ಗ್ರಾಮೀಣ ಪ್ರದೇಶಗಳಲ್ಲಿ ದೇವಾಲಯಗಳು ಕೇವಲ ಪೂಜಾ ಸ್ಥಳಗಳಲ್ಲ, ಸಮಾಜದ ಐಕ್ಯತೆ, ಸಂಸ್ಕೃತಿ ಹಾಗೂ ಆಧ್ಯಾತ್ಮಿಕ ಮೌಲ್ಯಗಳನ್ನು ಉಳಿಸುವ ಶಕ್ತಿಕೇಂದ್ರಗಳಾಗಿವೆ ಯುವಪೀಳಿಗೆ ಭಾರತೀಯ ಸಂಸ್ಕೃತಿ, ಧಾರ್ಮಿಕ ನಂಬಿಕೆಗಳು ಹಾಗೂ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮಾಜಿ ಶಾಸಕ ಡಾ.ಸಿ.ಎಂ. ರಾಜೇಶ್ ಗೌಡ ಹೇಳಿದರು.
ಕನ್ನಡಪ್ರಭ ವಾರ್ತೆ ಶಿರಾ ಗ್ರಾಮೀಣ ಪ್ರದೇಶಗಳಲ್ಲಿ ದೇವಾಲಯಗಳು ಕೇವಲ ಪೂಜಾ ಸ್ಥಳಗಳಲ್ಲ, ಸಮಾಜದ ಐಕ್ಯತೆ, ಸಂಸ್ಕೃತಿ ಹಾಗೂ ಆಧ್ಯಾತ್ಮಿಕ ಮೌಲ್ಯಗಳನ್ನು ಉಳಿಸುವ ಶಕ್ತಿಕೇಂದ್ರಗಳಾಗಿವೆ ಯುವಪೀಳಿಗೆ ಭಾರತೀಯ ಸಂಸ್ಕೃತಿ, ಧಾರ್ಮಿಕ ನಂಬಿಕೆಗಳು ಹಾಗೂ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮಾಜಿ ಶಾಸಕ ಡಾ.ಸಿ.ಎಂ. ರಾಜೇಶ್ ಗೌಡ ಹೇಳಿದರು.
ಶಿರಾ ತಾಲೂಕಿನ ದ್ವಾರನಕುಂಟೆ ಗ್ರಾಮದಲ್ಲಿ ಗುರುವಾರ ನಡೆದ ಶ್ರೀ ರಂಗನಾಥಸ್ವಾಮಿ ದೇವಾಲಯದ ಉದ್ಘಾಟನಾ ಹಾಗೂ ನಾಗಪ್ರತಿಷ್ಠಾಪನಾ ಮಹೋತ್ಸವ ದಲ್ಲಿ ಪಾಲ್ಗೊಂಡು ಮಾತನಾಡಿದರು.ಶ್ರೀರಂಗನಾಥಸ್ವಾಮಿಯವರಲ್ಲಿ ಉತ್ತಮ ಮಳೆಯಾಗಲಿ, ರೈತ ಸಮುದಾಯದ ಮೇಲೆ ಪ್ರಕೃತಿಯ ಕೃಪೆ ಸದಾ ಇರಲಿ ಹಾಗೂ ಈ ವರ್ಷದ ಬೆಳೆ ಸಮೃದ್ಧಿಯಾಗಿ ಫಲಿಸಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದಾಗಿ ತಿಳಿಸಿ, ರೈತರ ಜೀವನ ಸುಭಿಕ್ಷವಾಗಿದ್ದು, ಗ್ರಾಮೀಣ ಆರ್ಥಿಕತೆ ಮತ್ತಷ್ಟು ಬಲವಾಗಲೆಂದು ಆಶಿಸುವುದಾಗಿ ಹೇಳಿದರು. ನಿವೃತ್ತ ಶಿಕ್ಷಕ ದ್ವಾರನಕುಂಟೆ ಡಾ.ಲಕ್ಷ್ಮಣ್ ಮಾತನಾಡಿ, ಡಾ.ರಾಜೇಶ್ ಗೌಡರು ಶಾಸಕರಾಗಿದ್ದ ಅವಧಿಯಲ್ಲಿ ದ್ವಾರನಕುಂಟೆ ಗ್ರಾಮದ ಅಭಿವೃದ್ಧಿಗೆ ನೀಡಿದ ಅನೇಕ ಕೊಡುಗೆಗಳನ್ನು ಸ್ಮರಿಸಿದರು. ಶ್ರೀ ರಂಗನಾಥಸ್ವಾಮಿ ದೇವಾಲಯ ನಿರ್ಮಾಣಕ್ಕಾಗಿ ಶಾಸಕರ ನಿಧಿಯಿಂದ ರೂ. ೨.೫ ಲಕ್ಷ ಅನುದಾನ ನೀಡಿದ್ದನ್ನು ಅವರು ಕೃತಜ್ಞತೆಯಿಂದ ನೆನಪಿಸಿಕೊಂಡರು. ಜೊತೆಗೆ ದೇವಸ್ಥಾನದ ಆವರಣದಲ್ಲಿ ಹೈಮಾಸ್ಟ್ ದೀಪ ವ್ಯವಸ್ಥೆ, ಗ್ರಾಮ ಗ್ರಂಥಾಲಯ ನಿರ್ಮಾಣ, ಶಾಲಾ ಕೊಠಡಿಗಳ ನಿರ್ಮಾಣ, ಸಿಸಿ ರಸ್ತೆ ಹಾಗೂ ಹುಳ್ಳಿಯಪ್ಪನ ಬಾವಿ ವಿಸ್ತರಣೆಯವರೆಗೆ ಡಾಂಬರ್ ರಸ್ತೆ ನಿರ್ಮಾಣಕ್ಕೆ ಸಹಕಾರ ನೀಡಿದ್ದನ್ನು ಗ್ರಾಮಸ್ಥರು ಪ್ರಶಂಸಿಸಿದರು.ಈ ಸಂದರ್ಭದಲ್ಲಿ ಶ್ರೀರಂಗನಾಥ ಸ್ವಾಮಿ ದೇವಸ್ಥಾನ ಸಮಿತಿ ಅಧ್ಯಕ್ಷ ಸೀತಣ್ಣ, ಕಾರ್ಯದರ್ಶಿ ನಂದಕುಮಾರ, ಖಜಾಂಚಿ ಕೃಷ್ಣಪ್ಪ, ಸದಸ್ಯರಾದ ಡಾ.ದ್ವಾರನ ಕುಂಟೆ ಲಕ್ಷ್ಮಣ್, ದೊಡ್ಮನೆ ರಂಗನಾಥ್, ಅಡಿಗೆಮನೆ ತಿಮ್ಮಯ್ಯ, ಚಿತ್ತಣ್ಣ, ಇಂಜಿನಿಯರ್ ಕಂಬಣ್ಣ, ಡಿ.ಎಲ್. ರೇವಣ್ಣ, ಜೆ.ಹೆಚ್. ನಾಯಕ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಲಕ್ಷ್ಮಿಕಾಂತ್, ಬಡಗಿ ಪಾಂಡು ರಂಗಯ್ಯ, ಕೃಷ್ಣ ಪ್ಪ, ಜಯರಾಮಯ್ಯ, ಗೋವಿಂದರಾಜು ಗ್ರಾಮದ ಹಿರಿಯರು, ದೇವಸ್ಥಾನ ಸಮಿತಿ ಸದಸ್ಯರು, ಯುವಕರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.