ಶೋಷಿತರಿಗೆ ಹೊಸ ದಿಕ್ಕು ತೋರಿದ ಕೋರೆಗಾಂವ್‌ ಯುದ್ಧ: ಈಶ್ವರಪ್ಪ

KannadaprabhaNewsNetwork |  
Published : Jan 03, 2025, 12:30 AM IST
ಹೊನ್ನಾಳಿ ಫೋಟೋ 2ಎಚ್.ಎಲ್.ಐ2.  ಹೊನ್ನಾಳಿಯಲ್ಲಿ ಪ್ರಜಾಪರಿವರ್ತನಾ ವೇದಿಕೆಯಿಂದ  ಹಮ್ಮಿಕೊಂಡಿದ್ದ ಕೋರೆಗಾಂವ್ ವಿಜಯೋತ್ಸವವನ್ನು ಉದ್ದೇಶಿಸಿ ಎ.ಡಿ. ಈಶ್ವರಪ್ಪ ಮಾತನಾಡಿದರು. | Kannada Prabha

ಸಾರಾಂಶ

ಮಹರ್ ಸೈನಿಕರ ವೀರಾವೇಶದ ಹೋರಾಟ ಪ್ರತಿಫಲವಾಗಿ ಭೀಮಾ ಕೋರೆಗಾಂವ್ ವಿಜಯ ಸಾಧ್ಯವಾಯಿತು ಎಂದು ಪ್ರಜಾಪರಿವರ್ತನಾ ವೇದಿಕೆ ರಾಜ್ಯ ಸಂಚಾಲಕ ಎ.ಡಿ. ಈಶ್ವರಪ್ಪ ಹೊನ್ನಾಳಿಯಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಮಹರ್ ಸೈನಿಕರ ವೀರಾವೇಶದ ಹೋರಾಟ ಪ್ರತಿಫಲವಾಗಿ ಭೀಮಾ ಕೋರೆಗಾಂವ್ ವಿಜಯ ಸಾಧ್ಯವಾಯಿತು ಎಂದು ಪ್ರಜಾಪರಿವರ್ತನಾ ವೇದಿಕೆ ರಾಜ್ಯ ಸಂಚಾಲಕ ಎ.ಡಿ. ಈಶ್ವರಪ್ಪ ಹೇಳಿದರು.

ಪಟ್ಟಣದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಬುಧವಾರ ರಾತ್ರಿ ಕೋರೆಗಾಂವ್ ವಿಜಯೋತ್ಸವ ಆಚರಿಸಿದ ಸಂದರ್ಭ ಸಿಹಿ ವಿತರಿಸಿ ಅವರು ಮಾತನಾಡಿದರು. 1818 ರಲ್ಲಿ ಮಹಾರಾಷ್ಟ್ರದ ಭೀಮಾ ತೀರದ ಕೋರೆಗಾಂವ್‌ನಲ್ಲಿ ಮಹರ್ ಸೈನಿಕರು ಮತ್ತು ಪೇಶ್ವೆಗಳ ನಡುವೆ ಯುದ್ಧ ನಡೆಯಿತು. ಈ ಸಮರ ಶೋಷಿತ ಸಮುದಾಯಕ್ಕೆ ದೊಡ್ಡ ವಿಜಯ ತಂದುಕೊಟ್ಟು ಹೊಸ ದಿಕ್ಕನ್ನು ತೋರಿತು. ಯುದ್ಧ ಗೆದ್ದ ನೆನಪಿಗಾಗಿ ಸೈನಿಕರು ಶಿಕ್ಷಣಕ್ಕೆ ಬೇಡಿಕೆ ಸಲ್ಲಿಸಿದ್ದರು. ಪರಿಣಾಮವಾಗಿ ಶಿಕ್ಷಣ ಪಡೆಯುವ ಅವಕಾಶವೂ ಈ ಸಮುದಾಯಕ್ಕೆ ಸಿಕ್ಕಿತು ಎಂದು ವಿವರಿಸಿದರು.

ಈ ಸಂದರ್ಭ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರಕೆರೆ ಕೃಷ್ಣಪ್ಪ, ತಾಲೂಕು ಘಟಕ ಅಧ್ಯಕ್ಷ ಒ. ಹನುಮಂತಪ್ಪ, ಶಿಕ್ಷಕರಾದ ಎ.ಕೆ. ಚನ್ನೇಶ್, ನಿವೃತ್ತ ಶಿಕ್ಷಕ ಕೃಷ್ಣನಾಯ್ಕ, ಬೀದಿಬದಿ ವ್ಯಾಪಾರಿಗಳ ಸಂಘದ ಕಾಂಗ್ರೆಸ್ ಅಧ್ಯಕ್ಷ ನಜೀರ್, ನಾಗರಾಜ್, ರೇಣುಕಮ್ಮ, ನೂರಾರು ಜನರು ಭಾಗಿಯಾಗಿದ್ದರು.

- - - -2ಎಚ್.ಎಲ್.ಐ2.ಜೆಪಿಜಿ:

ಹೊನ್ನಾಳಿಯಲ್ಲಿ ಕೋರೆಗಾಂವ್ ವಿಜಯೋತ್ಸವ ಸಂಭ್ರಮಾಚರಣೆಯಲ್ಲಿ ಎ.ಡಿ. ಈಶ್ವರಪ್ಪ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ಮಹಿಳೆ ವಿವಸ್ತ್ರಗೊಳಿಸಿ ದೌರ್ಜನ್ಯ ಘಟನೆ ಖಂಡಿಸಿ ಬಿಜೆಪಿ ಪ್ರತಿಭಟನೆ
ಖಾದಿ ರಾಷ್ಟ್ರಧ್ವಜ ಖರೀದಿಗೆ ಉತ್ತೇಜನಕ್ಕೆ ಗ್ರೂಪ್‌