ಹಾವೇರಿ:ಕೆಲವು ಉಚ್ಚಾಟಿತರು ಪಂಚಮಸಾಲಿ ಸಮಾಜಕ್ಕೆ ಕಳಂಕ ತರುವ ಕೆಲಸ ಮಾಡುತ್ತಿದ್ದಾರೆ. ಗೊಂದಲ ಸೃಷ್ಟಿಸುವವರಿಗೆ ಸಮುದಾಯದ ಜನರೇ ತಕ್ಕ ಉತ್ತರ ನೀಡಲಿದ್ದಾರೆ. ಜನರನ್ನು ಇಬ್ಭಾಗ ಮಾಡುವ ಪ್ರಯತ್ನವನ್ನು ಸಮಾಜ ಸಹಿಸುವುದಿಲ್ಲ ಎಂದು ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ನೂತನ ಅಧ್ಯಕ್ಷ ಶಂಕರ ಬಿಸರಹಳ್ಳಿ ಹೇಳಿದರು.
ನಮ್ಮ ಸಂಘವೇ ಅಧಿಕೃತ ಸಂಘವಾಗಿದೆ. ಸುಮಾರು ಐದು ಸಾವಿರ ಜನರು ಸಭೆಯಲ್ಲಿ ಪಾಲ್ಗೊಂಡಿರುವುದು ಇದಕ್ಕೆ ಸಾಕ್ಷಿಯಾಗಿದೆ. ಉಚ್ಚಾಟಿತರು ಕೂಡಿಕೊಂಡು ಸಮಾಜವನ್ನು ಒಡೆಯಲು ಹುನ್ನಾರ ನಡೆಸುತ್ತಿದ್ದಾರೆ. ಇಂತಹ ಗೊಂದಲಗಳಿಗೆ ಸಮಾಜದ ಜನರು ಕಿವಿಗೊಡಬಾರದು ಎಂದು ಹೇಳಿದರು.
ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ `ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ''''''''ದ ಹೆಸರಿನಲ್ಲಿ ಸಮುದಾಯದ ಒಂದು ಬಣದ ಮುಖಂಡರು ವಾರ್ಷಿಕ ಸಭೆ ನಡೆಸಿದ ಬೆನ್ನಲ್ಲೇ, ಹಾವೇರಿಯಲ್ಲೂ ಅದೇ ಹೆಸರಿನಲ್ಲಿ ಶನಿವಾರ ವಾರ್ಷಿಕ ಮಹಾಸಭೆ ನಡೆಸಲಾಗಿದೆ. ಇದರಿಂದ ಸಂಘದೊಳಗಿನ ಭಿನ್ನಾಭಿಪ್ರಾಯ ಮತ್ತೆ ಮುನ್ನೆಲೆಗೆ ಬಂದಿದೆ ಎಂದರು.ಸಂಘದ ಕಾನೂನು ಸಲಹೆಗಾರ ಸೋಮಶೇಖರ ಕೋತಂಬರಿ ಮಾತನಾಡಿ, ಕೆಲವರನ್ನು ಸಂಘದಿಂದ ಉಚ್ಚಾಟಿಸಲಾಗಿದೆ. ಆದರೆ, ಅವರು ಇಲ್ಲಸಲ್ಲದ ಆರೋಪಗಳನ್ನು ಮಾಡುವ ಮೂಲಕ ಸಮುದಾಯವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸಭೆಯಲ್ಲಿ ಸಂಘದ ಪರಮೇಶ ಪಟ್ಟಣಶೆಟ್ಟಿ, ಬಸವರಾಜ ದಿಂಡೂರ, ಬಾವಿ ಬೆಟ್ಟಪ್ಪ, ಬಿ.ಸಿ. ಉಮಾಪತಿ, ಬಿ. ನಾಗನಗೌಡ, ವಸಂತಾ ಹುಲ್ಲತ್ತಿ, ರಶ್ಮಿ ಕೆ., ಸಿದ್ದೇಶ ಬೇಗೂರ, ವಿರೂಪಾಕ್ಷಪ್ಪ ಬಳ್ಳಾರಿ, ಪಿ.ಡಿ. ಶಿರೂರ, ಶಿವಕುಮಾರ ಬಳಿಗಾರ, ಮಹೇಶ ಹಾವೇರಿ, ವೀರೇಶ ಮತ್ತೀಹಳ್ಳಿ, ಮಲ್ಲಿಕಾರ್ಜುನ ಅಂಗಡಿ, ಮಂಜನಗೌಡ ಪಾಟೀಲ, ಪ್ರಭು ವರ್ದಿ, ಸೋಮು ಎಣ್ಣಿಯವರ, ಕೊಟ್ರೇಶಪ್ಪ ವಿಜಾಪುರ, ಮಲ್ಲಿಕಾರ್ಜುನ ಹಾವೇರಿ, ರೇಣುಕಾ ಶಿರಗುಂಬಿ, ಚಂದ್ರಶೇಖರ ಬಾದಾಮಿ ಇದ್ದರು.
ಪ್ರಮುಖ ನಿರ್ಣಯಕ್ಕೆ ಅಸ್ತು:
2. ಆಡಳಿತ ಮಂಡಳಿಯ ಅವಧಿ ಮುಗಿದ ಬಳಿಕ ಬೈಲಾ ಪ್ರಕಾರ ಸಾರ್ವತ್ರಿಕ ಚುನಾವಣೆ ನಡೆಸಲು ತೀರ್ಮಾನ
4. ಚುನಾವಣಾಧಿಕಾರಿಯನ್ನು ನೇಮಿಸುವ ಅಧಿಕಾರವನ್ನು ಅಧ್ಯಕ್ಷರಿಗೆ ನೀಡಲಾಯಿತು.
6. ಸಂಘದ ಶಿಸ್ತು ಮತ್ತು ಘನತೆಗೆ ಧಕ್ಕೆ ತರುವವರ ವಿರುದ್ಧ ಪುರಾವೆ ಆಧರಿಸಿ ಕ್ರಮ ಕೈಗೊಂಡು, ಮುನ್ನೋಟಿಸ್ ನೀಡಿ ಸ್ಪಷ್ಟನೆ ಪಡೆಯಲು ತೀರ್ಮಾನಿಸಲಾಯಿತು.