ಮಹಾನುಭಾವರ ಪುಣ್ಯಸ್ಮರಣೆ ಆಚರಣೆ ಎಲ್ಲರ ಕರ್ತವ್ಯ-ವೇದಾರಾಣಿ

KannadaprabhaNewsNetwork |  
Published : Nov 20, 2024, 12:32 AM IST
ಪೊಟೋ ಪೈಲ್ ನೇಮ್ ೧೯ಎಸ್‌ಜಿವಿ೨  ತಾಲೂಕಿನ   ಗೊಟಗೋಡಿಯ ಉತ್ಸವ ರಾಕ್ ಗಾರ್ಡನ್‌ನ ರಾಜ್‌ಕುಮಾರ್ ಸರ್ಕಲ್‌ನಲ್ಲಿ ದಿ.ಡಾ.ಟಿ.ಬಿ.ಸೊಲಬಕ್ಕನವರರ ನಾಲ್ಕನೇ ಪುಣ್ಯಸ್ಮರಣೆಯನ್ನು ಮಂಗಳವಾರ ಆಚರಿಸಲಾಯಿತು. | Kannada Prabha

ಸಾರಾಂಶ

ಸಮಾಜಕ್ಕೆ ಅನುಪಮ ಕೊಡುಗೆ ನೀಡಿದ ಮಹಾನುಭಾವರ ಪುಣ್ಯಸ್ಮರಣೆಯನ್ನು ಆಚರಿಸುವುದು ಎಲ್ಲರ ಕರ್ತವ್ಯ ಎಂದು ಉತ್ಸವ ರಾಕ್ ಗಾರ್ಡನ್‌ನ ಕ್ಯೂರೇಟರ್ ವೇದಾರಾಣಿ ದಾಸನೂರ ಹೇಳಿದರು.

ಶಿಗ್ಗಾಂವಿ: ಸಮಾಜಕ್ಕೆ ಅನುಪಮ ಕೊಡುಗೆ ನೀಡಿದ ಮಹಾನುಭಾವರ ಪುಣ್ಯಸ್ಮರಣೆಯನ್ನು ಆಚರಿಸುವುದು ಎಲ್ಲರ ಕರ್ತವ್ಯ ಎಂದು ಉತ್ಸವ ರಾಕ್ ಗಾರ್ಡನ್‌ನ ಕ್ಯೂರೇಟರ್ ವೇದಾರಾಣಿ ದಾಸನೂರ ಹೇಳಿದರು.ತಾಲೂಕಿನ ಗೊಟಗೋಡಿಯ ಉತ್ಸವ ರಾಕ್ ಗಾರ್ಡನ್‌ ರಾಜ್‌ಕುಮಾರ್ ಸರ್ಕಲ್‌ನಲ್ಲಿ ಮಂಗಳವಾರ ನಡೆದ ದಿ.ಡಾ.ಟಿ.ಬಿ.ಸೊಲಬಕ್ಕನವರ ನಾಲ್ಕನೇ ಪುಣ್ಯಸ್ಮರಣೆ ಸಮಾರಂಭದಲ್ಲಿ ಮಾತನಾಡಿದರು.ಜ್ಞಾನ ಪೂರ್ಣಂ ಜಗಜ್ಯೋತಿ, ನಿರ್ಮಲ ಮನಸ್ಸುಗಳಿಗೆ ಕರ್ಪೂರದ ಆರತಿ ಎಂಬಂತೆ, ನಾನಾ ಕ್ಷೇತ್ರಗಳಲ್ಲಿ ಸಮಾಜಕ್ಕೆ ಅಪರೂಪದ ಕೊಡುಗೆ ನೀಡಿದ ಮಹನೀಯರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ವೇದಾರಾಣಿ ದಾಸನೂರ ನುಡಿದರು.ಅಣು ಸಮರದ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಲು ೧೯೮೬ರಲ್ಲಿ ‘ನೂರು ಅಡಿಗಳ ಬಣ್ಣದ ನಡೆ, ಅಣು ಸಮರಕ್ಕೆ ಜನತೆ ತಡೆ’ಎಂಬ ತೈಲವರ್ಣದ ಪೇಟಿಂಗ್‌ನ್ನು ಡಾ.ಟಿ.ಬಿ. ಸೊಲಬಕ್ಕನವರ ರಚಿಸಿದ್ದರು. ಇದು ಭಾರತಾದ್ಯಂತ ಪ್ರದರ್ಶನಗೊಂಡಿತ್ತು. ಈ ಪೇಂಟಿಂಗ್‌ನ್ನು ಬೆಂಗಳೂರು ಸಮುದಾಯ ತಂಡದವರು ಹಿರೋಶಿಮಾ, ನಾಗಾಸಾಕಿಯಲ್ಲಿ ನಡೆದ ವಿಶ್ವ ಸಮ್ಮೇಳನದಲ್ಲಿ ಪ್ರದರ್ಶಿಸಿದ್ದರು. ಇದು ಕಲಾವಿದನ ಜ್ಞಾನ ಶಕ್ತಿಯ ಮಹತ್ವ ಎಂತಹುದು ಎಂದು ತಿಳಿಸುತ್ತದೆ ಎಂದು ವಿವರಿಸಿದರು.ಗಾರ್ಡನ್ ಮ್ಯಾನೇಜರ್ ಬಸವರಾಜ ಮಡಿವಾಳರ ಮಾತನಾಡಿ. ಸೊಲಬಕ್ಕನವರೊಂದಿಗಿನ ಸ್ಮರಣೀಯ ಒಡನಾಟವನ್ನು ಸ್ಮರಿಸಿ, ಹಂಚಿಕೊಂಡರು.ಚಿದಾನಂದ ಹಳ್ಳಿ, ನಜೀರ್, ಮಾಲತೇಶ ಕೂಡಲ್, ಮಂಜುನಾಥ ಬಾರ್ಕಿ, ಬಸವರಾಜ ಅರಳಿ, ಮಂಜು ಇಂದೂರ, ಮಂಜು ಸೂರಗೊಂಡ, ವಿರೂಪಾಕ್ಷ ಮುದಗಣ್ಣನವರ ಮತ್ತಿತರರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವೋಟ್ ಚೋರಿ ವಿರುದ್ಧ ಉಡುಪಿ ಕಾಂಗ್ರೆಸ್‌ ಮಾನವ ಸರಪಣಿ
ವೈದ್ಯಕೀಯ ವಿಜ್ಞಾನ ಸಂಸ್ಥೆಯಿಂದ ಉಪನ್ಯಾಸ ಕಾರ್ಯಕ್ರಮ