ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಸ್ಥಳೀಯ ಮಾರುತಿ ನಗರದಲ್ಲಿರುವ ಶಿವ ಚಿದಂಬರ ದೇವಸ್ಥಾನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, 45 ದಿನಗಳು ಚಾತುರ್ಮಾಸ್ಯ ಮಹೋತ್ಸವ ಕಾರ್ಯಕ್ರಮ ಇದೇ ಶಿವ ಚಿದಂಬರ ದೇವಾಲಯದಲ್ಲಿ ಜರುಗಲಿದ್ದು, ವಿದ್ಯಾಕಣ್ವವಿರಾಜ ತೀರ್ಥ ಶ್ರೀಗಳ 7ನೇ ಚಾತುರ್ಮಾಸ್ಯ ಕಾರ್ಯಕ್ರಮ ಇದಾಗಿದೆ. 58 ವರ್ಷಗಳ ಹಿಂದೆ ಮುದ್ದೇಬಿಹಾಳ ಪಟ್ಟಣದಲ್ಲಿ ಪ್ರಪ್ರಥಮವಾಗಿ ಕಣ್ವಮಠದ ಪೀಠಾಧಿಪತಿ ವಿದ್ಯಾತಫೋನಿಧಿ ತೀರ್ಥ ಶ್ರೀಗಳು ಕಿಲ್ಲಾಗಲ್ಲಿಯ ಖಾದಿ ಗ್ರಾಮದ್ಯೋಗ ಚರಕದ ಕೋಣೆಯಲ್ಲಿ ಈ ಕಾರ್ಯಕ್ರಮ ಏರ್ಪಡಿಸಲಾಗಿತ್ತೆಂದರು.
ಚಾತುರ್ಮಾಸ್ಯ ಅವಧಿಯಲ್ಲಿ ಪ್ರತಿದಿನ ವಿಶೇಷ ಪೂಜೆ, ಹಸ್ತೋದಕ ಸೇವೆ, ತೀರ್ಥಪ್ರಸಾದ, ಶ್ರೀಗಳ ಪಾದಪೂಜೆ ಸಂಸ್ಥಾನ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ.ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ಭಕ್ತರಿಗೆ ವಸತಿ ವ್ಯವಸ್ಥೆ ಮಾಡಲಾಗುತ್ತದೆ. ಪಟ್ಟಣದ ಎಲ್ಲಾ ವಿಪ್ರ ಸಮಾಜದವರು ಮಾತ್ರವಲ್ಲದೆ ಸಮಸ್ತ ಹಿಂದೂ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಚಾತುರ್ಮಾಸ್ಯ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಆ.8ರಂದು ಯಲಗೂರು ಕೃಷ್ಣಾನದಿಯಲ್ಲಿ ಶ್ರೀಗಳವರಿಂದ ದಂಡೋಧಕ ಸ್ನಾನ ನಂತರ ಮುದ್ದೇಬಿಹಾಳ ರಾಘವೇಂದ್ರ ಸ್ವಾಮಿಗಳ ಮಠದಿಂದ ಶಿವ ಚಿದಂಬರ ದೇವಾಲಯದವರಗೆ ಭವ್ಯ ಪುರಪ್ರವೇಶ ಶೋಭಾಯಾತ್ರೆ ಬಳಿಕ ನಂತರ ಶ್ರೀಗಳಿಂದ ಚಾತುರ್ಮಾಸ್ಯ ಸಂಕಲ್ಪ ಜರುಗಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ವಾಸುದೇವ ಸಾಲೋಡಗಿ, ಸುಭಾಷ ಕುಲಕರ್ಣಿ, ಸುರೇಶ ಕುಲಕರ್ಣಿ, ಪುಟ್ಟು ಕುಲಕರ್ಣಿ, ದಿನೇಶ ದೇಶಪಾಂಡೆ, ಶ್ರೀಧರ ದೇಶಪಾಂಡೆ, ಪ್ರದೀಪ ಕುಲಕರ್ಣಿ, ಹಣಮಂತರಾವ ಕುಲಕರ್ಣಿ, ಗುಂಡಭಟ್ ಜೋಷಿ, ಕೃಷ್ಣಾಜೀ ಕುಲಕರ್ಣಿ, ಪ್ರಶಾಂತ ಸರಾಪ್, ಪ್ರಕಾಶ ದೇಶಪಾಂಡೆ, ಸುಹಾಸ್ ದೇಶಪಾಂಡೆ ಉಪಸ್ಥಿತರಿದ್ದರು.