ಇಂದಿನಿಂದ ಗಂಜಾಂನ ಶ್ರೀನಿಮಿಷಾಂಬ ಅಮ್ಮನವರ ವರ್ಧಂತಿ ಮಹೋತ್ಸವ

KannadaprabhaNewsNetwork |  
Published : May 07, 2025, 12:47 AM IST
6ಕೆಎಂಎನ್ ಡಿ16 | Kannada Prabha

ಸಾರಾಂಶ

ಮೇ 7ರಂದು ಬೆಳಗ್ಗೆ 8 ಗಂಟೆಗೆ ನಿಮಿಷಾಂಬ ಹೋಮ, 10.30ಕ್ಕೆ ಪೂರ್ಣಾಹುತಿ, 10.45ಕ್ಕೆ ಕಲಶ ಪೂಜೆ ಮತ್ತು 121 ಕಲಶಗಳ ಮಹಾಭಿಷೇಕ ನಂತರ ಅಷ್ಟದಿಗ್ನಲಿ, ಮಧ್ಯಾಹ್ನ 1 ಗಂಟೆಗೆ ಮಹಾ ಮಂಗಳಾರತಿ ಪ್ರಸಾದ ವಿತರಣೆ, ಸಂಜೆ 6.30ಕ್ಕೆ ದಕ್ಷಿಣ ಗಂಗೆ ಕಾವೇರಿ ಮಾತೆಗೆ ಪೂಜೆ, ಮಹಾ ಆರತಿ 7ಕ್ಕೆ ಉತ್ಸವ, ಮಹಾಪೂಜೆ, ಮಹಾ ಮಂಗಳಾರತಿ ಪ್ರಸಾದ ವಿತರಣೆ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಪಟ್ಟಣ ಪುರಸಭೆ ವ್ಯಾಪ್ತಿಯ ಗಂಜಾಂನ ಶ್ರೀನಿಮಿಷಾಂಬದೇವಿ ಅಮ್ಮನವರ ವರ್ಧಂತಿ ಮಹೋತ್ಸವದ ಅಂಗವಾಗಿ ದೇವಾಲಯದಲ್ಲಿ ವಿವಿಧ ಪೂಜೆಗಳು ಆರಂಭವಾಗಿವೆ ಎಂದು ದೇಗುಲದ ಇಒ ಸಿ.ಜಿ.ಕೃಷ್ಣ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾಹಿತಿ ನೀಡಿದ ಅವರು, ರಾಜ್ಯ ಧಾರ್ಮಿಕ ದತ್ತಿ ಇಲಾಖೆಯಿಂದ ದೇಗುಲದಲ್ಲಿ ಮಂಗಳವಾರ ವಿವಿಧ ದೇವತಾ ಪೂಜಾ ಕಾರ್ಯಗಳು ಆರಂಭಿಸಲಾಗಿದೆ. ಗಣಪತಿ ಪೂಜೆ ಪುಣ್ಯಾಹ ಮಹಾ ಸಂಕಲ್ಪ ಕಲಶ ಸ್ಥಾಪನೆ, ಸಪ್ತಶತೀ ಪಾರಾಯಣ ಕಲಶ ಪ್ರಜೆ, ಮಹಾ ಮಂಗಳಾರತಿ ನಡೆಯಿತು ಎಂದರು.

ಮೇ 7ರಂದು ಬೆಳಗ್ಗೆ 8 ಗಂಟೆಗೆ ನಿಮಿಷಾಂಬ ಹೋಮ, 10.30ಕ್ಕೆ ಪೂರ್ಣಾಹುತಿ, 10.45ಕ್ಕೆ ಕಲಶ ಪೂಜೆ ಮತ್ತು 121 ಕಲಶಗಳ ಮಹಾಭಿಷೇಕ ನಂತರ ಅಷ್ಟದಿಗ್ನಲಿ, ಮಧ್ಯಾಹ್ನ 1 ಗಂಟೆಗೆ ಮಹಾ ಮಂಗಳಾರತಿ ಪ್ರಸಾದ ವಿತರಣೆ, ಸಂಜೆ 6.30ಕ್ಕೆ ದಕ್ಷಿಣ ಗಂಗೆ ಕಾವೇರಿ ಮಾತೆಗೆ ಪೂಜೆ, ಮಹಾ ಆರತಿ 7ಕ್ಕೆ ಉತ್ಸವ, ಮಹಾಪೂಜೆ, ಮಹಾ ಮಂಗಳಾರತಿ ಪ್ರಸಾದ ವಿತರಣೆ ನಡೆಯಲಿದೆ. ಪೂಜಾ ಕಾರ್ಯಕ್ರಮದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಇಲಾಖೆ ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಹಾಗೂ ವ್ಯವಸ್ಥಾಪನ ಸಮಿತಿ ಅಧ್ಯಕ್ಷರು, ಸದಸ್ಯರು, ಭಕ್ತರು, ಗ್ರಾಮದ ಮುಖಂಡರು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಈ ವೇಳೆ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ದಯಾನಚಿದ್, ಸದಸ್ಯರಾದ ಸೂರ್ಯನಾರಾಯಣ ಭಟ್, ಟಿ. ಕೃಷ್ಣ, ಬಾಲಸುಬ್ರಮಣ್ಯ, ಎಸ್.ಕೃಷ್ಣ, ಪೂರ್ಣಪ್ರಜ್ಞಾಮೂರ್ತಿ, ಭಾಗ್ಯಲಕ್ಷ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ