ಕಡೂರು ಲಯನ್ಸ್ ಸಂಸ್ಥೆ ಅಧ್ಯಕ್ಷ ಯರದಕೆರೆ ರಾಜಪ್ಪ
ಕಾಯಕ ಮತ್ತು ದಾಹೋಹ ಸಂಸ್ಕೃತಿ ಇಂದಿನದಲ್ಲ. ನಮ್ಮ ಪೂರ್ವಜರ ಕಾಲದಿಂದಲೂ ನಡೆದುಕೊಂಡು ಬಂದಿದೆ. ಕಷ್ಟಪಟ್ಟು ಮಾಡಿದ ಕೆಲಸದಿಂದ ಬಂದ ಹಣದಿಂದ ದಾಸೋಹದ ಮೂಲಕ ಪ್ರೀತಿ ಮತ್ತು ಸಮಾನತೆ ಬದುಕು ಕಂಡಿದ್ದೇವೆ ಎಂದು ಕಡೂರು ಲಯನ್ಸ್ ಸಂಸ್ಥೆ ಅಧ್ಯಕ್ಷ ಯರದಕೆರೆ ರಾಜಪ್ಪ ತಿಳಿಸಿದರು.
ಕಡೂರು ತಾಲೂಕು ಕಸಾಪದಿಂದ ಪಟ್ಟಣದ ಕೆ.ಟಿ.ವನಿತಾ ಮತ್ತು ಎಚ್.ಕೆ.ಮಂಜುನಾಥ್ ದಂಪತಿ ಮನೆಯಲ್ಲಿ ಭಾನುವಾರ ಸಂಜೆ ನಡೆದ ಶ್ರಾವಣ ಮಾಸದ ಮನೆಯಂಗಳದಲ್ಲಿ ಶ್ರಾವಣ ಸಂಜೆ ಮಾಲಿಕೆ 11 ನೇ ದಿನದ ಕಾರ್ಯಕ್ರಮದಲ್ಲಿ ಕಾಯಕ-ದಾಸೋಹ ವಿಷಯ ಕುರಿತು ಉಪನ್ಯಾಸ ನೀಡಿದರು.ಕಾಯಕ ದಾಸೋಹ, ಶ್ರಮ, ಸಂಸ್ಕೃತಿ ಮತ್ತು ಸಮ ಸಮಾಜದ ಮಹತ್ವ ಸಾರುತ್ತದೆ. ಕಾಯಕವೆಂದರೆ ಸತ್ಯಶುದ್ಧವಾಗಿ ಕಷ್ಟಪಟ್ಟು ಮಾಡುವ ಕೆಲಸ. ದಾಸೋಹವೆಂದರೆ ದುಡಿಮೆ ಗಳಿಕೆಯಲ್ಲಿ ಸಮಾಜಕ್ಕೆ ಹಂಚುವುದು. ಈ ಪದಗಳನ್ನು ಬೇರೆ ಮಾಡಲು ಸಾಧ್ಯವಿಲ್ಲ ಎಲ್ಲಿ ಕಾಯಕ ಇರುತ್ತದೆಯೋ ಅಲ್ಲಿ ದಾಸೋಹ ಇರುತ್ತದೆ. ಈ ಎರಡು ಇದ್ದರೆ ಆರೋಗ್ಯ ಇರುತ್ತದೆ ಆರೋಗ್ಯವಿದ್ದರೆ ಬೇರೆಲ್ಲ ಪಡೆಯಲು ಸಾಧ್ಯ. ಈ ಹಿನ್ನೆಲೆಯಲ್ಲಿ ಕಾಯಕ ದಾಸೋಹದ ಪರಿಕಲ್ಪನೆ ಶ್ರೇಷ್ಠ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ವಕೀಲ ಬಿ.ಶಿವಕುಮಾರ್ ಮಾತನಾಡಿ. ಕಸಾಪ ಶ್ರಾವಣ ಮಾಸದ ಒಂದು ತಿಂಗಳ ಕಾಲದ ಶ್ರಾವಣ ಸಂಜೆ ಕಾರ್ಯಕ್ರಮ ವಿಶೇಷ ಮತ್ತು ವಿಭಿನ್ನವಾಗಿದ್ದು ಅನೇಕ ವಿಷಯಗಳ ಕುರಿತು ಉಪನ್ಯಾಸ ನಡೆಯುತ್ತವೆ. ಎಲ್ಲ ಜಾತಿ ವರ್ಗದವರ ಮನೆಯಂಗಳಲ್ಲಿ ಈ ಕಾರ್ಯಕ್ರಮಗಳು ನಡೆಯುವುದರಿಂದ ಪ್ರೀತಿ,ವಿಶ್ವಾಸ ಹೆಚ್ಚಲು ಕಾರಣವಾಗುತ್ತದೆ ಎಂದರು.
ರೋಟರಿ ಸಂಸ್ಥೆ ಮಾಜಿ ಅಧ್ಯಕ್ಷ ಮಂಜುನಾಥ್, ಕೆ.ಟಿ.ವನಿತಾ ಮಂಜುನಾಥ್, ಶ್ರೀನಿವಾಸ್, ಕೆಜಿಐಡಿ ರೇವಣ್ಣಪ್ಪ, ವಸಂತಕುಮಾರ್, ಮಂಜು ನಾಥ್ ಕೆ.ಎನ್, ರೂಪಾ, ಪಿ.ಎಂ.ಉಷಾ, ಲಕ್ಷೀ , ಶಿವಮೊಗ್ಗದ ಶಾರದಮ್ಮ, ಯುವ ವಕೀಲ ಎಚ್.ಎಂ.ವಿಜಯ್ ಮತ್ತಿತರರು ಇದ್ದರು.
ಕಡೂರು ಪಟ್ಟಣದ ಮಂಜುನಾಥ್ ವನಿತಾ ಅವರ ಮನೆಯಂಗಳದಲ್ಲಿ ಕಸಾಪದಿಂದ ಆಯೋಜಿಸಿದ್ದ ಶ್ರಾವಣ ಸಂಜೆ ಕಾರ್ಯಕ್ರಮವನ್ನು ಹಿರಿಯ ವಕೀಲ ಬಿ.ಶಿವಕುಮಾರ್ ಉದ್ಘಾಟಿಸಿದರು.