ರೋಣ: ಕೂಡಲಸಂಗಮ ಪಂಚಮಸಾಲಿ ಪೀಠದ ಜ. ಬಸವ ಜಯ ಮೃತ್ಯುಂಜಯ ಶ್ರೀಗಳನ್ನು ಉಚ್ಚಾಟಿಸಿದ ಕ್ರಮ ತೀವ್ರ ಖಂಡನೀಯವಾಗಿದೆ ಎಂದು ಲಿಂಗಾಯತ ಪಂಚಮಸಾಲಿ ಸಮಾಜದ ತಾಲೂಕು ಸಮಿತಿ ಹಾಗೂ ರೋಣ ತಾಲೂಕು ವೀರಶೈವ ಪಂಚಾಚಾರ್ಯ ವಿವಿಧೋದ್ದೇಶ ಸಹಕಾರಿ ಸಂಘ ವತಿಯಿಂದ ಗುರುವಾರ ಸಂಘದ ಸಭಾಭವನದಲ್ಲಿ ಜರುಗಿದ ಸಭೆಯಲ್ಲಿ ಖಂಡನಾ ನಿರ್ಣಯ ಕೈಗೊಳ್ಳಲಾಯಿತು.
ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರುಗಳಾದ ಬಸವ ಜಯ ಮೃತ್ಯಂಜಯ ಶ್ರೀಗಳನ್ನು ಉಚ್ಛಾಟಿಸಿದ ಟ್ರಸ್ಟ್ ಕಮೀಟಿ ಕ್ರಮವನ್ನು ಖಂಡಿಸಲಾಗುವುದು. ಶ್ರೀಗಳನ್ನು ಉಚ್ಛಾಟಿಸಿದ ಟ್ರಸ್ಟ್ ಕಮಿಟಿಯು ಭವಿಷ್ಯದಲ್ಲಿ ಕೈಗೊಳ್ಳುವ ಯಾವುದೇ ಕ್ರಮಗಳಿಗೆ ಬದ್ಧರಾಗಿರುವುದಿಲ್ಲ. ಟ್ರಸ್ಟ್ ಕಮಿಟಿಯು ತಾಲೂಕುಗಳಲ್ಲಿ ಯಾವುದೇ ಕಾರ್ಯ ಚಟುವಟಿಕೆ ಕೈಗೊಂಡರೆ ಬಹಿಷ್ಕರಿಸಲಾಗುವುದು ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು.ಪ್ರಸ್ತುತ ರಾಜ್ಯ ಸರ್ಕಾರ ನಡೆಸುತ್ತಿರುವ ಆರ್ಥಿಕ, ಸಾಮಾಜಿಕ ಜಾತಿ ಗಣತಿ ಬಗ್ಗೆ ಚರ್ಚೆ ನಡೆಸಿ ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಲಾಯಿತು. ಧರ್ಮದ ಕಾಲಂನಲ್ಲಿ ಹಿಂದೂ ಎಂದು, ಜಾತಿ ಕಾಲಂನಲ್ಲಿ ಲಿಂಗಾಯತ ಪಂಚಮಸಾಲಿ (ಕೋಡ್ ಸಂಖ್ಯೆ A 0868) ಎಂದೂ ಉಪಜಾತಿ ಕಾಲಂ ನಲ್ಲಿ ಪಂಚಮಸಾಲಿ ಎಂದು ತುಂಬಬೇಕು. ಇದೆ ರೀತಿ ಸಮಾಜ ಬಾಂಧವರು ಗಣತಿಯಲ್ಲಿ ದಾಖಲೆ ಸೇರಿಸಬೇಕೆಂದು ಕರೆ ನೀಡಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಪಂಚಮಸಾಲಿ ಸಮಾಜ ಮುಖಂಡ ವಿಶ್ವನಾಥ ಜಿಡ್ಡಿಬಾಗಿಲ ವಹಿಸಿದ್ದರು. ಸಭೆಯಲ್ಲಿ ಪಂಚಮಸಾಲಿ ಸಮಾಜ ಮುಖಂಡರಾದ ಸುಭಾಸ ಹೊಸಂಗಡಿ, ಡಾ. ಕೆ.ಬಿ. ಧನ್ನೂರ, ಅನೀಲಕುಮಾರ ಪಲ್ಲೇದ, ಪ್ರಭು ಮೇಟಿ, ಶಿವಾನಂದ ಜೆಡ್ಡಿಬಾಗಿಲ, ಎಂ.ಎಂ. ಪಲ್ಲೇದ, ಲಿಂಗರಾಜ ಪಾಟೀಲ, ಬಸವರಾಜ ಪಲ್ಲೇದ, ಶಿವಾನಂದ ಬೂದಿಹಾಳ, ಅಶೋಕ ಬೇವಿನಕಟ್ಟಿ, ಅಶೋಕ ಪವಾಡಶೆಟ್ಟಿ, ಶ್ರೀಶೈಲ ಇಟಗಿ, ಬಸನಗೌಡ ಮೆಣಸಗಿ, ಗಂಗಾಧರ ಕೊಟಗಿ, ವೀರೇಶ ದೊಡ್ಡಣ್ಣವರ, ಈಶಣ್ಣ ಹೆರಕಲ್ಲ, ವೀರಪ್ಪ ಚಿನ್ನೂರ, ಮಹಾಂತೇಶ ಜಿಡ್ಡಿ ಬಾಗಿಲ, ಮಂಜುನಾಥ ಸಂಗಟಿ, ಶರಣಪ್ಪ ಸೊಬರದ ಹಾಜರಿದ್ದರು.