ಕನ್ನಡಪ್ರಭ ವಾರ್ತೆ ಚಿತ್ತಾಪುರ
ಸೇತುವೆ ಮೇಲೆ ಸತತ ಎರಡು ದಿನಗಳು ನೀರು ಹರಿದಿದ್ದರಿಂದ ನೀರಿನ ರಭಸಕ್ಕೆ ಸೇತುವೆ ಮೇಲಿನ ಸಿಸಿ ರಸ್ತೆ ಮತ್ತು ಸುರಕ್ಷತೆಗಾಗಿ ಹಾಕಿರುವ ಕಂಬಗಳು ಕಿತ್ತು ಹೊಗಿರುವುದರಿಂದ ಸೇತುವೆ ಮೇಲೆ ಸಿಸಿ ರಸ್ತೆಯು ಚಲ್ಲಾಪಿಲ್ಲಿಯಾಗಿ ಸೇತುವೆಯ ತುಂಬಾ ಬಿದ್ದಿದ್ದರಿಂದ ವಾಹನಗಳು ಸಂಚರಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಸಾರ್ವಜನಿಕರ ಸುರಕ್ಷತೆಯ ಹಿನ್ನಲೆಯಲ್ಲಿ ಸೇತುವೆ ಮೇಲೆ ಬಿದ್ದಿರುವ ಸಿಸಿ ರಸ್ತೆಯ ತೆಗೆಯುವವರೆಗೂ ಮತ್ತು ಸೇತುವೆ ಸುರಕ್ಷತೆ ಬಗ್ಗೆ ಅಧಿಕಾರಿಗಳು ಸ್ಪಷ್ಟೀಕರಣ ನೀಡುವವರೆಗೆ ಸೇತುವೆ ಮೇಲಿನ ರಸ್ತೆ ಸಂಚಾರವನ್ನು ನಿಲ್ಲಿಸಲಾಗಿದೆ. ಲೊಕೋಪಯೊಗಿ ಅಧಿಕಾರಿಗಳು ಸೇತುವೆ ಸುರಕ್ಷತೆ ಬಗ್ಗೆ ವರದಿ ನೀಡಿದ ನಂತರ ಸಾರ್ವಜನಿಕರಿಗೆ ಸಂಚಾರದ ವ್ಯವಸ್ಥೆ ಕಲ್ಪಿಸಲಾಗುವದು ಎಂದು ಡಿವೈಎಸ್‌ಪಿ ಶಂಕರಗೌಡ ಪಾಟೀಲ್ ತಿಳಿಸಿದ್ದಾರೆ.