ಬೈಂದೂರು: ಸಾಧಕರ ಸಾಧನೆ ಕಿರಿಯರಿಗೆ ಪ್ರೇರಣೆಯಾಗಬೇಕು. ಗ್ರಾಮೀಣ ಭಾಗದಲ್ಲಿ ವಿದ್ಯಾಭ್ಯಾಸ ಮಾಡಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ ವ್ಯಕ್ತಿಗಳನ್ನು ಶಾಲೆಗೆ ಕರೆಸಿ ಕಾರ್ಯಕ್ರಮಗಳನ್ನು ಮಾಡಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಬೇಕು ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು.
ಈ ಸಂದರ್ಭದಲ್ಲಿ ಮೂಗೇರಿ ಸಮಷ್ಟಿ ಪುರಸ್ಕಾರ ಶಾಶ್ವತ ಫಲಕವನ್ನು ಕೆ. ಪುಂಡಲೀಕ್ ನಾಯಕ್ ಅವರಿಗೆ ನೀಡಲಾಯಿತು. ಶಾಲಾ ಮಕ್ಕಳಿಗೆ ರಂಗೋಲಿ ಪ್ರಾತ್ಯಕ್ಷಿಕೆ ಮಾಡಿ ರಂಗೋಲಿ ಸ್ಪರ್ಧೆಯನ್ನು ಡಾ. ಭಾರತಿ ಮರವಂತೆ ನೆರವೇರಿಸಿದರು.ಕಾರ್‍ಯಕ್ರಮದಲ್ಲಿ ಜೆಸಿಐ ಬೈಂದೂರು ಸಿಟಿ ಅಧ್ಯಕ್ಷ ಚೈತ್ರಾ ಸತೀಶ್, ಅರಣ್ಯ ಇಲಾಖೆ ಗಸ್ತು ಅರಣ್ಯಪಾಲಕ ವಿಜಯ್, ಶಾಲಾಭಿವೃದ್ಧಿ ಉಸ್ತುವಾರಿ ಸಮಿತಿ ಅಧ್ಯಕ್ಷ ಭಾಸ್ಕರ್ ದೇವಾಡಿಗ ಉಪಸ್ಥಿತರಿದ್ದರು. ವೀಣಾ ಹೆಗಡೆ ಮತ್ತು ಜಯ ನಿರೂಪಿಸಿ, ಶಾಲಾ ಸಹಶಿಕ್ಷಕಿ ಶಶಿರೇಖಾ ವಂದಿಸಿದರು.ಸಮಾರೋಪ ಸಮಾರಂಭದಲ್ಲಿ ಚಿಂತಕಿ ಡಾ. ರೇಖಾ ಬನ್ನಾಡಿ ಮತ್ತು ವಿಮರ್ಶಕ ರಾಜೀವ ನಾಯಕ್ ಉಪನ್ಯಾಸ ನೀಡಿದರು. ಸಾಹಿತಿ ಗಣೇಶ್ ಅಡಿಗರ ಕವಿತ್ವದ ಬಗ್ಗೆ ಮಾತನಾಡಿದರು. ಹಿರಿಯ ಕೃಷಿಕ ಭದ್ರಪ್ಪ ಗೌಡ ಕವಿ ಗೋಪಾಲಕೃಷ್ಣ ಅಡಿಗರ ಹಾಡುಗಳನ್ನು ಹಾಡಿದರು. ಡಾ. ಶಿವರಾಮ ಕಾರಂತ ಟ್ರಸ್ಟ್ ಅಧ್ಯಕ್ಷ ಡಾ. ಗಣನಾಥ ಎಕ್ಕಾರು ಅವರು ಸಮಾರಂಭದ ಆಶಯ ನುಡಿಗಳನ್ನಾಡಿದರು. ಕಾಲೇಜಿನ ಪ್ರಿನ್ಸಿಪಾಲ್ ವೆಂಕಟರಮಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಚಂದ್ರಶೇಖರ ಸ್ವಾಗತಿಸಿದರು, ಕಾಲೇಜಿನ ಉಪಪ್ರಾಂಶುಪಾಲ ಪಿ. ಪದ್ಮನಾಭ, ಡಾ. ಶಿವರಾಮ ಕಾರಂತ ಟ್ರಸ್ಟ್ ಡಾ. ಚೇತನ್ ಶೆಟ್ಟಿ ಕೋವಾಡಿ, ಅಡಿಗ ಟ್ರಸ್ಟ್ ಪ್ರವರ್ತಕ ಜಯರಾಮ ಉಪಸ್ಥಿತರಿದ್ದರು. ಉಪನ್ಯಾಸಕರಾದ ಸತೀಶ್ ನಿರೂಪಿಸಿದರು. ಭರತ್ ವಂದಿಸಿದರು.