ಕಲಾವಿದನ ಆಲೋಚನೆ ಎಂದಿಗೂ ಸಮಾಜಮುಖಿ

KannadaprabhaNewsNetwork |  
Published : Dec 22, 2023, 01:30 AM IST
21ಡಿಡಬ್ಲೂಡಿ11ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ಬೆಳಗಾವಿ, ಗದಗ, ಹುಬ್ಬಳ್ಳಿ, ಧಾರವಾಡ ಚಿತ್ರಕಲಾ ವಿದ್ಯಾರ್ಥಿಗಳ ಚಿತ್ರಕಲಾ ಪ್ರದರ್ಶನ  | Kannada Prabha

ಸಾರಾಂಶ

ವಿದ್ಯಾರ್ಥಿಗಳಾದವರು ಮನುಷ್ಯನ ದೇಹದ ಬಗ್ಗೆ ಸ್ಪಷ್ಟ ಪರಿಕಲ್ಪನೆ ಹೊಂದಿರಬೇಕು. ಅಂದಾಗ ಮಾತ್ರ ಶ್ರೇಷ್ಠ ಚಿತ್ರಕಲೆ ರೂಪಿಸಲು ಸಾಧ್ಯವಾಗುವುದು. ಹಾಗೆಯೇ ನಿಸರ್ಗ ಮತ್ತು ಸುತ್ತಮುತ್ತಲಿನ ದೃಶ್ಯ ಒಳಗಣ್ಣಿನಿಂದ ನೋಡುವಂತಾದಾಗ ಮಾತ್ರ ನೈಜ ಬಣ್ಣ ಕಂಡುಕೊಳ್ಳಲು ಸಾಧ್ಯ

ಕಲಾವಿದರಿಗೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಗರಗಧಾರವಾಡ: ಚಿತ್ರಕಲಾವಿದ ಯಾವಾಗಲೂ ವಿಶಾಲ ಗುಣ ಹೊಂದಿರುತ್ತಾನೆ. ಅವನ ಆಲೋಚನೆಗಳು ಸಮಾಜಮುಖಿಯಾಗಿರುತ್ತವೆ ಎಂದು ಹುಬ್ಬಳ್ಳಿಯ ಹಿರಿಯ ಕಲಾವಿದ ಆರ್.ಬಿ. ಗರಗ ನುಡಿದರು.

ಕರ್ನಾಟಕ ವಿದ್ಯಾವರ್ಧಕ ಸಂಘವು ಕರ್ನಾಟಕ-50 ಸಂಭ್ರಮದ ಅಂಗವಾಗಿ ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯದ ಆರ್ಟ್ ಗ್ಯಾಲರಿಯಲ್ಲಿ ಆಯೋಜಿಸಿದ್ದ ಬೆಳಗಾವಿ, ಗದಗ, ಹುಬ್ಬಳ್ಳಿ, ಧಾರವಾಡ ಚಿತ್ರಕಲಾ ವಿದ್ಯಾರ್ಥಿಗಳ ಚಿತ್ರಕಲಾ ಪ್ರದರ್ಶನ ಮತ್ತು ಬಹುಮಾನಕ್ಕೆ ಆಯ್ಕೆಯಾದ ಚಿತ್ರಕಲೆಗಳ ಕಲಾವಿದರಿಗೆ ಬಹುಮಾನ ವಿತರಣಾ ಸಮಾರಂಭ ಗುರುವಾರ ಉದ್ಘಾಟನೆ ಮಾಡಿದ ಅವರು, ವಿದ್ಯಾರ್ಥಿಗಳಾದವರು ಮನುಷ್ಯನ ದೇಹದ ಬಗ್ಗೆ ಸ್ಪಷ್ಟ ಪರಿಕಲ್ಪನೆ ಹೊಂದಿರಬೇಕು. ಅಂದಾಗ ಮಾತ್ರ ಶ್ರೇಷ್ಠ ಚಿತ್ರಕಲೆ ರೂಪಿಸಲು ಸಾಧ್ಯವಾಗುವುದು. ಹಾಗೆಯೇ ನಿಸರ್ಗ ಮತ್ತು ಸುತ್ತಮುತ್ತಲಿನ ದೃಶ್ಯ ಒಳಗಣ್ಣಿನಿಂದ ನೋಡುವಂತಾದಾಗ ಮಾತ್ರ ನೈಜ ಬಣ್ಣ ಕಂಡುಕೊಳ್ಳಲು ಸಾಧ್ಯ ಎಂದರು.

ಹಿರಿಯ ಕಲಾವಿದ ಎಫ್.ವಿ. ಚಿಕ್ಕಮಠ ಮಾತಾನಾಡಿ, ಕಲಾ ವಿದ್ಯಾರ್ಥಿಗಳು ಸೃಜನಶೀಲವಾಗಿರಬೇಕು. ಚಿತ್ರಕಲೆ ಕಲಿಸುವ ಗುರುಗಳಲ್ಲಿಯ ಜ್ಞಾನ ಹಟಕ್ಕೆ ಬಿದ್ದು ಪಡೆದುಕೊಳ್ಳುವಂತಾಗಬೇಕು. ಇಂದು ಚಿತ್ರಕಲಿಕೆಯಲ್ಲಿ ಪ್ರಾಕ್ಟಿಕಲ್ ಹೆಚ್ಚು ಇರದೇ ಪಠ್ಯಕ್ಕೆ ಒತ್ತು ಕೊಡುತ್ತಿದ್ದಾರೆ. ಪ್ರಯೋಗಶೀಲತೆ ಇದ್ದಾಗ ಮಾತ್ರ ಒಬ್ಬ ಕಲಾವಿದ ಶ್ರೇಷ್ಠ ಕಲಾಕೃತಿ ನೀಡಲು ಸಾಧ್ಯವಾಗುವುದು ಎಂದರು.

ಅಧ್ಯಕ್ಷತೆ ವಹಿಸಿದ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಕಲಾವಿದ ಸಮಾಜದ ಸದಾ ಸ್ವಾಸ್ಥ್ಯಕ್ಕಾಗಿ ಸದ್ದಿಲ್ಲದೇ ಕಲೆಯ ಮೂಲಕ ಕಾರ್ಯ ಮಾಡುತ್ತಿರುತ್ತಾನೆ. ಲಲಿತ ಕಲೆಗಳಲ್ಲಿ ನೃತ್ಯ ಮತ್ತು ಸಂಗೀತಗಾರರು ತಮ್ಮ ಗುರುವಿಗೆ ನೀಡುವ ಗೌರವ ಮತ್ತು ತೋರುವ ಭಕ್ತಿ ಚಿತ್ರಕಲೆಯ ಕಲಾವಿದರಲ್ಲಿ ಕಾಣುವುದಿಲ್ಲ. ಹಿಂದೆ ಚಿತ್ರಕಲೆಗೆ ಅಷ್ಟೊಂದು ಬೇಡಿಕೆಯಾಗಲಿ, ಮಾರುಕಟ್ಟೆಯಾಗಲಿ ಇದ್ದಿಲ್ಲ. ಆದರೆ ಇಂದು ಜಗತ್ತಿನ ಯಾವ ದೇಶದ ಚಿತ್ರಕಲಾಕಾರರೊಂದಿಗೂ ಸಂವಹನ ಮಾಡುವ ಮತ್ತು ಕೊಡುಕೊಳ್ಳುವಂತೆ ಜಾಗತೀಕ ಮಾರುಕಟ್ಟೆಯ ಅವಕಾಶ ತೆರೆದುಕೊಂಡಿವೆ ಎಂದರು.

ಬಹುಮಾನ ಪಡೆದ ಗದಗದ ವಿಜಯ ಲಲಿತಕಲಾ ಮಹಾವಿದ್ಯಾಲಯದ ವಿದ್ಯಾರ್ಥಿ ವೀರೇಶ ವಡ್ಡಟ್ಟಿಮಠದ ಹಾಗೂ ರಂಗನಾಥ ಅಮರದ ಹುಬ್ಬಳ್ಳಿಯ ವಿಜಯಮಹಾಂತೇಶ ಲಲಿತಕಲಾ ಮಹಾವಿದ್ಯಾಲಯದ ವಿಶ್ವರಾಧ್ಯ ಎಂ.ಹೊಸಹಟ್ಟಿಮಠ, ಧಾರವಾಡದ ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯದ ಅಭಿಷೇಕ ಪಾಟೀಲ, ಲೋಹಿತ ಹಿರೇಮಠ ಇವರಿಗೆ ಬಹುಮಾನ, ಫಲಕ, ಪ್ರಶಸ್ತಿ ಪತ್ರನೀಡಿ ಗೌರವಿಸಲಾಯಿತು.

ಬಿ.ಮಾರುತಿ ಸ್ವಾಗತಿಸಿದರು. ಡಾ.ಬಸವರಾಜ ಕುರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಕೆ. ಪತ್ತಾರ ನಿರೂಪಿಸಿ. ವಂದಿಸಿದರು. ಕಲಾವಿದ ಎಫ್‌.ವಿ.ಚಿಕ್ಕಮಠ, ಬಿ.ಮಾರುತಿ ಇದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ