ದೇಗುಲಗಳು ನೆಮ್ಮದಿ ನೀಡುವ ತಾಣಗಳು: ಸತೀಶಗೌಡ

KannadaprabhaNewsNetwork |  
Published : May 16, 2026, 12:30 AM IST
ಸೂಲಿಬೆಲೆ ಸಮೀಪದ ಬಾಲೇನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಬ್ರಹ್ಮಕಲಶ ಸಮರ್ಪಣೆ ಪೂಜಾ ಕಾರ್ಯಕ್ರಮದಲ್ಲಿ ಬಮೂಲ್ ನಿರ್ದೇಶಕ ಬಿ.ವಿ.ಸತೀಶಗೌಡ ಪಾಲ್ಗೊಂಡು ದೇವರ ದರ್ಶನ ಪಡೆದರು, | Kannada Prabha

ಸಾರಾಂಶ

ಸೂಲಿಬೆಲೆ: ಜೀವನದ ಜಂಜಾಟದಲ್ಲಿ ಮಾನಸಿಕ ನೆಮ್ಮದಿ ಕಾಣಲು ದೇವಾಲಯಗಳಿಂದ ಮಾತ್ರ ಸಾಧ್ಯ ಎಂದು ಬಮೂಲ್ ನಿರ್ದೇಶಕ ಬಿ.ವಿ.ಸತೀಶಗೌಡ ಹೇಳಿದರು

ಸೂಲಿಬೆಲೆ: ಜೀವನದ ಜಂಜಾಟದಲ್ಲಿ ಮಾನಸಿಕ ನೆಮ್ಮದಿ ಕಾಣಲು ದೇವಾಲಯಗಳಿಂದ ಮಾತ್ರ ಸಾಧ್ಯ ಎಂದು ಬಮೂಲ್ ನಿರ್ದೇಶಕ ಬಿ.ವಿ.ಸತೀಶಗೌಡ ಹೇಳಿದರು.

ಹೋಬಳಿಯ ಬಾಲೇನಹಳ್ಳಿ ಸಲ್ಲಾಪುರಮ್ಮ ದೇಗುಲದಲ್ಲಿ ಹಮ್ಮಿಕೊಂಡಿದ್ದ ಬ್ರಹ್ಮಕಲಶ ಪ್ರತಿಷ್ಠಾಪನೆ ಹಾಗೂ ಚಂಡಿಕಾ ಹೋಮ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಾಲೇನಹಳ್ಳಿ ಗ್ರಾಮ ದೇವತೆ ಸಲ್ಲಾಪುರಮ್ಮ ದೇವಿಗೆ ಅಪಾರ ಭಕ್ತ ಸಮೂಹವಿದ್ದು ಪ್ರತಿವರ್ಷ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಅನ್ನಸಂತರ್ಪಣೆ ನಡೆಸುತ್ತಾರೆ ಎಂದರು.

ಟಿ.ಅಗ್ರಹಾರ ಕೇಶವಮೂರ್ತಿ ಮಾತನಾಡಿ, ಪುರಾತನ ಕಾಲದಿಂದಲೂ ಬಾಲೇನಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಸಲ್ಲಾಪುರಮ್ಮ ದೇವಿಗೆ ತತ್ವನ್ಯಾಸ, ಚೈತನ್ಯ, ಬ್ರಹ್ಮಕಲಶ ಸಮರ್ಪಣೆ ಹಾಗೂ ಚಂಡಿಕಾ ಹೋಮವನ್ನು ಧಾರ್ಮಿಕ ವಿಧಿ ವಿಧಾನಗಳ ಮೂಲಕ ನೆರವೇರಿಸಲಾಗಿದೆ ಎಂದರು.

ಪ್ರಧಾನ ಅರ್ಚಕ ನಾಗೇಶ್ ಮಾತನಾಡಿ, ಲೋಕಕಲ್ಯಾಣಾರ್ಥ ಚಂಡಿಕಾ ಹೋಮ ನೆರವೇರಿಸಲಾಗಿದ್ದು ಭಕ್ತಾದಿಗಳ ಸಹಕಾರದಿಂದ ದೈವಿಕ ಕಾರ್ಯಕ್ರಮಗಳು ನಡೆಸಲಾಗಿದೆ ಎಂದರು.

ಶೋಭಾರಾಜ, ಸುಮಾ, ಸೌಮ್ಯ, ಸ್ವಾತಿ, ತಮಿಳುನಾಡಿನ ಶಿವಸುಬ್ರಮಣ್ಯ ದೇವಿ, ಸಹಕಾರ ಬ್ಯಾಂಕ್ ಮಾಜಿ ನಿರ್ದೇಶಕ ಚನ್ನಿಗಲಾಪುರ ನಾರಾಯಣಸ್ವಾಮಿ, ದೇವಾಲಯ ಸಮಿತಿ ನಾಗೇಶ್, ಶಾಂತಮೂರ್ತಿ, ಮುಖಂಡರಾದ ದ್ಯಾವಸಂದ್ರ ವೆಂಕಟೇಶಗೌಡ, ಪ್ರಕಾಶ್, ಮುನಿರಾಜು, ರಾಮಕೃಷ್ಣಪ್ಪ, ಟಿ.ಅಗ್ರಹಾರ ಕೇಶವಶರ್ಮಾ, ದೊಡ್ಡಹರಳಗೆರೆ ಬೈರೇಗೌಡ, ಅನುಪಹಳ್ಳಿ ಶ್ರೀನಿವಾಸ್, ಬಾಲೇನಹಳ್ಳಿ ವೆಂಕಟಪ್ಪ, ವೇಣು, ಶೇಖರ್, ಬಾಲೇನಹಳ್ಳಿ ಗ್ರಾಮಸ್ಥರು ಹಾಜರಿದ್ದರು.

ಚಿತ್ರ; ೧೫ ಸೂಲಿಬೆಲೆ ೧ ಜೆಪಿಜೆ ನಲ್ಲಿದೆ

ಲಿಬೆಲೆ ೨ ಜೆಪಿಜೆ ನಲ್ಲಿದೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಡಗರ-ಸಂಭ್ರಮ ಶ್ರೀಚಾಮುಂಡೇಶ್ವರಿ ದೇವಿ ರಥೋತ್ಸವ
ಪಾರಂಪರಿಕ ಮೂಲೆ ಮಂಟಪ ಧ್ವಂಸ: ಪ್ರತಿಭಟನೆ