- ಶ್ರೀ ಬಸವೇಶ್ವರ ಸ್ವಾಮಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಧಾರ್ಮಿಕ ಸಭೆ
ಕನ್ನಡಪ್ರಭ ವಾರ್ತೆ ಜಗಳೂರು
ಶಿವನ ಪರಂಪರೆ ಅತ್ಯಂತ ಅರ್ಥಪೂರ್ಣವಾಗಿದ್ದು, ಪ್ರತಿಯೊಂದು ಕುಟುಂಬದಲ್ಲೂ ಶಿವನಲ್ಲಿರುವ ಗುಣಗಳು ಹಾಗೂ ಸಂಬಂಧಗಳು ಇರಬೇಕು. ಕೈಲಾಸದಲ್ಲಿ ಶಿವ ಗಟ್ಟಿಯಾಗಿ ಇರುವುದರಿಂದ ಎಲ್ಲವೂ ಸರಿಹೋಗುತ್ತದೆ ಎಂದು ಕಣ್ವಕುಪ್ಪೆ ಗವಿ ಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.ತಾಲೂಕಿನ ಕೆಳಗೋಟೆ ಗ್ರಾಮದಲ್ಲಿ ಸೋಮವಾರ ಆಯೋಜಿಸಿದ್ದ ಶ್ರೀ ಬಸವೇಶ್ವರ ಸ್ವಾಮಿಯ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಧಾರ್ಮಿಕ ಸಭೆ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಗ್ರಾಮಕ್ಕೆ ಆಗಮಿಸಿದ ಶ್ರೀಗಳನ್ನು ಕೆಳಗೋಟೆ ಗ್ರಾಮಸ್ಥರು ಅತ್ಯಂತ ವಿಜೃಂಭಣೆಯಿಂದ ಸ್ವಾಗತಿಸಿದರು. ದಾರಿಯುದ್ದಕ್ಕೂ ಹೂವು ತೂರಿ, ನೀರೆರೆದು ಭಕ್ತಿ ಸಮರ್ಪಿಸಲಾಯಿತು. ನೂರಾರು ಮಹಿಳೆಯರು ಪೂರ್ಣಕುಂಭ ಹೊತ್ತು ಸಾಗಿದರೆ, ವಿವಿಧ ಕಲಾತಂಡಗಳು ಮೆರವಣಿಗೆಗೆ ಮೆರಗು ನೀಡಿದವು.
ಗ್ರಾಮದ ಮುಖಂಡರಾದ ಗೌಡ್ರು ಗುರುಸಿದ್ದಪ್ಪ, ವಕೀಲ ಸಂಘದ ಅಧ್ಯಕ್ಷ ಡಿ.ವಿ. ನಾಗಪ್ಪ, ನಲ್ಲಿಕಟ್ಟೆ ನಾಗಣ್ಣ, ಚನ್ನಬಸಪ್ಪ, ಗುರುಮೂರ್ತಪ್ಪ, ಕಲವರ್ ರಾಜಣ್ಣ, ಶಿಕ್ಷಕ ಕಲ್ಲೇಶ್, ಗೌಡ್ರು ಬಸವರಾಜ್, ಗೌಡ್ರು ಪ್ರಕಾಶ್, ಅಹಮದ್ ಅಲಿ, ಬಸವನಗೌಡ, ಎಂ.ಪಿ. ನಾಗರಾಜ್, ಚಿಂತಪ್ಪ, ಯಲ್ಲಪ್ಪ, ಚಂದ್ರಪ್ಪ, ಮಡಿವಾಳ ಚೌಡಪ್ಪ, ರವಿಕುಮಾರ್, ಅಂಚೇರ್ ಮಹೇಶ್, ಭಕ್ತರು ಉಪಸ್ಥಿತರಿದ್ದರು.
(ಟಾಪ್ ಕೋಟ್) ಕೆಳಗೋಟೆ ಗ್ರಾಮವು ಕಣ್ವಕುಪ್ಪೆ ಗವಿಮಠದ ಹೆಬ್ಬಾಗಿಲಿದ್ದಂತೆ. ಮಠ ಹುಟ್ಟಿದಾಗಿನಿಂದಲೂ ಈ ಗ್ರಾಮದ ಭಕ್ತರೊಂದಿಗೆ ಅವಿನಾಭಾವ ಸಂಬಂಧವಿದೆ. ಸಂಕ್ರಾಂತಿ ರಥೋತ್ಸವದ ತೇರಿನ ಗಾಲಿಗಳಿಗೆ ಎಣ್ಣೆ ಹಾಕುವುದು ಹಾಗೂ ಒಂದು ಗಾಲಿಯ ಸೇವೆಯನ್ನು ಕೆಳಗೋಟೆ ಗ್ರಾಮಕ್ಕೆ ಮೀಸಲಿಡಲಾಗಿದೆ. ಇಲ್ಲಿನ ಭಕ್ತರು ಇಂದಿಗೂ ಆ ಶ್ರದ್ಧೆ ಉಳಿಸಿಕೊಂಡು ಬಂದಿದ್ದಾರೆ.
- - -