ಕನ್ನಡಪ್ರಭ ವಾರ್ತೆ ಮಣಿಪಾಲ
ನಂತರ ಅವರು ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಜೀವನದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ, ಶಾರೀರಿಕ, ಮಾನಸಿಕ ಆರೋಗ್ಯ, ಮತ್ತು ಹಣಕಾಸಿನ ಪರಿಸ್ಥಿತಿ, ಬಹಳ ಮುಖ್ಯ ಎಂದು ತಿಳಿಸಿದರು.
ಬಿವಿಟಿಯ ಹಿರಿಯ ಸಲಹೆಗಾರರಾದ ಜಗದೀಶ ಪೈ ಮಾತನಾಡಿ, ತರಕಾರಿಗಳನ್ನು ಈಗಿನ ದಿನಗಳಲ್ಲಿ ನಾವು ಹೆಚ್ಚಾಗಿ ಹೊರಗಿನಿಂದ ಖರೀದಿಸುವ ಪರಿಸ್ಥಿತಿ ಎದುರಾಗುತ್ತಿದೆ, ಇದನ್ನು ಬಹಳ ಹಿಂದೆಯೇ ಮನಗಂಡು ಸಂಸ್ಥೆಯ ಸ್ಥಾಪಕ ದಿ. ಟಿ.ಎ.ಪೈಯವರು ತರಕಾರಿ ಬೀಜಗಳನ್ನು ಸಾರ್ವಜನಿಕರಿಗೆ ವಿತರಿಸುವ ಮೂಲಕ, ೭೦ರ ದಶಕದಲ್ಲಿ ಪ್ರಾರಂಭಿಸಿದ ಕಾರ್ಯಕ್ರಮ ಸಂಸ್ಥೆಯು ಈಗ ಮುಂದುವರಿಸುತ್ತಾ ಬಂದಿದೆ ಎಂದರು.ಈಗಿನ ಕಾಲಮಾನದಲ್ಲಿ ಯುವಕ ಯುವತಿಯರು ಉದ್ಯೋಗದ ನಿಮಿತ್ತ ವಿದೇಶದಲ್ಲಿ ನೆಲೆಸುವುದರಿಂದ ಅವರ ಪೋಷಕರಿಗೆ ವೃದ್ಧಾಪ್ಯದಲ್ಲಿ ಸಮಸ್ಯೆಗಳು ಎದುರಾಗುತ್ತವೆ. ಹಾಗಾಗಿ ಮುಂಬರುವ ದಿನಗಲ್ಲಿ ಹಿರಿಯ ನಾಗರಿಕರಿಗೆ ಹಲವಾರು ಕಾರ್ಯಕ್ರಮಗಳನ್ನು ಬಿವಿಟಿಯಲ್ಲಿ ಆಯೋಜಿಸುವ ಯೋಜನೆಗಳು ಇವೆ ಎಂದು ತಿಳಿಸಿದರು.
ಬಿವಿಟಿಯ ಕಾರ್ಯಕ್ರಮ ಅಧಿಕಾರಿ ಪ್ರತಿಮಾ ಸ್ವಾಗತಿಸಿ, ನಿರೂಪಿಸಿದರು. ಬಿವಿಟಿಯ ಗೀತಾ ರಾವ್ ಮತ್ತು ಸಿಬ್ಬಂದಿ ಸಹಕರಿಸಿದರು. ಸುಮಾರು ೮೦ ಜನರು ಭಾಗವಹಿಸಿ ಇದರ ಸದುಪಯೋಗ ಪಡೆದುಕೊಂಡರು.