ಕನ್ನಡಪ್ರಭ ವಾರ್ತೆ ಬೆಳಗಾವಿನಿತ್ಯ ನಗರದ ಸ್ವಚ್ಛತೆಗಾಗಿ ಶ್ರಮಿಸುವ ಕೈಗಳಿಗೆ ಈ ಬಾರಿ ಮಂತ್ರಾಲಯದ ರಾಯರ ದರ್ಶನದ ಭಾಗ್ಯ ಒದಗಿಬಂದಿದೆ. ಬೆಳಗಾವಿ ಮಹಾನಗರ ಪಾಲಿಕೆಯ 42 ಮತ್ತು 43ನೇ ವಾರ್ಡ್ಗಳ 35 ಪೌರಕಾರ್ಮಿಕರು ಒಟ್ಟಾಗಿ ಮಂತ್ರಾಲಯಕ್ಕೆ ತೆರಳಿ ರಾಯರ ದರ್ಶನ ಪಡೆದು ಪುನೀತರಾದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ನಿತ್ಯ ನಗರದ ಸ್ವಚ್ಛತೆಗಾಗಿ ಶ್ರಮಿಸುವ ಕೈಗಳಿಗೆ ಈ ಬಾರಿ ಮಂತ್ರಾಲಯದ ರಾಯರ ದರ್ಶನದ ಭಾಗ್ಯ ಒದಗಿಬಂದಿದೆ. ಬೆಳಗಾವಿ ಮಹಾನಗರ ಪಾಲಿಕೆಯ 42 ಮತ್ತು 43ನೇ ವಾರ್ಡ್ಗಳ 35 ಪೌರಕಾರ್ಮಿಕರು ಒಟ್ಟಾಗಿ ಮಂತ್ರಾಲಯಕ್ಕೆ ತೆರಳಿ ರಾಯರ ದರ್ಶನ ಪಡೆದು ಪುನೀತರಾದರು.
ಪ್ರತಿದಿನ ನಗರದ ಸ್ವಚ್ಛತೆ, ನೈರ್ಮಲ್ಯ ಕಾಪಾಡುವ ಕಾರ್ಯದಲ್ಲಿ ತೊಡಗಿರುವ ಪೌರಕಾರ್ಮಿಕರಿಗೆ ಕೆಲಸದ ಒತ್ತಡದ ನಡುವೆ ಆಧ್ಯಾತ್ಮಿಕ ಯಾತ್ರೆಯ ಸಂತಸ ಹಂಚಿಕೊಳ್ಳಲು ಈ ಪ್ರವಾಸ ಅವಕಾಶ ಕಲ್ಪಿಸಿತು. ಸಹೋದ್ಯೋಗಿಗಳೊಂದಿಗೆ ಮಂತ್ರಾಲಯಕ್ಕೆ ತೆರಳಿ ರಾಯರ ದರ್ಶನ ಪಡೆದ ಪೌರಕಾರ್ಮಿಕರು ಸಂತಸ ವ್ಯಕ್ತಪಡಿಸಿದರು.
ನಗರಸೇವಕಿ ವಾಣಿ ಜೋಶಿ ಅವರು ಪೌರಕಾರ್ಮಿಕರ ಮಂತ್ರಾಲಯ ಯಾತ್ರೆಗೆ ಅಗತ್ಯ ವ್ಯವಸ್ಥೆ ಕಲ್ಪಿಸುವ ಮೂಲಕ ಅವರ ದರ್ಶನಕ್ಕೆ ನೆರವಾದರು. ಅಲ್ಲದೆ, ತಾವೂ ಅವರೊಂದಿಗೆ ಯಾತ್ರೆಯಲ್ಲಿ ಪಾಲ್ಗೊಂಡು ಪೌರಕಾರ್ಮಿಕರ ಸಂತಸದಲ್ಲಿ ಭಾಗಿಯಾದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.