ಇಂದ್ರಿಯ ಆರೋಗ್ಯ ಸಪ್ತಾಹದ ಸಮಾರೋಪ ಸಮಾರಂಭ ಯಶಸ್ವಿ

KannadaprabhaNewsNetwork |  
Published : Jul 16, 2026, 03:30 AM IST
ಬೆಳಗಾವಿ | Kannada Prabha

ಸಾರಾಂಶ

ನಗರದ ಶ್ರೀ ಬಿ.ಎಂ.ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯ AYURGRAMA 3.0 ಅಡಿಯಲ್ಲಿ ಆಯೋಜಿಸಲಾದ ಇಂದ್ರಿಯ ಆರೋಗ್ಯ ಸಪ್ತಾಹದ ಸಮಾರೋಪ ಸಮಾರಂಭ ಯಶಸ್ವಿಯಾಗಿ ಜರುಗಿತು.

ಕನ್ನಡಪ್ರಭ ವಾರ್ತೆ ಬೆಳಗಾವಿ

ನಗರದ ಶ್ರೀ ಬಿ.ಎಂ.ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯ AYURGRAMA 3.0 ಅಡಿಯಲ್ಲಿ ಆಯೋಜಿಸಲಾದ ಇಂದ್ರಿಯ ಆರೋಗ್ಯ ಸಪ್ತಾಹದ ಸಮಾರೋಪ ಸಮಾರಂಭ ಯಶಸ್ವಿಯಾಗಿ ಜರುಗಿತು.

ಒಂದು ವಾರದ ಕಾಲ ನಡೆದ ಈ ಅಭಿಯಾನದ ಉದ್ದೇಶ ಆಯುರ್ವೇದದ ಮೂಲಕ ಇಂದ್ರಿಯಗಳ ಆರೋಗ್ಯದ ಮಹತ್ವವನ್ನು ಜನರಲ್ಲಿ ಅರಿವು ಮೂಡಿಸುವುದು ಹಾಗೂ ತಡೆಗಟ್ಟುವ ಆರೋಗ್ಯ ಸೇವೆ ಉತ್ತೇಜಿಸಲಾಗಿತ್ತು.ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಸುಹಾಸಕುಮಾರ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಉಪಪ್ರಾಂಶುಪಾಲ ಡಾ.ಪಿ.ಜಿ.ಜಾಡರ, ಸ್ನಾತಕೋತ್ತರ ವಿಭಾಗದ ಸಂಯೋಜಕ ಡಾ.ರಾಜೇಶ್ವರಿ ಕಾಮತ್, ಡಾ.ಎಂ.ಬಿ.ರಾಮಣ್ಣವರ, ಡಾ.ಸವಿತಾ ಪಡಶೆಟ್ಟಿ, ಡಾ.ಸಂದೀಪ್ ಎಸ್.ಸಾಗರೆ, ಡಾ.ಉಷಾ ಸಾನು ಹಾಗೂ ಡಾ.ಸಿದ್ಧಿ ಪ್ರಭು ದೇಸಾಯಿ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಇಂದ್ರಿಯ ಆರೋಗ್ಯ ಸಪ್ತಾಹದ ಅವಧಿಯಲ್ಲಿ ಹಮ್ಮಿಕೊಳ್ಳಲಾದ ವಿವಿಧ ಚಟುವಟಿಕೆಗಳ ಸಮಗ್ರ ವರದಿಯನ್ನು ಮಂಡಿಸಲಾಯಿತು. ತಜ್ಞರ ಉಪನ್ಯಾಸಗಳು, ಜಾಗೃತಿ ಅಭಿಯಾನಗಳು, ವರ್ತನೆ ಪರಿವರ್ತನೆ ಕಾರ್ಯಕ್ರಮಗಳು, ವಿವಿಧ ಸ್ಪರ್ಧೆಗಳು ಹಾಗೂ ಸಮುದಾಯ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿ ಅನುಷ್ಠಾನವನ್ನು ವರದಿಯಲ್ಲಿ ವಿವರಿಸಲಾಯಿತು. ವಾರದ ಅವಧಿಯಲ್ಲಿ ನಡೆದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಪ್ರಶಂಸಾ ಪತ್ರಗಳನ್ನು ನೀಡಿ ಗೌರವಿಸಲಾಗಿದೆ.ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿಗಳು ನುಕ್ಕಡ್ ನಾಟಕವನ್ನು ಪ್ರದರ್ಶಿಸಿ, ಆಯುರ್ವೇದದ ತತ್ವಗಳ ಮೂಲಕ ಇಂದ್ರಿಯಗಳ ಆರೋಗ್ಯವನ್ನು ಕಾಪಾಡಿಕೊಳ್ಳುವ ಮಹತ್ವವನ್ನು ಪರಿಣಾಮಕಾರವಾಗಿ ಜನರಿಗೆ ತಿಳಿಸಿದರು. ಈ ಸಮಾರಂಭದೊಂದಿಗೆ AYURGRAMA 3.0 ಅಡಿಯಲ್ಲಿ ನಡೆದ ಇಂದ್ರಿಯ ಆರೋಗ್ಯ ಸಪ್ತಾಹ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ತಡೆಗಟ್ಟುವ ಆರೋಗ್ಯ ಸೇವೆ ಹಾಗೂ ಸಮಗ್ರ ಆರೋಗ್ಯ ಸಂರಕ್ಷಣೆಯತ್ತ ಸಂಸ್ಥೆಯ ಬದ್ಧತೆಯನ್ನು ಮತ್ತೊಮ್ಮೆ ಪ್ರತಿಪಾದಿಸಿಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಕ್ಕಿ-ಪಿಕ್ಕಿ ಸಮುದಾಯದ ಸಮಗ್ರ ಅಭಿವೃದ್ಧಿಗೆ ಕ್ರಮ
ಇಬ್ಬರು ಮಕ್ಕಳೊಂದಿಗೆ ತಾಯಿ ನಾಪತ್ತೆ