ರಾಮನಗರ: ಮಾಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಬಿಡದಿ ರೈತರ ವಿವಿಧೋದ್ದೇಶ ಸಹಕಾರ ಸಂಘದ ನಿರ್ದೇಶಕ ಸ್ಥಾನಗಳ ಚುನಾವಣೆಗೆ ಅಭ್ಯರ್ಥಿಗಳು ಅಂತಿಮಗೊಂಡಿದ್ದು, ರಾಜಕೀಯ ಪಕ್ಷಗಳ ಹಣಾಹಣಿಗೆ ಅಖಾಡ ಸಜ್ಜುಗೊಂಡಿದೆ.
ಕಾಂಗ್ರೆಸ್ ಮತ್ತು ಮೈತ್ರಿ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳು ಪಕ್ಷ, ಜಾತಿ ಹಾಗೂ ಸಂಬಂಧಿಕರ ಆಧಾರದ ಮೇಲೆ ಮತದಾರರ ಮನವೊಲಿಸುವ ಕಸರತ್ತು ಪ್ರಾರಂಭಿಸಿದ್ದಾರೆ. ಈಗಾಗಲೇ ಪ್ರಮುಖ ಮುಖಂಡರ ಸಭೆಗಳು ಮಾತ್ರವಲ್ಲದೆ ಮನೆ ಬಾಗಿಲಿಗೆ ತೆರಳಿ ಮತಯಾಚನೆ ಮಾಡುತ್ತಿದ್ದಾರೆ.
ಕಾಂಗ್ರೆಸ್ ಮುಖಂಡರು ತಮ್ಮ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು, ಬಮೂಲ್‌ನಿಂದ ಹೈನುಗಾರರಿಗೆ ಬೋನಸ್, ರೈತರಿಗೆ ಬೆಳೆ ಸಾಲ ಸೌಲಭ್ಯ ನೀಡಿದ್ದನ್ನು ಪ್ರಮುಖ ಅಸ್ತ್ರವಾಗಿ ಬಳಸಿಕೊಂಡರೆ, ಜೆಡಿಎಸ್ - ಬಿಜೆಪಿ ಪಕ್ಷಗಳ ಮುಖಂಡರು ತಮ್ಮ ಸರ್ಕಾರಗಳ ಅವಧಿಯಲ್ಲಿನ ರೈತ ಪರ ಯೋಜನೆಗಳು, ರೈತ ವಿರೋಧಿ ಬಿಡದಿ ಟೌನ್ ಯೋಜನೆಯನ್ನು ದಾಳವಾಗಿ ಉಪಯೋಗಿಸಿಕೊಂಡು ಮತದಾರರ ಮನ ಗೆಲ್ಲುವ ಪ್ರಯತ್ನದಲ್ಲಿದ್ದಾರೆ.ಕಣದಲ್ಲಿ 29 ಅಭ್ಯರ್ಥಿಗಳು:
ಸಾಲಗಾರರಲ್ಲದ ಕ್ಷೇತ್ರದ 1 ಸಾಮಾನ್ಯ ಸ್ಥಾನಕ್ಕೆ ಮೂವರು ಅಭ್ಯರ್ಥಿಗಳು, ಸಾಲಗಾರರ ಕ್ಷೇತ್ರದ 5 ಸಾಮಾನ್ಯ ಸ್ಥಾನಗಳಿಗೆ 11 ಅಭ್ಯರ್ಥಿಗಳು, ಮಹಿಳೆಗೆ ಮೀಸಲಿರುವ 2 ಸ್ಥಾನಗಳಿಗೆ 5 ಅಭ್ಯರ್ಥಿಗಳು, ಪರಿಶಿಷ್ಟ ಜಾತಿ ಮೀಸಲು 1 ಸ್ಥಾನಕ್ಕೆ 3 ಅಭ್ಯರ್ಥಿಗಳು, ಹಿಂದುಳಿದ ವರ್ಗ ಬಿ 1 ಸ್ಥಾನಕ್ಕೆ 3 ಅಭ್ಯರ್ಥಿಗಳ ನಡುವೆ ಸ್ಪರ್ಧೆ ಏರ್ಪಟ್ಟಿದ್ದು, ಹಿಂದುಳಿದ ವರ್ಗ ಎ1 ಸ್ಥಾನ ಇಬ್ಬರು ಮತ್ತು ಪರಿಶಿಷ್ಟ ಪಂಗಡ1 ಸ್ಥಾನಕ್ಕೆ ಇಬ್ಬರ ನಡುವೆ ನೇರ ಹಣಾಹಣಿ ನಡೆಯಲಿದೆ.
ಮತದಾರರಿಗೆ ಗುರುತಿನ ಚೀಟಿ ಕಡ್ಡಾಯ:
ಛತ್ರದ ಬಿಜಿಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಭಾನುವಾರ ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ಮತದಾನ ನಡೆಯಲಿದೆ ಎಂದು ರಿಟರ್ನಿಂಗ್ ಅಧಿಕಾರಿ ಬಿ.ಕೆ.ಮಂಜುನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಣದಲ್ಲಿರುವ ಅಭ್ಯರ್ಥಿಗಳ ವಿವರ:
ಸಾಲಗಾರರಲ್ಲದ ಕ್ಷೇತ್ರಹೇಮಂತ್ ಕುಮಾರ್‌ಡಿ.ನಿತ್ಯಾನಂದಬಸವರಾಜು,
ದೊಡ್ಡರೇವಯ್ಯ, ಬಿ.ಎನ್.ಪ್ರ ಸನ್ನಕುಮಾರ್,
ಎಚ್.ಎನ್.ಮಧುಕುಮಾರ್, ಗುರುಮಲ್ಲೇಶಯ್ಯ, ವಿ.ಆರ್.ಮಹೇಶ್, ಬಿ.ಮಂಜುನಾಥ್, ಸತ್ಯಮೂರ್ತಿ, ಎಚ್.ಎನ್.ರವಿಕುಮಾರ್.ಸಾಮಾನ್ಯ ಮಹಿಳೆಎನ್.ಅನ್ನಪೂರ್ಣೇಶ್ವರಿಎಸ್.ಸವಿತಾ ಲೀಲಾವತಿ @ನೀಲಮ್ಮಸಿ.ಟಿ.ಶೋಭಾಜಯಲಕ್ಷ್ಮಮ್ಮ,
ಹಿಂದುಳಿದ ವರ್ಗಎ ಕೆ.ಪಿ.ಬಾಲಕೃಷ್ಣಚಿಕ್ಕದೊಡ್ಡಯ್ಯ,ಹಿಂದುಳಿದ ವರ್ಗ ಬಿಬಿ.ಎಸ್.ಸಂತೋಷ್ಬಿ.ಪಿ.ರಾಮುಶಿವಣ್ಣ
ಪರಿಶಿಷ್ಟ ಜಾತಿಆರ್.ರಮೇಶ್ಟಿ.ಕೆ.ಲೋಕೇಶ್ವಿ.ತುಳಸಿರಾಮಪರಿಶಿಷ್ಟ ಪಂಗಡಕೆಂಗಲ್ ಹನುಮಂತಯ್ಯಎಂ.ಪುಷ್ಪರಾಜು