ಜನವಿರೋಧಿ ಸರ್ಕಾರವನ್ನು ಕಿತ್ತುಹಾಕಬೇಕು

KannadaprabhaNewsNetwork |  
Published : Apr 06, 2025, 01:53 AM IST
5ಕೆಬಿಪಿಟಿ.1.ಬಂಗಾರಪೇಟೆ ಪಟ್ಟಣದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಮಾಡಿದರು. | Kannada Prabha

ಸಾರಾಂಶ

ಸರ್ಕಾರ ಕೂಡಲೇ ಏರಿಸಿರುವ ದರಗಳನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ಹೋಬಳಿ ಮಟ್ಟದಲ್ಲಿಯೂ ಹೋರಾಟಗಳನ್ನು ನಡೆಸಲಾಗುವುದು. ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಜನಪರ ಆಡಳಿತ ನೀಡದೆ ಭ್ರಷ್ಟಾಚಾರದಲ್ಲಿ ತೊಡಗಿದೆ. ಕ್ಷೇತ್ರದಲ್ಲಿಯೂ ಸಹ ಕೆಲ ಅಧಿಕಾರಿಗಳು ಸರ್ಕಾರದ ಹಾಗೂ ಶಾಸಕರ ಕೈಗೊಂಬೆಗಳಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಗ್ಯಾರಂಟಿ ಹೆಸರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಲ್ಲಿ ಬೆಲೆ ಏರಿಕೆ ಮೂಲಕ ಕಸಿಯುತ್ತಿದೆ. ಇಂತಹ ಜನವಿರೋಧಿ ಕಾಂಗ್ರೆಸ್‌ ಸರ್ಕಾರವನ್ನು ಬೇರುಮಟ್ಟದಿಂದ ಕಿತ್ತಾಕಬೇಕೆಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ವಿ.ಮಹೇಶ್ ಹೇಳಿದರು.ಪಟ್ಟಣದ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅ‍ವರು, ರಾಜ್ಯ ಸರ್ಕಾರ ಅಗತ್ಯ ವಸ್ತುಗಳ ಬೆಲೆಗಳನ್ನು ಸದ್ದಿಲ್ಲದೆ ಏರಿಸುವ ಮೂಲಕ ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬಿಸಿ ಮುಟ್ಟಿಸಿ ಆರನೇ ಗ್ಯಾರಂಟಿಯಾಗಿ ನೀಡಿದೆ ಎಂದು ಟೀಕಿಸಿದರು.

ಹದಗೆಟ್ಟ ಆಡಳಿತ ಯಂತ್ರ

ಸರ್ಕಾರ ಕೂಡಲೇ ಏರಿಸಿರುವ ದರಗಳನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ಹೋಬಳಿ ಮಟ್ಟದಲ್ಲಿಯೂ ಹೋರಾಟಗಳನ್ನು ನಡೆಸಲಾಗುವುದು. ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಜನಪರ ಆಡಳಿತ ನೀಡದೆ ಭ್ರಷ್ಟಾಚಾರದಲ್ಲಿ ತೊಡಗಿದೆ. ಕ್ಷೇತ್ರದಲ್ಲಿಯೂ ಸಹ ಕೆಲ ಅಧಿಕಾರಿಗಳು ಸರ್ಕಾರದ ಹಾಗೂ ಶಾಸಕರ ಕೈಗೊಂಬೆಗಳಾಗಿದ್ದಾರೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರು ಬಿಟ್ಟು ಹೊರಗೆ ಬರುತ್ತಿಲ್ಲ, ಹೊರ ಬಂದರೆ ಎಲ್ಲಿ ತಮ್ಮ ಕುರ್ಚಿಗೆ ಕಂಟಕ ಬರುವುದೋ ಎಂಬ ಆತಂಕ ಅವರನ್ನು ಕಾಡುತ್ತಿದೆ, ಇಂತಹ ಸರ್ಕಾರ ಇದ್ದರೂ ಒಂದೆ ಇಲ್ಲದಿದ್ದರೂ ಒಂದೆ ಜನರೇ ತೀರ್ಮಾನ ಕೈಗೊಂಡು ಸರ್ಕಾರಕ್ಕೆ ಬಿಸಿ ಮುಟ್ಟಿಸಲಿದ್ದಾರೆ ಎಂದರು.ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯ

ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ ಮಾತನಾಡಿ ರಾಜ್ಯ ಕಾಂಗ್ರೆಸ್ ಸರ್ಕಾರ ಬಂದು ೨ವರ್ಷವಾಗಳಾಗಿದೆ, ಆದರೆ ಯಾವ ಕ್ಷೇತ್ರದಲ್ಲಿಯೂ ಅಭಿವೃದ್ದಿ ಎಂಬುದು ಶೂನ್ಯವಾಗಿದೆ, ಸರ್ಕಾರದ ಬೊಕ್ಕಸದಲ್ಲಿ ಹಣದ ಕೊರತೆಯಿಂದ ಗ್ಯಾರಂಟಿ ಯೋಜನೆಗಳಿಗೆ ಸರಿದೂಗಿಸಲು ಹೆಣಗಾಡುತ್ತಿದೆ, ಇದರ ನಡುವೆ ಅಗತ್ಯ ವಸ್ತುಗಳ ಬೆಲೆಯನ್ನು ನಿರಂತರವಾಗಿ ಏರಿಸಿ ಸಾಮಾನ್ಯ ಜನರ ಬದುಕಲು ಕಷ್ಟುಪಡುವಂತಾಗಿದೆ.6 ತಿಂಗಳಲ್ಲಿ ಸರ್ಕಾರ ಪತನ

ಈ ಸರ್ಕಾರ ೬ ತಿಂಗಳಲ್ಲಿ ಪತನವಾದರೂ ಯಾವುದೇ ಆಶ್ಚರ್ಯವಿಲ್ಲ ಎಂಬ ವಾತಾವರಣ ರಾಜ್ಯದಲ್ಲಿ ನಿರ್ಮಾಣವಾಗಿದೆ.ಮುಸ್ಲಿಂ ಓಲೈಕೆ ಮಾಡಲು ಕಾಮಗಾರಿಗಳಲ್ಲಿ ಶೇ. ೪ರಷ್ಟು ಮೀಸಲಿಡುವ ಮೂಲಕ ಒಂದು ಸಮಾಜವನ್ನು ತುಷ್ಟೀಕರಣ ಮಾಡಲು ಹೊರಟಿದೆ ಎಂದು ಆರೋಪಿಸಿದರು. ಈ ವೇಳೆ ಪಕ್ಷದ ನಗರ ಅಧ್ಯಕ್ಷ ಬಿ.ಪಿ.ಮಹೇಶ್,ತಾಲೂಕು ಅಧ್ಯಕ್ಷ ಸಂಪಂಗಿರೆಡ್ಡಿ,ಮಾರ್ಕಂಡೇಗೌಡ, ಹುನ್ಕುಂದ ವೆಂಕಟೇಶ್, ನಾಗೇಶ್, ಹೊಸರಾಯಪ್ಪ, ಪ್ರಸನ್ನ,ಕೆಸರನಹಳ್ಳಿ ಮಂಜುನಾಥ್, ಬತ್ತಲಹಳ್ಳಿ ಮಂಜುನಾಥ್, ಅಮರೇಶ್, ಶಿವಕುಮಾರ್, ಚೌಡಪ್ಪ, ಕಲಾವತಿ, ಹೆಚ್.ಆರ್.ಶ್ರೀನಿವಾಸ್, ಬಿಂದು ಮಾದವ ಇತರರು ಇದ್ದರು.

PREV

Recommended Stories

ಜಾತಿಗಣತಿ ಈಗ ಕಗ್ಗಂಟು : ತಡರಾತ್ರಿವರೆಗೆ ಸಭೆ
ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ