ಮುಂಜಾನೆ ಶಿವಪೂಜೆ ಮುಗಿಸಿ ಮುಂಜಾನೆ 9 ಗಂಟೆಯೊಳಗೆ ಬಹುತೇಕ ಮಠಾಧೀಶರು ಮತದಾನ ಮಾಡಿದ್ದು ವಿಶೇಷವಾಗಿತ್ತು. ಮತಗಟ್ಟೆಗಳಲ್ಲಿ ಸ್ವಾಮೀಜಿಗಳು ಆಗಮಿಸುತ್ತಿದ್ದಂತೆ ಸರದಿಯಲ್ಲಿ ನಿಂತಿದ್ದ ಮತದಾರರು ಸಂತರಿಗೆ ಪಾದಮುಟ್ಟಿ ನಮಿಸಿದರು.
ದಾಬಸ್‌ಪೇಟೆ: ಲೋಕಸಭಾ ಚುನಾವಣೆಗೆ ನೆಲಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ವಿವಿಧ ಮಠಗಳ ಮಠಾಧೀಶರು ತಮ್ಮ ವ್ಯಾಪ್ತಿಯ ಮತ ಕೇಂದ್ರಗಳಲ್ಲಿ ಮತದಾನ ಮಾಡಿ ತಮ್ಮ ಹಕ್ಕು ಚಲಾಯಿಸಿ ಎಲ್ಲರ ಗಮನ ಸೆಳೆದರು.
ಮುಂಜಾನೆ ಶಿವಪೂಜೆ ಮುಗಿಸಿ ಮುಂಜಾನೆ 9 ಗಂಟೆಯೊಳಗೆ ಬಹುತೇಕ ಮಠಾಧೀಶರು ಮತದಾನ ಮಾಡಿದ್ದು ವಿಶೇಷವಾಗಿತ್ತು. ಮತಗಟ್ಟೆಗಳಲ್ಲಿ ಸ್ವಾಮೀಜಿಗಳು ಆಗಮಿಸುತ್ತಿದ್ದಂತೆ ಸರದಿಯಲ್ಲಿ ನಿಂತಿದ್ದ ಮತದಾರರು ಸಂತರಿಗೆ ಪಾದಮುಟ್ಟಿ ನಮಿಸಿದರು. ಇನ್ನು ಮತಕೇಂದ್ರದ ಅಧಿಕಾರಿಗಳು ಸಾಧುಸಂತರಿಗೆ ಕೈಮುಗಿದು ನಮಿಸಿ ಮತದಾನಕ್ಕೆ ಅವಕಾಶ ಮಾಡಿಕೊಟ್ಟರು. ಮೇಲಣಗವಿ ಮಠದ ಡಾ.ಶ್ರೀ.ಮಲಯ ಶಾಂತಮುನಿ ದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಗ್ರಾಮಾಭಿವೃದ್ಧಿಗೆ ಶ್ರಮಿಸುವ ಯೋಗ್ಯ ವ್ಯಕ್ತಿಗೆ ಮತದಾನ ಮಾಡುವಂತೆ ಸಲಹೆ ನೀಡಿದರು.ಶಿವಗಂಗೆಯ ಮೇಲಣಗವಿ ಮಠದ ಡಾ.ಶ್ರೀ ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ, ಹೊನ್ನಮ್ಮಗವಿ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಶ್ರೀಗಳು ಶಿವಗಂಗೆ ಪ್ರಾಥಮಿಕ ಶಾಲೆಯಲ್ಲಿ, ಪಾಲನಹಳ್ಳಿ ಮಠದ ಶ್ರೀ ಸಿದ್ದರಾಜು ಸ್ವಾಮೀಜಿ ಪಾಲನಹಳ್ಳಿ ಸರ್ಕಾರಿ ಶಾಲೆಯಲ್ಲಿ ಮತದಾನ ಮಾಡಿದರು. ಕಂಬಾಳು ಮಠದ ಚನ್ನಬಸವ ಶಿವಾಚಾರ್ಯ ಸ್ವಾಮೀಜಿ ಕಂಬಾಳು ಶಾಲೆಯಲ್ಲಿ, ವನಕಲ್ಲು ಮಠದ ಬಸವರಮಾನಂದ ಶ್ರೀಗಳು ಹೆಗ್ಗುಂದ ಶಾಲೆಯಲ್ಲಿ ಹಕ್ಕು ಚಲಾಯಿಸಿದರು. ಸಿದ್ದಲಿಂಗಸ್ವಾಮೀಜಿ ನೆಲಮಂಗಲಕ್ಕೆ ತೆರಳಿ ಮತದಾನ ಮಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.