ಮುಖಂಡರಾದ ಮಂಜುನಾಥ್, ನಾರಾಯಣಪ್ಪ, ಶನಿವಾರಪ್ಪ, ಹನುಮಂತರಾಜು, ಲಕ್ಷ್ಮಪ್ಪ, ಬಾಳೆಲೆ ನಾರಾಯಣಪ್ಪ, ಗಂಗಾಧರಪ್ಪ, ಲಕ್ಷ್ಮೀನರಸಪ್ಪ, ಅಶ್ವತ್ಥಪ್ಪ, ಕದರಪ್ಪ, ನವೀನ್, ಶ್ರೀನಿವಾಸ್, ನಾಗರಾಜು ಸೇರಿದಂತೆ ಅನೇಕರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್‌ಐಆರ್‌: ಜಿಲ್ಲೆಯ 1,05,493 ಮತದಾರರಿಗೆ ನೋಟೀಸ್‌
ಬಸವಯುಗ ಮಾನವರಿಗೆ ಘನತೆ ತಂದುಕೊಟ್ಟ ಯುಗ