ತರೀಕೆರೆಯಲ್ಲಿ ಕನ್ನಡ ಪದ ಸಂಪತ್ತು 2441ನೇ ಉಪನ್ಯಾಸ ಮಾಲಿಕಾ ಕಮ್ಮಟ
ಭಾಷಾ ಪ್ರಯೋಗದ ಮೂಲಕ ಕನ್ನಡದ ಭವ್ಯತೆ, ವಿಸ್ತಾರ ಹಾಗೂ ಹರಿವು ಎತ್ತಿಹಿಡಿಯುವ ಅತ್ಯಂತ ಕನ್ನಡ ಶ್ರೇಷ್ಠವಾಗಿದೆ ಎಂದು ಕನ್ನಡ ಸಂಸ್ಕೃತಿ ಸೇವಾ ಭಾರತಿ ಸಂಸ್ಥಾಪಕ ಅಧ್ಯಕ್ಷ ಓಂಕಾರಪ್ರಿಯ ಬಾಗೇಪಲ್ಲಿ ಹೇಳಿದ್ದಾರೆ.ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ತಾಲೂಕು ಕಸಾಪ, ಕನ್ನಡ ಸಂಸ್ಕೃತಿ ಸೇವಾ ಭಾರತಿಯಿಂದ ಪಟ್ಟಣದ ಸರ್ಕಾರಿ
ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಕನ್ನಡ ಪದ ಸಂಪತ್ತು 2441ನೇ ಉಪನ್ಯಾಸ ಮಾಲಿಕೆ ಕಮ್ಮಟದಲ್ಲಿ ಕನ್ನಡ ಭಾಷಾ ಮಹತ್ವ ವಿಷಯ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.ಕನ್ನಡ ನುಡಿದಂತೆ ಬರೆಯುವ ಮತ್ತು ಬರೆದಂತೆ ನುಡಿಯುವ ಏಕಮಾತ್ರ ಭಾಷೆ. ವೈಜ್ಞಾನಿಕ ಹಾಗೂ ಭಾಷಾ ಉಚ್ಚಾರಣೆಯಿಂದ ಆರೋಗ್ಯ ವೃದ್ಧಿಯಾಗುವ ಅಂದ ಚೆಂದದ ಪರಿಪೂರ್ಣ ಸರಳ ಭಾಷೆ. ಕನ್ನಡದ ಒಂದು ಶಬ್ದಕ್ಕೆ ಅನೇಕ ಸಮಾನಾಂತರ ಪರ್ಯಾಯ ಪದಗಳು ಕನ್ನಡದಲ್ಲಿ ವಿಫುಲ ಮತ್ತು ವಿಸ್ತಾರವಾಗಿದೆ ಎಂದು ಹೇಳಿದರು.ಅಕ್ಷರ ಮತ್ತು ಅಂಕೆ ಸಂಖ್ಯೆಗಳು ವೈಜ್ಞಾನಿಕವಾಗಿ ರಚಿತವಾಗಿದ್ದು ಸಾವಿರಾರು ವರ್ಷಗಳಿಂದಲೂ ನಿರಂತರ ಬಳಕೆಯಲ್ಲಿದೆ. ಕನ್ನಡ ನಾಡಿನ ನಿವಾಸಿಗಳಾದ ನಾವು ಭಾಷೆಯನ್ನು ಸಂಪೂರ್ಣವಾಗಿ ಅರ್ಥೈಸಿಕೊಂಡು ದೈನಂದಿನ ಸಂವಹನ ಕ್ರೀಯೆಯಲ್ಲಿ ಶುದ್ಧ ಕನ್ನಡ ಬಳಸುವ ಅಗತ್ಯವಿದೆ. ಜನನಿ ಮತ್ತು ಜನ್ಮಭೂಮಿ, ಮಾತೃಭಾಷೆ ಅತ್ಯಂತ ಪವಿತ್ರವಾದದ್ದು ಎಂದ ಅವರು ಅನೇಕ ಪದಲಾಲಿತ್ಯದೊಂದಿಗೆ ಉದಾಹರಿಸಿ ಕನ್ನಡ ಭಾಷೆ ಪದಪ್ರಯೋಗ ಮತ್ತು ಅದರ ವಿಸ್ತಾರ ವರ್ಣಿಸಿದರು.ಕನ್ನಡ ಶ್ರೀ ಬಿ.ಎಸ್.ಭಗವಾನ್ ಮಾತನಾಡಿ ಕನ್ನಡ ಸಂಸ್ಕೃತಿ ಸೇವಾ ಭಾರತಿ ಸಂಸ್ಥಾಪಕ ಅಧ್ಯಕ್ಷ ಓಂಕಾರಪ್ರಿಯ ಬಾಗೇಪಲ್ಲಿ ಕನ್ನಡ ಭಾಷಾತಜ್ಞರಾಗಿದ್ದು ರಾಜ್ಯಾದ್ಯಂತ ಶಾಲಾ ಕಾಲೇಜು ಮತ್ತು ಸಾರ್ವಜನಿಕ ಸಮಾರಂಭಗಳಲ್ಲಿ ಕಾರ್ಯಾಗಾರ ಮತ್ತು ಕಮ್ಮಟ ಏರ್ಪಡಿಸಿ ನಾಡಿನ ಭವ್ಯಪರಂಪರೆ ಇತಿಹಾಸ, ಕಲೆ ಸಾಹಿತ್ಯ ಸಂಸ್ಕೃತಿ ಬಗ್ಗೆ ಉಪನ್ಯಾಸಗಳನ್ನು ಮನಮುಟ್ಟುವಂತೆ ನೀಡಿದ್ದಾರೆ ಎಂದರು.ಸಾಹಿತಿ ಮನಸುಳಿ ಮೋಹನ್ ಮಾತನಾಡಿ ಅಪರೂಪದ ಕನ್ನಡ ಭಾಷಾ ವಿಜ್ಞಾನಿ ಕನ್ನಡ ಸಂಸ್ಕೃತಿ ಸೇವಾ ಭಾರತಿ ಸಂಸ್ಥಾಪಕ ಅಧ್ಯಕ್ಷ ಓಂಕಾರಪ್ರಿಯ ಅವರು ಇಂದು ಕನ್ನಡ ಭಾಷೆ ಭವ್ಯತೆಯನ್ನು ಕಣ್ಮುಂದೆ ತೆರೆದಿಟ್ಟು ವಿಸ್ಮಯ ಮೂಡಿಸಿದ್ದಾರೆ. ಕನ್ನಡ ಭಾಷೆ ಅಭಿವೃದ್ಧಿಗೆ ಇಂತಹ ಮಹನೀಯರ ಕೊಡುಗೆ ಅಗತ್ಯ ಎಂದು ಹೇಳಿದರು.
17ಕೆಟಿಆರ್.ಕೆ.04ಃ