ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ರಾಜ್ಯ ಸರ್ಕಾರದ ಅಧಿಸೂಚನೆಯನ್ನು ಉಲ್ಲಂಘಿಸಿ ಕೊಳ್ಳೇಗಾಲ ನಗರಸಭೆ ಅನಧಿಕೃತ ಬಡಾವಣೆಗಳಿಗೆ ಆಸ್ತಿ ತೆರಿಗೆದಾರರಿಂದ ದುಪ್ಪಟ್ಟು ತೆರಿಗೆ ವಸೂಲಾತಿ ಮಾಡುತ್ತಿರುವುದನ್ನು ವಿರೋದಿಸಿ ನಗರಸಭೆ ಮುಂಭಾಗ ಸದಸ್ಯೆ ಜಯಮರಿ, ಸಂಘಟನೆಗಳ ಸಹಕಾರದೊಂದಿಗೆ ನಡೆಸುತ್ತಿರುವ ಧರಣಿಯು 5ನೇ ದಿನವಾದ ಭಾನುವಾರವೂ ಮುಂದುವರೆಯಿತು.ಬಿ ಖಾತೆ ಮಾಡಿಕೊಡಲು ನಗರಸಭಾಧಿಕಾರಿಗಳು ಕಂದಾಯ ಪಾವತಿ ವಿಚಾರದಲ್ಲಿ ನಿಯಮ ಉಲ್ಲಂಘಿಸುತ್ತಿದ್ದಾರೆ, ನಿರ್ದಿಷ್ಟ ಮಾಹಿತಿ ನೀಡಿದ ಖಾತೆದಾರರಲ್ಲಿ ಗೊಂದಲ ಉಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಈ ಬಗ್ಗೆ ಗಮನಕ್ಕೆ ತಂದರೂ ಸಹ ನಗರಸಭೆ ಅಧಿಕಾರಿಗಳು ತಾವೇ ಮಾಡಿದ್ದನ್ನೆ ಸಮರ್ಥಿಸಿಕೊಳ್ಳತ್ತಾರೆ ಎಂದು ಅಧಿಕಾರಿಗಳ ವರ್ತನೆ ಖಂಡಿಸಿ ಸದಸ್ಯೆ ಜಯಮರಿ ಭಾನುವಾರ ಸಾಮಾಜಿಕ ಕಾರ್ಯಕರ್ತ ಅಣಗಳ್ಳಿ ದಶರಥ್, ರೈತ ಸಂಘದ ರಾಮಕೖಷ್ಣ, ರಾಜಣ್ಣ ಇನ್ನಿತರರ ಸಹಕಾರದೊಂದಿಗೆ ನಡೆಸುತ್ತಿರುವ
ಧರಣಿ ಭಾನುವಾರ 5ನೇ ದಿನ ಪೂರೈಸಿದ ಹಿನ್ನೆಲೆ ಬಿ ಖಾತೆ ವಿಚಾರವಾಗಿ ನಗರಸಭೆ ಸಂಗ್ರಹಿಸಬೇಕಾದ ಕಂದಾಯಗಳ ಕುರಿತಂತೆ ಹೊರಡಿಸಿರುವ ಕರಪತ್ರವನ್ನು ಪಟ್ಟಣದ ಹಲವೆಡೆ ಜಾಥಾ ನಡೆಸುವ ಮೂಲಕ ವಿತರಿಸಿದರು.ಬಳಿಕ ನಗರಸಭೆ ಮುಂದೆ ಧರಣಿ ನಡೆಸಿ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಆಗಮಿಸುವಂತೆ ಜಯಮರಿ ಪಟ್ಟು ಹಿಡಿದು ಆಗ್ರಹಿಸಿದರು.
ಡೀಸಿಯವರ ಕ್ರಮ ಸರಿಯಾದುದ್ದಲ್ಲ: ದಶರಥ್ಜಿಲ್ಲಾಧಿಕಾರಿಗಳು ಬಿ ಖಾತೆ ವಿಚಾರದಲ್ಲಿನ ಗೊಂದಲಕ್ಕೆ ಉತ್ತರ ನೀಡುವ ಮೂಲಕ ನಿವಾರಿಸಬೇಕು, ಸಂಬಂಧಪಟ್ಟ ಅಧಿಕಾರಿಗಳಲ್ಲಿ ಯಾವ ರೀತಿ ಸಮಸ್ಯೆಗಳಿವೆ ಎಂಬುದನ್ನ ಬಗೆಹರಿಸಬೇಕಿತ್ತು. ಜಯಮರಿ ಅವರು ಧರಣಿ ನಡೆಸಿ ಇಂದಿಗೆ 5 ದಿನವಾದರೂ ಸ್ಥಳಕ್ಕೆ ಬಾರದ ಜಿಲ್ಲಾಧಿಕಾರಿಗಳವರ ವರ್ತನೆ ಸರಿಯಲ್ಲ, ಜಿಲ್ಲಾಧಿಕಾರಿಗಳು ಶೀಘ್ರದಲ್ಲೆ ಸ್ಥಳಕ್ಕೆ ಆಗಮಿಸಿ ಧರಣಿ ನಿರತರ ಸಮಸ್ಯೆ ನಿವಾರಿಸಬೇಕು ಎಂದರು.
------1 ವರ್ಷಕ್ಕೆ ಡಬಲ್ ಟ್ಯಾಕ್ಸ್ ಅನ್ನು ಕಟ್ಟಿಸಿಕೊಳ್ಳುವಂತೆ ತಿಳಿಸಿದೆ. ಆದರೆ, ನಗರಸಭೆ ಅಧಿಕಾರಿಗಳು ಇ-ಸ್ವತ್ತು ಆದ ವರ್ಷದಿಂದಲೂ
ಡಬಲ್ ಟ್ಯಾಕ್ಸ್ ಕಟ್ಟಬೇಕು ಎಂದು ಹೇಳುತ್ತಾರೆ. ಈ ಅಧಿಕಾರವನ್ನು ನಗರಸಭೆಗೆ ಯಾರು ನೀಡಿದರು. ಸರ್ಕಾರಕ್ಕಿಂತಲೂ ನಗರಸಭೆ ದೊಡ್ಡದೇ, ಈ ಸಂಬಂಧ ವಿವಾದವನ್ನು ಜಿಲ್ಲಾಧಿಕಾರಿಗಳು ಬಂದು ಬಗೆಹರಿಸಬೇಕು, ಸೋಮವಾರ ನಗರಸಭೆ ಸಭೆಯಲ್ಲಿ ಪಾಲ್ಗೊಳ್ಳುವೆ, ಸಭೆಯಲ್ಲಿ ಈ ವಿಚಾರ ಚರ್ಚಿಸಿ ಅಲ್ಲೆ ಸಮಸ್ಯೆ ಬಗೆಹರಿದರೆ ಧರಣಿ ಹಿಂಪಡೆವೆ, ಇಲ್ಲ ಮುಂದಿನತೀರ್ಮಾನ ಕೈಗೊಳ್ಳುವೆ- ಜಯಮರಿ ನಗರಸಭಾ ಸದಸ್ಯೆ