ನನ್ನ ವಿರುದ್ಧದ ಆರೋಪ ಸತ್ಯಕ್ಕೆ ದೂರವಾದುದು: ಕಾಂಗ್ರೆಸ್‌ ಮುಖಂಡ ಮೊಹಮ್ಮದ್ ಮುಜಾಹಿದ್

KannadaprabhaNewsNetwork |  
Published : Jan 26, 2025, 01:33 AM IST
24ಕೆಡಿವಿಜಿ2-ದಾವಣಗೆರೆಯಲ್ಲಿ ಶುಕ್ರವಾರ ಯುವ ಕಾಂಗ್ರೆಸ್ ಮುಖಂಡ ಮೊಹಮ್ಮದ್ ಮುಜಾಹಿದ್ ಪಾಾ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ದಾವಣಗೆರೆ ಪಾಲಿಕೆ 22ನೇ ವಾರ್ಡ್‌ಗೆ 2021ರ ಉಪ ಚುನಾವಣೆಯಲ್ಲಿ ಬಿಜೆಪಿಯವರಿಂದ ನಾನು ಹಣ ತೆಗೆದುಕೊಂಡಿದ್ದಾಗಿ ಕಾಂಗ್ರೆಸ್, ಬಿಜೆಪಿಯ ಕೆಲ ಮುಖಂಡರು ಹೇಳುತ್ತಿರುವುದು ಸತ್ಯಕ್ಕೆ ದೂರವಾದ ಸಂಗತಿಯಾಗಿದೆ ಎಂದು ಯುವ ಕಾಂಗ್ರೆಸ್‌ ಮುಖಂಡ ಮೊಹಮ್ಮದ್ ಮುಜಾಹಿದ್ ಪಾಷ ಹೇಳಿದರು.

ಆರೋಪ ಸಾಬೀತುಪಡಿಸಿದರೆ ₹2 ಲಕ್ಷ ಕೊಟ್ಟು, ರಾಜಕೀಯದಿಂದ ನಿವೃತ್ತಿ

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ಪಾಲಿಕೆ 22ನೇ ವಾರ್ಡ್‌ಗೆ 2021ರ ಉಪ ಚುನಾವಣೆಯಲ್ಲಿ ಬಿಜೆಪಿಯವರಿಂದ ನಾನು ಹಣ ತೆಗೆದುಕೊಂಡಿದ್ದಾಗಿ ಕಾಂಗ್ರೆಸ್, ಬಿಜೆಪಿಯ ಕೆಲ ಮುಖಂಡರು ಹೇಳುತ್ತಿರುವುದು ಸತ್ಯಕ್ಕೆ ದೂರವಾದ ಸಂಗತಿಯಾಗಿದೆ ಎಂದು ಯುವ ಕಾಂಗ್ರೆಸ್‌ ಮುಖಂಡ ಮೊಹಮ್ಮದ್ ಮುಜಾಹಿದ್ ಪಾಷ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಒಂದು ವೇಳೆ ಅಂತಹವರು ಆರೋಪ ಸಾಬೀತುಪಡಿಸಿದರೆ ನಾನೇ 2 ಲಕ್ಷ ರು. ಬಹುಮಾನ ನೀಡಿ, ರಾಜಕೀಯದಿಂದಲೇ ನಿವೃತ್ತಿಯಾಗುವೆ ಎಂದು ಸವಾಲು ಹಾಕಿದರು.

ಯಲ್ಲಮ್ಮ ನಗರ ವಾರ್ಡ್‌ನ ಉಪ ಚುನಾವಣೆ ಮಾರ್ಚ್ 2021ರಲ್ಲಿ ನಡೆದಿತ್ತು. ನಾನು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದು, ಆಗ ಶಿವನಹಳ್ಳಿ ರಮೇಶ್‌ರ ಷಡ್ಯಂತ್ರ, ದ್ವೇಷ ರಾಜಕಾರಣದಿಂದ ನನಗೆ ಕಾಂಗ್ರೆಸ್ ಬಿ ಫಾರಂ ಸಿಗಲಿಲ್ಲ. ಹಾಗಾಗಿ ಪಕ್ಷೇತರನಾಗಿ ಸ್ಪರ್ಧಿಸಿದ್ದೆ ಎಂದರು.

ಯಲ್ಲಮ್ಮ ನಗರ ವಾರ್ಡ್‌ನ ಹಿರಿಯರು, ಮುಖಂಡರು, ಯುವಕರ ಸಲಹೆಯಂತೆ ನಾನು ಉಪ ಚುನಾವಣೆಗೆ ಪಕ್ಷೇತರನಾಗಿ ಸ್ಪರ್ಧಿಸಿ, ಸುಮಾರು 978 ಮತ ಗಳಿಸಿದ್ದೆ. ಈ ಮೂಲಕ ಜನರು ನನಗೆ ಧೈರ್ಯ ತುಂಬಿದ್ದರು. ಆದರೆ, ಅಂದಿನ ಚುನಾವಣೆ ಫಲಿತಾಂಶ ಬಂದ ನಂತರ ಸಾಕಷ್ಟು ಆರೋಪಗಳನ್ನು ನನ್ನ ಮೇಲೆ ಮಾಡಿ, ತೇಜೋವಧೆ ಸುರು ಮಾಡಿದರು. ಇಂದಿಗೂ ನನ್ನ ಧೈರ್ಯ ಕುಗ್ಗಿಸುವ ಕೆಲಸವನ್ನು ಕಾಂಗ್ರೆಸ್‌-ಬಿಜೆಪಿಯ ಕೆಲ ಮುಖಂಡರು ಮಾಡುತ್ತಲೇ ಇದ್ದಾರೆ ಎಂದು ಆರೋಪಿಸಿದರು.

ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದವರಿಗೆ ಅಂದೇ ಸವಾಲು ಹಾಕಿದ್ದೆ. ಈಗಲೂ ಆರೋಪ ಮಾಡುತ್ತಿರುವವರಿಗೆ ಅದೇ ಮಾತು ಹೇಳುವೆ. ನನ್ನ ವಿರುದ್ಧ ಕೆಲ ರಾಜಕೀಯ ವಿರೋಧಿಗಳು ಅಪಪ್ರಚಾರ ಮಾಡುತ್ತಿರುವುದು ನಿರಂತರ ನನಗೂ ಕೇಳಿ ಬರುತ್ತಿದೆ. ಸಾಮಾನ್ಯ, ಮಧ್ಯಮ ವರ್ಗದ ಕುಟುಂಬದ ಹಿನ್ನೆಲೆ ನನ್ನದು. ನಾನು ರಾಜಕೀಯವಾಗಿ ಬೆಳೆಯುವುದನ್ನು ಸಹಿಸಲಾಗದೇ ಅಪಪ್ರಚಾರ ಮಾಡುತ್ತಿದ್ದಾರೆ. ನಾನು ಬಿಜೆಪಿಯಿಂದ ಹಣ ಪಡೆದಿದ್ದಾಗಿ ದುಗ್ಗಮ್ಮನ ಗುಡಿಯಲ್ಲಿ ಗಂಟೆ ಹೊಡೆದು, ದರ್ಗಾದಲ್ಲಿ ಆಣೆ ಮಾಡಿ ಎಂದು ಮುಜಾಹಿದ್ ಪಾಷಾ ಹೇಳಿದರು.

ಕಾಂಗ್ರೆಸ್ ಪಕ್ಷದ ಕಿಸಾನ್ ಸೆಲ್‌ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಪ್ರವೀಣಕುಮಾರ ಯಾದವ್‌, ಸೈಯದ್‌ ಅಫ್ರು, ಮಲ್ಲಿಕ್ ರಿಯಾನ್‌, ಜಿಲಾನಿ ಇತರರು ಇದ್ದರು.

PREV

Recommended Stories

ರಾಜ್ಯದಲ್ಲಿ 3 ದಿನ ಮಳೆ : 5 ಜಿಲ್ಲೆ ಯೆಲ್ಲೋ ಅಲರ್ಟ್‌
180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ