ಕನ್ನಡಪ್ರಭ ವಾರ್ತೆ, ತರೀಕೆರೆ
ಪುರಸಭಾ ಕಾರ್ಯಾಲಯದಿಂದ ನಮ್ಮ ನಡೆ ವಾರ್ಡ್ ಕಡೆಗೆ ಸ್ವಚ್ಛತಾ ಅಭಿಯಾನದಡಿ ಪಟ್ಟಣದ 5ನೇ ವಾರ್ಡ್ ನಲ್ಲಿ ಪದೇ ಪದೇ ಕಸ ಬೀಳುವ ಬ್ಲಾಕ್ ಸ್ಪಾಟ್ ಗುರುತಿಸಿ ಆ ಸ್ಥಳದಲ್ಲಿ ನೈರ್ಮಲ್ಯ ಕಾಪಾಡಿ ವಿವಿಧ ಬಣ್ಣದ ರಂಗೋಲಿಗಳಿಂದ ಅಲಂಕರಿಸಿ, ದೀಪ ಬೆಳಗಿಸಿ ಸ್ವಚ್ಛತೆ ಕಾಪಾಡಲು ಮನವಿ ಮಾಡಿದರು.
ಈ ಸ್ಥಳದಲ್ಲಿ ಕಸ ಗಲೀಜು ಹಾಕಬಾರದು, ಕಸ ಹಾಕಿದರೆ ನೀರು ಸರಾಗವಾಗಿ ಹರಿದು ಹೋಗದೆ ಚರಂಡಿ ಕಸದಿಂದ ಕಟ್ಟುತ್ತದೆ, ಎಲ್ಲರ ಮನೆ ಮುಂಭಾಗ ಶುದ್ದವಾಗಿರಬೇಕು. ಪರಿಸರ ಆರೋಗ್ಯವಾಗಿರಬೇಕು, ಪುರಸಭೆಯಲ್ಲಿ ಕಾರ್ಮಿಕರ ಕೊರತೆ ಇದೆ. ಹೊಸ ರೋಗಗಳು ಕಾಣಿಸಿಕೊಳ್ಳತೊಡಗಿದೆ, ನಗರವನ್ನು ಸ್ವಚ್ಛವಾಗಿಟ್ಟುಕೊಂಡರೆ ಎಲ್ಲರೂ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು, ಶೀಘ್ರದಲ್ಲೇ ಪುರಸಭೆಗೆ ಕಸ ಸಂಗ್ರಹಿಸುವ ಎರಡು ಹೊಸ ಟಿಪ್ಪರ್ ಗಳು ಬರಲಿದೆ ಎಂದು ಹೇಳಿದರು.ಮುಖಂಡರಾದ ಆದಿಲ್ ಪಾಷ ಮಾತನಾಡಿ, ವಾರ್ಡ್ ನಲ್ಲಿ ಸ್ವಚ್ಛತಾ ಕಾರ್ಯಕ್ರಮ ಆಯೋಜಿಸಿರುವುದು ಸಂತೋಷದ ವಿಷಯ. ಈ ರೀತಿಯ ಕಾರ್ಯಕ್ರಮಗಳು ಪಟ್ಟಣದ 23 ವಾರ್ಡುಗಳಲ್ಲೂ ಆಗಬೇಕು. ಮನೆ ಬಾಗಿಲಿಗೆ ಕಸ ಸಂಗ್ರಹಿಸುವ ಟಿಪ್ಪರ್ ಬಂದಾಗ ಕಸವನ್ನು ಟಿಪ್ಪರ್ ಗೆ ಕೊಡಬೇಕು. ಈ ಬಗ್ಗೆ ಜನರಲ್ಲಿ ಜಾಗೃತಿ ಉಂಟಾಗಬೇಕು. ಕಾರ್ಯಕ್ರಮ ಆಯೋಜಿಸಿದ ಪುರಸಭೆಗೆ ಅಭಿನಂದನೆ ತಿಳಿಸಿದರು.ಪುರಸಭೆ ಮುಖ್ಯಾಧಿಕಾರಿ ಎಚ್.ಪ್ರಶಾಂತ್ ಮಾತನಾಡಿ ಪುರಸಭೆ ಅಧ್ಯಕ್ಷ, ಉಪಾಧ್ಕ್ಷರು ಮತ್ತು ಜನಪ್ರತಿನಿಧಿ ಗಳೊಂದಿಗೆ ನಮ್ಮ ನಡೆ ವಾರ್ಡ್ ಕಡೆಗೆ ಈ ಕಾರ್ಯಕ್ರಮವನ್ನು ಪಟ್ಟಣದ ಎಲ್ಲಾ ವಾರ್ಡುಗಳಲ್ಲಿಯೂ ಆಯೋಜಿಸ ಲಾಗುತ್ತಿದೆ. ಪುರಸಭೆ ಅಧಿಕಾರಿಗಳೊಂದಿಗೆ ವಾರ್ಡ್ ಗೆ ತೆರಳಿ ಸ್ವಚ್ಛತೆ, ಕುಡಿಯುವ ನೀರು ಇತ್ಯಾದಿ ಸಮಸ್ಯೆಗಳನ್ನು
ಪರಿಸರ ಅಭಿಯಂತರರಾದ ತಾಹೇರ ತಸ್ನಿಂ ಮಾತನಾಡಿ ಪಟ್ಟಣದಲ್ಲಿ ಸ್ವಚ್ಛತೆ ಕಾಪಾಡಲು ಪುರಸಭೆ ಪ್ರಯತ್ನಿಸುತ್ತಿದೆ, ಪುರಸಭೆಯಲ್ಲಿ ಮಾನವ ಸಂಪನ್ಮೂಲ ಕಡಿಮೆಯಾಗಿದೆ, ಕಸವನ್ನು ಬೀದಿಗೆ ಎಸೆಯಬೇಡಿ. ಚರಂಡಿಗೆ ಹಾಕಬೇಡಿ, ಪುರಸಭೆ ಕಸ ಸಂಗ್ರಹಿಸುವ ಟಿಪ್ಪರ್ ಗಳಿಗೆ ಕೊಡಬೇಕು ಎಂದು ಮನವಿ ಮಾಡಿದರು.
17ಕಟಿರ್.ಕೆ01ಃ