ಮೂಲ್ಕಿ: ಹೆತ್ತವರ ಋುಣವನ್ನು ತೀರಿಸಲು ಅಸಾಧ್ಯವಾಗಿದ್ದು, ಜೀವನದಲ್ಲಿ ಕಷ್ಟಗಳನ್ನು ನಿವಾರಿಸಲು ಹಿರಿಯರ ಆಶೀರ್ವಾದ ಅಗತ್ಯ, ಜನ್ಮ ಕೊಟ್ಟ ತಂದೆ ತಾಯಿಗಳ ಆತ್ಮಕ್ಕೆ ತರ್ಪಣ ನೀಡುವುದೇ ನಿಜವಾದ ಕಾರ್ಯ ಎಂದು ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದಂಗಳವರು ಹೇಳಿದರು.
ಅಧ್ಯಕ್ಷತೆಯನ್ನು ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಉದಯಕುಮಾರ ಶೆಟ್ಟಿ ವಹಿಸಿದ್ದು, ಕಟೀಲು ಕ್ಷೇತ್ರದ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಆಶೀರ್ವಚನ ನೀಡಿದರು. ಉಡುಪಿ ಸಗ್ರಿ ಕ್ಷೇತ್ರದ ಗೋಪಾಲಕೃಷ್ಣ ಸಾಮಗ ಶುಭಶಂಸನೆಗೈದರು. ಶಿಮಂತೂರು ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ವೇದವ್ಯಾಸ ತಂತ್ರಿ, ಕಸಾಪ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ ಹರಿಕೃಷ್ಣ ಪುನರೂರು, ಪರೆಂಕಿಲ ಕುಟುಂಬಸ್ಥರಾದ ವೇದಮೂರ್ತಿ ವಿಠಲ ಭಟ್, ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಶಾಂತರಾಮ್ ಶೆಟ್ಟಿ ತೆಂಗಾಳಿ, ಶಶಿಕಲಾ, ನಂದನ ಕುಬೆವೂರು, ಶೇಖರ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮೋಕ್ಷಧಾಮ ನಿರ್ಮಾಣಕ್ಕೆ ಸಹಕರಿಸಿದ ದಾನಿಗಳನ್ನು ಗೌರವಿಸಲಾಯಿತು. ಸುಧನ್ವ ಭಟ್ ವೇದ ಘೋಷ ಮಾಡಿದರು, ಶ್ರೀಕಾಂತ್ ಭಟ್ ಕೊಲಕಾಡಿ ಪ್ರಾರ್ಥಿಸಿದರು. ನಂದನ ಕುಬೆವೂರು ಸ್ವಾಗತಿಸಿದರು.ಶಿಕ್ಷಕಿ ಕಾಮೇಶ್ವರಿ ವಿಷ್ಣುಮೂರ್ತಿ ಭಟ್ ನಿರೂಪಿಸಿದರು. ಕ್ಷೇತ್ರದ ಅರ್ಚಕ ಪುರುಷೋತ್ತಮ ಭಟ್ ವಂದಿಸಿದರು.