ಕನ್ನಡಪ್ರಭ ವಾರ್ತೆ ಹನೂರು
26 ದಿನಗಳಿಂದ ಇಂಗಡಿನತ್ತ ಗ್ರಾಮದಲ್ಲಿ ದಾಸೋಹ ವ್ಯವಸ್ಥೆ ಕಲ್ಪಿಸಿದ ಮಠಾಧಿಪತಿಗಳು ಹಾಗೂ ಈ ಪ್ರಕರಣದಲ್ಲಿ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದ್ದಾರೆ.ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಪಂ ವ್ಯಾಪ್ತಿಯ ಇಂಡಿಗನತ್ತ ಗ್ರಾಮದಲ್ಲಿ ಏ. 26ರಂದು ನಡೆದ ಮತಗಟ್ಟೆ ಧ್ವಂಸ ಪಕರಣದಲ್ಲಿ ಮೂರು ಪ್ರಕರಣಗಳು ದಾಖಲಾಗಿ 46 ಜನ ಕಾರಗೃಹದಲ್ಲಿ ಬಂಧನದಲ್ಲಿದ್ದ ಸಂದರ್ಭದಲ್ಲಿ ಜೈಲು ಪಾಲಾದ ಕುಟುಂಬದವರು ಮಕ್ಕಳು, ವಯಸ್ಸಾದವರು, ಗರ್ಭಿಣಿಯರು ಮತ್ತು ಮಹಿಳೆಯರು ಗ್ರಾಮದಲ್ಲಿ ಊಟ ತಿಂಡಿಗೊ ಪರದಾಟ ನಡೆಸುತ್ತಿರುವಾಗ ನೆರವಿಗೆ ಧಾವಿಸಿದ ಸಾಲೂರು ಬೃಹನ್ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ಸಮುದಾಯದ ಮುಖಂಡ ಕೆ.ವಿ. ಮಾದೇಶ್, ಹಿರಿಯ ನಿವೃತ್ತ ಶಿಕ್ಷಕರಾದ ಪುಟ್ಟಣ್ಣ, ಮುರುಗ ಹಾಗೂ ಪುರಾಣಿ ಮಹಾದೇಶ್, ಸಿದ್ದರಾಜು, ತಂಡ ಹಾಗೂ ಕೊಂಗನೂರು ಗ್ರಾಮಸ್ಥರು ಬೇಡಗಂಪಣ ಸಮುದಾಯದ ಯುವಕರು ಪೂರ್ಣ ಸಹಕಾರದೊಂದಿಗೆ ದಾಸೋಹ ವ್ಯವಸ್ಥೆ ಕಲ್ಪಿಸುವ ಮೂಲಕ ಹಸಿವಿನಿಂದ ಬಳಲುತ್ತಿದ್ದ ಗ್ರಾಮದ ನಿವಾಸಿಗಳಿಗೆ ಹಸಿವು ಮುಕ್ತಗೊಳಿಸಿ ಮಾನವೀಯತೆ ಮೆರೆದ ಸಾಲೂರು ಬೃಹನ್ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಬೇಡಗಂಪಣ ಸಮುದಾಯ ರವರಿಗೆ ಗ್ರಾಮಸ್ಥರಿಂದ ಧನ್ಯವಾದ ತಿಳಿಸಿದ್ದಾರೆ.ದಾಸೋಹ ಸ್ಧಗಿತ: ಕಳೆದ 25 ದಿನಗಳಿಂದ ದಾಸೋಹ ವ್ಯವಸ್ಥೆಯನ್ನು ಗ್ರಾಮದಲ್ಲಿ ಹಸಿವಿನಿಂದ ಬಳಲುತ್ತಿದ್ದವರಿಗೆ ವ್ಯವಸ್ಥೆ ಕಲ್ಪಿಸಲಾಗಿತ್ತು ಜೈಲಿನಿಂದ ತಮ್ಮವರು ಬಿಡುಗಡೆಯಾಗಿ ಗ್ರಾಮಕ್ಕೆ ಬಂದಿರುವುದರಿಂದ ಮಹಿಳೆಯರು ಮನೆಗಳಲ್ಲೇ ತಮ್ಮವರಿಗೆ ಮನೆಗಳಲ್ಲೇ ಊಟದ ವ್ಯವಸ್ಥೆ ಮಾಡುತ್ತಿರುವುದರಿಂದ ಇಂದಿನಿಂದ ದಾಸೋಹ ವ್ಯವಸ್ಥೆ ಸ್ಥಗಿತಗೊಂಡಿದೆ.
ಇಂಡಿಗನತ್ತ ಗ್ರಾಮದಲ್ಲಿ ಏ. 26ರಂದು ನಡೆದ ಮತಗಟ್ಟೆ ಧ್ವಂಸ ಪ್ರಕರಣದಲ್ಲಿ 2 ಗ್ರಾಮಗಳ ಜನತೆ ಸಂಕಷ್ಟದಿಂದ ನರಳುತ್ತಿದ್ದಾರೆ ಹೀಗಾಗಿ ಅವಳಿ ಗ್ರಾಮಗಳಲ್ಲಿ ಆತಂಕವನ್ನು ದೂರ ಮಾಡಿ ಶಾಂತಿ ಸೌಹರ್ದತೆಯನ್ನು ಕಾಪಾಡುವ ನಿಟ್ಟಿನಲ್ಲಿ ಬೇಡಗಂಪಣ ಸಮುದಾಯ ಮುಂದಾಗಿದೆ.ಈ ಘಟನೆಯಾದ ನಂತರ ಎರಡು ಗ್ರಾಮಗಳ ಮುಖಂಡರ ಜೊತೆ ಸಂಪರ್ಕದಲ್ಲಿದ್ದಾರೆ ಮುಂದೆ ಇಂತಹ ಘಟನೆಗಳಿಗೆ ಅವಕಾಶ ನೀಡದಂತೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಬೇಡಗಂಪಣ ಸಮುದಾಯ ಮುಖಂಡರುಗಳು ಕಳೆದ 25 ದಿನಗಳಿಂದಲೂ ಸಹ ನಿರಂತರವಾಗಿ ಪ್ರಯತ್ನಗಳನ್ನು ಮಾಡುತ್ತಾ ಗ್ರಾಮವನ್ನು ಸಹಜ ಸ್ಥಿತಿಯತ್ತ ಕೊಂಡೊಯ್ಯುತ್ತಿರುವ ಸಮುದಾಯದ ಮುಖಂಡರು ಗ್ರಾಮಗಳಲ್ಲಿ ಶಾಂತಿ ನೆಲೆಸಲು ಸಹಕರಿಸಿದ ಸಹಕರಿಸುತ್ತಿರುವ ಎಲ್ಲರಿಗೂ ಕೃತಜ್ಞತೆ ತಿಳಿಸಿದ್ದಾರೆ.
ಮಕ್ಕಳ ಸ್ವಚ್ಛಂದ ಆಟ:ಇಂಡಿನತ್ತ ಗ್ರಾಮದಲ್ಲಿ ನಡೆದ ಪ್ರಕರಣದಿಂದ ಭಯಭೀತರಾಗಿದ್ದ ಗ್ರಾಮಸ್ಥರು ಮತ್ತು ಮಕ್ಕಳು ವಯೋವೃದ್ಧರೂ ಆತಂಕದ ನಡುವೆ ದಿನ ನೋಡುತ್ತಿದ್ದರು ಹೀಗಾಗಿ ಗ್ರಾಮದಲ್ಲಿ ಜೈಲು ಪಾಲಾಗಿದ್ದ ತಾಯಂದಿರು ಗ್ರಾಮಕ್ಕೆ ಕರಾಗೃಹದಿಂದ ಬಿಡುಗಡೆಯಾಗಿ ಬಂದ ನಂತರ ಮಕ್ಕಳು ಅಳುಕಿಲ್ಲದೆ ಶಾಲಾ ಆವರಣದಲ್ಲಿ ಆಟವಾಡುತ್ತಾ ಸಹಜ ಸ್ಥಿತಿಗೆ ಮರಳುತ್ತಿರುವ ಗ್ರಾಮದಲ್ಲಿ ಮನೆ ಮಠ ತೊರೆದು ಭಯ ಬೀತರಾಗಿ ಗ್ರಾಮವನ್ನೇ ತೊರೆದಿರುವ ತಮ್ಮವರಿಗಾಗಿ ಎದುರು ನೋಡುತ್ತಿರುವ ಗ್ರಾಮಸ್ಥರು .ಮೊದಲ ಮಳೆ: ಕಳೆದ ಒಂದು ವಾರದಿಂದ ತಾಲೂಕಿನ ವಿವಿಧಡೆ ಮಳೆಯಾಗುತ್ತಿದ್ದು, ಸೋಮವಾರ ರಾತ್ರಿ ಇಂಡಿಗನತ್ತ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮೊದಲ ಮಳೆ ಪ್ರಾರಂಭವಾಗಿದೆ ಇದರಿಂದಾಗಿ ಬರದಿಂದ ತತ್ತರಿಸಿದ್ದ ಇಲ್ಲಿನ ಜನಜಾನುವಾರುಗಳು ಮತ್ತು ಅರಣ್ಯದಂಚಿನಲ್ಲಿ ಬರುವುದರಿಂದ ಪ್ರಾಣಿ ಪಕ್ಷಿಗಳು ಸಹ ನಿಟ್ಟಿಸಿರು ಬಿಡುವಂತಾಗಿದೆ.