ಕನ್ನಡಪ್ರಭವ ವಾರ್ತೆ ಪಾಂಡವಪುರ
ಸಮಿತಿಯಿಂದ ಗಣೇಶೋತ್ಸವ ಪೂಜಾ ಕಾರ್ಯಕ್ರಮದಲ್ಲಿ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಭಕ್ತರು, ಸಾರ್ವಜನಿಕರು ಭಾಗವಹಿಸಿ ಭಕ್ತಿಭಾವ ಪ್ರದರ್ಶಿಸಿದರು.
ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರ ಪುತ್ರ ಸಿ.ಪಿ.ಶಿವರಾಜು ಭಾಗವಹಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು. ಇಂದಿನಿಂದ 48 ದಿನಗಳ ಕಾಲ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ನಿತ್ಯ ದೇವರಿಗೆ ವಿಶೇಷ ಪೂಜೆ ಪುನಸ್ಕಾರಗಳು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಿದ್ದಾರೆ.ಜೊತೆಗೆ ರಂಗೋಲಿ ಸ್ಪರ್ಧೆ, ಹೋಮಹವನ, ರಕ್ತದಾನ ಶಿಬಿರ, ಆರೋಗ್ಯ ಶಿಬಿರ, ಕಣ್ಣಿನ ತಪಾಸಣೆ ಶಿಬಿರ, ಹರಿಕಥೆ, ಜನಪದ ಗೀತೆ, ಯೋಗ, ರಸಮಂಜರಿ, ಭರತನಾಟ್ಯ, ಜನಪದ-ಭಾವಗೀತೆ, ಗಹನ ಸಂಗೀತ, ತತ್ವಪದಗಳು, ವಿವಿಧ ವೇಷಭೂಷಣ ಸ್ಪರ್ಧೆ, ರಸಮಂಜರಿ, ಚಲನಚಿತ್ರ ಪ್ರದರ್ಶನ, ಮ್ಯಾಜಿಕ್ ಶೋ ಮತ್ತು ಮಾತನಾಡುವ ಬೊಂಬೆ, ವೀಣಾವದನ ಹಾಗೂ ಗುರುವಂದನೆ, ಡ್ಯಾನ್ಸ್, ಅನ್ನ ಸಂತಪರ್ಣಣೆ ಸೇರಿದಂತೆ ನಿತ್ಯ ಹಲವು ಕಾರ್ಯಕ್ರಮಗಳು 48 ದಿನಗಳ ಕಾಲ ಸಂಜೆ ಸಾರ್ವಜನಿಕರಿಗೆ ಮನರಂಜನೆ ನೀಡಲಿವೆ.
ಈ ವೇಳೆ ಸಮಿತಿಯ ಹಿರಿಯರಾದ ಶ್ರೀಸುಬ್ರಮಣ್ಯಂ ಅವರ ನೇತೃತ್ವದಲ್ಲಿ ಯುವಕರು, ಭಕ್ತರು ಭಾಗವಹಿಸಿದ್ದರು.
ಹಲಗೂರು: ಮಠದ ಬೀದಿಯ ಬೃಹನ್ಮಠದಲ್ಲಿ ಸ್ವರ್ಣ ಗೌರಿಗೆ ಮುತ್ತೈದೆಯರು ಬಾಗಿನ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿ ಮುತ್ತೈದೆಯರಿಗೆ ಅರಿಶಿನ ಕುಂಕುಮ ನೀಡಿ ವಿಶೇಷವಾಗಿ ಪೂಜೆ ಸಲ್ಲಿಸಿದರು.ಶಿಂಷಾ ನದಿಯ ದಡದಲ್ಲಿ ಅರಸಿನದಿಂದ ತಯಾರಿಸಿದ ಸ್ವರ್ಣ ಗೌರಿಯನ್ನು ತಂದು ಹಲಗೂರಿನ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮುಖಾಂತರ ಬೃಹನ್ಮಠಕ್ಕೆ ತಂದಾಗ ಮುತ್ತೈದೆಯರು ಆರತಿ ಎತ್ತಿ ವಿಶೇಷ ಪೂಜೆ ಸಲ್ಲಿಸಿ ಸ್ವರ್ಣ ಗೌರಿಯನ್ನು ಬರಮಾಡಿಕೊಂಡರು.
ಈ ವೇಳೆ ಭಕ್ತಮಂಡಳಿ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.