- ಕಲ್ಲತ್ತಿಗಿರಿ ಸರ್ಕಲ್ ನಲ್ಲಿ ಶ್ರೀಗಂಧ ಮೌಲ್ಯವರ್ಧನೆ ವಿಚಾರ ಸಂಕಿರಣ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ತರೀಕೆರೆಹಿಂದೆ ಅರಣ್ಯ ಉತ್ಪನ್ನವಾಗಿದ್ದ ಶ್ರೀಗಂಧವನ್ನು ಇಂದು ರೈತರು ತಮ್ಮ ಜಮೀನಿನಲ್ಲಿ ಬೆಳೆಸುತ್ತಿರುವುದರಿಂದ ಕಳ್ಳರಿಂದ ರಕ್ಷಿಸಿಕೊಳ್ಳುವುದೇ ದೊಡ್ಡ ಸವಲಾಗಿದೆ. ಸರ್ಕಾರಗಳು ಶ್ರೀಗಂಧ ಕಳ್ಳ ಸಾಗಣೆ ಕಡಿವಾಣ ಹಾಕಬೇಕಾಗಿದೆ. ಇಲ್ಲದಿದ್ದರೆ 15-30 ವರ್ಷಗಳ ಕಾಲ ತಮ್ಮ ಮಕ್ಕಳಂತೆ ಶ್ರೀಗಂಧ ಬೆಳೆಸುವ ಬೆಳೆಗಾರರಿಗೆ ಅಪಾರ ಪ್ರಮಾಣದ ನಷ್ಟ ಉಂಟಾಗಲಿದೆ ಎಂದು ಸಾಣೆಹಳ್ಳಿ ತರಳಬಾಳು ಶಾಖಾಮಠ ಪಟ್ಟಾಧ್ಯಕ್ಷ ಶ್ರೀ ಡಾ. ಪಂಡಿತರಾಧ್ಯ ಶಿವಾಚಾರ್ಯ ಸ್ವಾಮಿ ಹೇಳಿದರು. ಬುಧವಾರ ಯಶಸ್ವಿ ಚಾರಿಟಬಲ್ ಟ್ರಸ್ಟ್, ಶ್ರೀಗಂಧ ರಕ್ಷಣಾ ವೇದಿಕೆ ಸಹಯೋಗದೊಂದಿಗೆ ಕನ್ನಡಪರ ಸಂಘಟನೆ ಮತ್ತಿತರ ಸಂಘಟನೆಗಳಿಂದ ಸಮೀಪದ ಕಲ್ಲತ್ತಿಗಿರಿ ಸರ್ಕಲ್ ನಲ್ಲಿ ನಡೆದ ಅಮರ ಸಂತೋಷ ಉಚಿತ ವಸತಿ ಕುಟೀರ, ಶ್ರೀಗಂಧ ಮೌಲ್ಯವರ್ಧನೆ ವಿಚಾರ ಸಂಕಿರಣ, ಗಂಧದ ಗುಡಿ ಎಂಟರ್ ಪ್ರೈಸಸ್, ಶ್ರೀಗಂಧ ಮೌಲ್ಯವರ್ಧಿತ ಉತ್ಪನ್ನಗಳ ಮಾರಾಟ ಮಳಿಗೆ, ಗಂಧದ ಗುಡಿ -5ರಲ್ಲಿ ಅಪಾರ್ಟ್ ಮೆಂಟ್ ಕಟ್ಟಡದ ಶಂಖಸ್ಥಾಪನೆ ಸಾನಿಧ್ಯ ವಹಿಸಿ ಮಾತನಾಡಿದರು.ಒಳ್ಳೆಯವರನ್ನು ಗುರುತಿಸಿ ಸನ್ಮಾಮಾರ್ಗದಲ್ಲಿ ಸಾಗಿದರೆ 12 ನೇ ಶತಮಾನದ ಶರಣರ ಕಾಲವನ್ನು ಮರು ಸೃಷ್ಠಿಸ ಬಹುದಾಗಿದೆ. ವಾಸ್ತವಕ್ಕೆ ಆದ್ಯತೆ ನೀಡುವವರು ಕಾರಣಕರ್ತರಾಗಿರುತ್ತಾರೆ. ಅದರಂತೆ ಗಂಧದ ಬೆಳೆಗಾರರಾದ ಟಿ.ಎನ್. ವಿಶುಕುಮಾರ್ ಸಹ ಪರಿಸರ ಪ್ರೇಮಿಯಾಗಿದ್ದು, ಕಾಡು ಪ್ರಾಣಿಗಳು ಮತ್ತು ಜೇನು ದುಂಬಿಗಳಂತಹ ಕೀಟಗಳಿಗೆ ಕುಡಿವ ನೀರಿನ ತೊಟ್ಟಿ ನಿರ್ಮಿಸುವ ಮೂಲಕ ಪರಿಸರಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು. ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಮಾತನಾಡಿ ಶ್ರೀಗಂಧ ಮೌಲ್ಯವರ್ಧನೆ ವಿಚಾರ ಸಂಕಿರಣ ಒಂದು ಅರ್ಥಪೂರ್ಣ ಕಾರ್ಯಕ್ರಮ. ಅಗತ್ಯ ಮಾಹಿತಿ ನೀಡುತ್ತಿರುವ ಶ್ರೀಗಂಧದ ಬೆಳೆಗಾರರೆಲ್ಲರಿಗೂ ಅಭಿನಂದನೆ ತಿಳಿಸಿದರು. ನಿವೃತ್ತ ಐ.ಎ.ಎಸ್ ಕೆ.ಅಮರನಾರಾಯಣ ಮಾತನಾಡಿ ಕಲ್ಲತ್ತಗಿರಿಯಂತಹ ಮಲೆನಾಡಿನ ತಪ್ಪಲಿನಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವವರೆಲ್ಲರು ಕಾರ್ಯಕ್ರಮದ ಉಪಯೋಗ ಪಡೆದು ಇತರ ಬೆಳೆಗಾರರಿಗೆ ಅಗತ್ಯ ಮಾಹಿತಿ ನೀಡಬೇಕು. ಶ್ರೀಗಂಧದಿಂದ ಒಂದು ಸಾವಿರಕ್ಕೂ ಅಧಿಕ ಪ್ರಮಾಣದ ಉತ್ಪನ್ನ ತಯಾರಿಸಬಹುದಾಗಿದ್ದು, ವಿದೇಶ ಗಳಲ್ಲಿ ಶ್ರೀಗಂಧದ ಎಣ್ಣೆಯಿಂದ ಅನೇಕ ಪೇಯ (ಜ್ಯೂಸ್) ಮಾಡಿ ಸೇವಿಸುತ್ತಿರುವುದರಿಂದ ಆರೋಗ್ಯ ಸುಧಾರಿಸುತ್ತಿದ್ದು, ಶ್ರೀಗಂಧ ಬೆಳೆಗಾರರು ಸಹ ಶ್ರೀಗಂಧದ ಉತ್ಪನ್ನಗಳ ಸೇವನೆ ಮಾಡಬೇಕು ಎಂದು ಹೇಳಿದರು.ರೈತ ಸಂಘದ ಮುಖ್ಯಸ್ಥ ಕೆ.ಟಿ. ಗಂಗಾಧರಪ್ಪ, ಮರ ಮತ್ತು ತಂತ್ರಜ್ಞಾನ ವಿಭಾಗದ ಹಿರಿಯ ವಿಜ್ಞಾನಿ ಅನಂತ ಪದ್ಮನಾಭ, ಶ್ರೀಗಂಧ ರಕ್ಷಣ ವೇದಿಕೆ ರಾಜ್ಯಾಧ್ಯಕ್ಷ ಅಜಯ್, ಕರವೇ ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಕೃಷ್ಣೇಗೌಡ, ಶ್ರೀಗಂಧ ಬೆಳೆಗಾರ ಟಿ.ಎನ್.ವಿಶುಕುಮಾರ್ ಮತ್ತು ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಕೇರಳ, ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳ ಶ್ರೀಗಂಧ ಬೆಳೆಗಾರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. -
15ಕೆಟಿಆರ್.ಕೆ.1ಃತರೀಕೆರೆ ಸಮೀಪದ ಕಲ್ಲತ್ತಿಗಿರಿ ಸರ್ಕಲ್,ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಣೆಹಳ್ಳಿ ತರಳಬಾಳು ಶಾಖಾಮಠದ ಪಟ್ಟಾದ್ಯಕ್ಷರು ಶ್ರೀ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿ, ಸಂತೋಷ್ ಹೆಗಡೆ, ಟಿ.ಎನ್.ವಿಶುಕುಮಾರ್, ಕೆ. ಅಮರನಾರಾಯಣ, ಕೆ.ಟಿ. ಗಂಗಾಧರಪ್ಪ ಮತ್ತಿತರರು ಭಾಗವಹಿಸಿದ್ದರು.