ಕನ್ನಡಪ್ರಭ ವಾರ್ತೆ ವಿಜಯಪುರ
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನಗರದಲ್ಲಿ 12 ದಿನಗಳಿಂದ ನಡೆಸುತ್ತಿರುವ ಹೋರಾಟದಲ್ಲಿ ಮಾತನಾಡಿದ ಅವರು, ಈಗಿನ ಕಾಂಗ್ರೆಸ್ ಸರ್ಕಾರಕ್ಕೆ ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ವಿದ್ಯುತ್ ಉತ್ಪಾದನೆ ಆಗುತ್ತಿಲ್ಲ, ರೈತರಿಗೆ ಉಚಿತ ವಿದ್ಯುತ್ ಕೊಡುವುದಿಲ್ಲ ಎಂದು ಗೊಂದಲ ಸೃಷ್ಟಿಸುತ್ತಿದ್ದಾರೆ. ಕಾಂಗ್ರೆಸ್‌ನವರು ಸರ್ಕಾರ ನಡೆಸಲು ಅನರ್ಹರರು. ಕೂಡಲೇ ಡಿ.ಕೆ.ಶಿವಕುಮಾರ ರವರು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಕೆಂದು ಆಗ್ರಹಿಸಿದರು.
ಜಿಲ್ಲಾ ಉಪಾಧ್ಯಕ್ಷ ಮಹಾದೇವ ಬನಸೋಡೆ, ಚಡಚಣ ತಾಲೂಕು ಅಧ್ಯಕ್ಷ ವಸಂತ ಬೈರಾಮಡಿ, ಸಂಗಪ್ಪ ಟಕ್ಕೆ, ಹಾಜಿಲಾಲ ಖರ್ಜಗಿ, ಬಸವರಾಜ ಉಕ್ಕಲಿ, ಬಸವರಾಜ ಉಮ್ರಾಣಿ, ಶಿವು ಪಟ್ಟಣ, ಮಲಕು ಕೋಟ್ಯಾಳ, ಸದಾಶಿವ ಜಾಧವ, ಶ್ರೀಶೈಲ ಬಿರಾದಾರ, ಪರಸು ಪೂಜಾರಿ, ಅಂಬು ಚವ್ಹಾಣ, ನಾಗೇಶ ಗಾಯಕವಾಡ, ಚಂದ್ರಕಾಂತ ಬನಸೋಡೆ ಇದ್ದರು.