ಭಯೋತ್ಪಾದನೆ ಖಂಡಿಸಬೇಕೇ ವಿನಃ ವೈಭವಿಕರಿಸಬಾರದು: ತಿಮ್ಮಾಪೂರ

KannadaprabhaNewsNetwork | Published : Apr 30, 2025 12:38 AM

ಸಾರಾಂಶ

ಭಯೋತ್ಪಾದನೆ ಖಂಡಿಸಬೇಕೇ ವಿನಃ ವೈಭವಿಕರಿಸಬಾರದು ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪೂರ ಕಿವಿಮಾತು ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಭಯೋತ್ಪಾದನೆ ಖಂಡಿಸಬೇಕೇ ವಿನಃ ವೈಭವಿಕರಿಸಬಾರದು ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪೂರ ಕಿವಿಮಾತು ಹೇಳಿದ್ದಾರೆ.

ಜಿಲ್ಲೆಯ ಕೂಡಲಸಂಗಮದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಗ್ರರ ದಾಳಿ ಕುರಿತು ನಾನು ನೀಡಿದ ಹೇಳಿಕೆಗೆ ಬಿಜೆಪಿಗರ ವಾಗ್ದಾಳಿ ಕುರಿತು ಮಾತನಾಡಿ, ಅವರು ಅಂಗಿ ಬಿಚ್ಚಿ ನೋಡಿದ್ದಾರೋ ಇಲ್ಲೋ ಆ ವಿಚಾರ ನನಗೆ ಗೊತ್ತಿಲ್ಲ, ನಾನು ವಿಷಯ ವ್ಯಕ್ತಪಡಿಸಿದ್ದೇನೆ ಹೊರತು ಅವರೇನು (ಉಗ್ರರು) ತಪ್ಪು ಮಾಡಿರಲಿಕ್ಕಿಲ್ಲ ಎಂದು ಹೇಳಿಲ್ಲ, ನಾವೆಲ್ಲರೂ ಈ ದೇಶದ ನಾಗರಿಕರು, ಸಾರ್ವಜನಿಕವಾಗಿ ಸಾವು ನೋವಾಗಿದ್ದರಲ್ಲಿ ರಾಜಕಾರಣ ತರೋದು ಅವಶ್ಯಕತೆ ಇಲ್ಲ ಎಂದು ಹೇಳಿದರು.

ನಮ್ಮ ದೇಶದ ಹಿತಕ್ಕಾಗಿ ಭಯೋತ್ಪಾದನೆ ಸೆದೆ ಬಡಿಯಬೇಕು, ಅದನ್ನು ಪ್ರಚೋದಿಸಿದವರನ್ನು ಕುಗ್ಗಿಸಬೇಕು, ನಮ್ಮ ರಾಷ್ಟ್‌ರದ ಹಿತ ಗಮನದಲ್ಲಿಟ್ಟುಕೊಳ್ಳಬೇಕೇ ಹೊರತು ರಾಜಕಾರಣ ಲೆಕ್ಕಾಚಾರ ಇಟ್ಟಕೊಳ್ಳಬಾರದು, ನಮ್ಮ ಹೈಕಮಾಂಡ್ ಈ ಬಗ್ಗೆ ಏನು ಮಾತಾಡಬೇಡಿ ಎಂದು ಹೇಳಿದೆ, ಇದು ನನ್ನ ವೈಯಕ್ತಿಕ ವಿಚಾರ ಇರೋದ್ರಿಂದ, ಇಷ್ಟು ವಿಚಾರ ಹೇಳುತ್ತಿದ್ದೇನೆ, ಉಳಿದ ವಿಷಯದ ಬಗ್ಗೆ ಮಾತಾಡಬೇಕು, ಆದ್ರೆ ನಮ್ಮ ಹೈಕಮಾಂಡ್ ಹೇಳಿದ್ರಿಂದ ಇಷ್ಟಕ್ಕೆ ಮೊಟಕುಗೊಳಿಸುತ್ತಿದ್ದೇನೆ ಎಂದು ಸಚಿವ ತಿಮ್ಮಾಪೂರ ಹೇಳಿದರು.

ಸಂಸದ ತೇಜಸ್ವಿಸೂರ್ಯ ಅವರ ಹೇಳಿಕೆಗೆ ತಿರುಗೇಟು

ತಿಮ್ಮಾಪೂರ ಚಡ್ಡಿ ಬಿಚ್ಚಿ ಚೆಕ್ ಮಾಡಬೇಕೆಂಬ ಸಂಸದ ತೇಜಸ್ವಿಸೂರ್ಯ ಅವರ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಆರ್.ಬಿ. ತಿಮ್ಮಾಪೂರ, ದಲಿತರನ್ನು ಕಂಡ್ರೆ ಆ ರೀತಿ ಮಾತನಾಡುವ ಚಟ ಆತನಿಗಿದೆ, ನಮ್ಮ ಬಗ್ಗೆ, ಸಂವಿಧಾನದ ಬಗ್ಗೆ, ಅಂಬೇಡ್ಕರ್ ಬಗ್ಗೆ ಮಾತನಾಡ್ತಾರೆ, ದಲಿತರ ಬಗ್ಗೆ ತೇಜಸ್ವಿಸೂರ್ಯ ಅವ್ರಲ್ಲಿ ಅಸಡ್ಡೆ ಭಾವನೆ ಇದೆ, ದಲಿತರ ಬಗ್ಗೆ ಮಾತನಾಡುವ ಸಂಸ್ಕೃತಿ ಅವರಲ್ಲಿ ಏಕೆ ಬಂದಿದಿಯೋ ಗೊತ್ತಿಲ್ಲ, ನಾಲಿಗೆ ಹತೋಟಿಯಲ್ಲಿ ಇರಬೇಕಿತ್ತು, ನಾಲಿಗೆ ಹರಿಬಿಡುವಂತಹ ಸಂಸ್ಕೃತಿ ಅವ್ರಲ್ಲಿದೆ, ಆ ಸಂಸ್ಕೃತಿ ನಮ್ಮಲ್ಲಿ ಇಲ್ಲ, ಅದನ್ನೇ ಬೇರೆಯವ್ರು ಮಾತನಾಡಿದ್ರೆ ಏನಾಗ್ತಿತ್ತು? ಹಿಂದ ಅವ್ರೆಲ್ಲ ಮಾತನಾಡಿದ್ದು ದಲಿತ ವಿರೋಧಿ ಹೇಳಿಕೆಗಳೇ ಇವೆ, ಇದು ಅವ್ರಿಗೆ ಒಳ್ಳೆಯದಲ್ಲ, ನಾನಿದನ್ನು ಖಂಡಿಸುತ್ತೇನೆ ಎಂದರು.

Share this article