ಕನ್ನಡಪ್ರಭ ವಾರ್ತೆ ಪಾಂಡವಪುರ
ಪಟ್ಟಣದ ಮನ್ಮುಲ್ ಉಪವ್ಯವಸ್ಥಾಪಕ ಕಚೇರಿಯಲ್ಲಿ ನಡೆದ ರಾಸು ವಿಮೆ, ರೈತ ಕಲ್ಯಾಣ ಟ್ರಸ್ಟ್, ಕಟ್ಟಡ ನಿಧಿ ಹಾಗೂ ಹಾಲು ಕರೆಯುವ ಯಂತ್ರದ ಸಬ್ಸಡಿ ಹಣದ ಅಂದಾಜು 19.03 ಲಕ್ಷ ಮೊತ್ತದ ಚೆಕ್ ವಿತರಿಸಿ ಮಾತನಾಡಿದರು.
ರೈತರು ರಾಸುಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸಬೇಕು. ಅಕಾಲಿಕ ಮರಣಕ್ಕೆ ತುತ್ತಾಗುವ ರಾಸುಗಳಿಗೆ ವಿಮೆ ಮಾಡಿಸಿದ್ದರೆ ಮಾತ್ರ ಪರಿಹಾರ ದೊರೆಯುತ್ತದೆ. ಇಲ್ಲವಾದರೆ ನಯಾಪೈಸೆ ಪರಿಹಾರ ಸಿಗುವುದಿಲ್ಲ. ಸಾವಿರಾರು ರು.ಕೊಟ್ಟು ಹಸು ಖರೀದಿಸಿ ರಾಸುಗಳಿಗೆ ವಿಮೆ ಮಾಡಿಸದಿದ್ದರೆ ನಷ್ಟವಾಗುತ್ತದೆ. ಹಾಗಾಗಿ ಕಡ್ಡಾಯವಾಗಿ ವಿಮೆ ಮಾಡಿಸಿ ರೈತರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಆಡಳಿತ ಮಂಡಳಿಯಿಂದ ಚರ್ಚಿಸಿ 60 ಸಾವಿರ ಇದ್ದ ವಿಮೆ ಮೊತ್ತವನ್ನು 85 ಸಾವಿರಕ್ಕೆ ಏರಿಕೆ ಮಾಡಿದ್ದೇವೆ. ಏಪ್ರಿಲ್ ತಿಂಗಳ ನಂತರ ಈ ಯೋಜನೆ ಅನುಷ್ಠಾನಗೊಳ್ಳಲಿದೆ ಎಂದರು.ಉಪ ವ್ಯವಸ್ಥಾಪಕ ಆರ್.ಪ್ರಸಾದ್ ಮಾತನಾಡಿ, ಬೇಸಿಗೆ ಕ್ರಮಿಸುತ್ತಿರುವುದರಿಂದ ರೈತರು ಹೆಚ್ಚಿನ ಆಸಕ್ತಿಯಿಂದ ಹಸುಗಳ ಸಾಕಾಣಿಕೆ ಮಾಡಬೇಕು. ಬೇಸಿಗೆಯಲ್ಲಿ ಸಾಧ್ಯವಾದಷ್ಟು ರಾಸುಗಳನ್ನು ನೆರಳಿನಲ್ಲಿ ನಿರ್ವಹಿಸಬೇಕು. ಹಸಿರು ಮೇವು, ರಸಮೇವು ನಿರ್ವಹಣೆಯ ಕಡೆಗೆ ಹೆಚ್ಚಿನ ಗಮನಹರಿಸುವ ಜತೆಗೆ ವೈಜ್ಞಾನಿಕವಾಗಿ ರಾಸುಗಳ ನಿರ್ವಹಣೆ ಮಾಡಬೇಕೆಂದು ತಿಳಿಸಿದರು.
ಇದೇ ವೇಳೆ ರಾಸು ವಿಮೆ ಯೋಜನೆಯಲ್ಲಿ 15.55 ಲಕ್ಷ ರು., ಕಟ್ಟಡ ಅನುದಾನ 1.35 ಲಕ್ಷ ರು. ಹಾಗೂ ಹಾಲು ಕರೆಯುವ ಯಂತ್ರದ 2.85 ಲಕ್ಷ ರು. ಮೌಲ್ಯದ ಚೆಕ್‌ಗಳನ್ನು ಫಲಾನುಭವಿಗಳಿಗೆ ವಿತರಣೆ ಮಾಡಲಾಯಿತು.ಸಭೆಯಲ್ಲಿ ಮಾರ್ಗವಿಸ್ತರ್ಣಾಧಿಕಾರಿಗಳಾದ ಉಷಾ, ಪ್ರಜ್ವಲ್‌ಗೌಡ, ಹಾಲು ಮಾರಾಟ ಅಧಿಕಾರಿ ಶಶಿಕಲಾ, ಟೆಕ್ನಿಷಿಯನ್ ಆನಂದ್ ಸೇರಿದಂತೆ ಹಲವರು ಇದ್ದರು.