ಕುಕನೂರು: ಕರ್ನಾಟಕ ವಿಧಾನಪರಿಷತ್ತಿನ 2 ಪದವೀಧರ ಮತ್ತು 2 ಶಿಕ್ಷಕರ ಕ್ಷೇತ್ರಗಳ ಚುನಾವಣೆಯಲ್ಲಿ ಕಾಂಗ್ರೆಸ್ ಜನರ ಮನಸ್ಸಿನಿಂದ ದೂರವಾಗಿದೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಹೇಳಿದರು.
ಯಲಬುರ್ಗಾ ಕ್ಷೇತ್ರದಲ್ಲಿ ರಸ್ತೆ ನಿರ್ಮಾಣ ಮಾಡಿದ್ದೇವೆ. ಆದರೆ ಈಗಿನವರಿಗೆ ರಸ್ತೆಯ ಒಂದು ಗುಂಡಿ ಸಹ ಮುಚ್ಚಲು ಹಾಗೂ ರಸ್ತೆ ಬದಿ ಬೆಳೆದಿರುವ ಮುಳ್ಳುಗಿಡಗಳನ್ನು ತೆರವು ಮಾಡಲು ಆಗುತ್ತಿಲ್ಲ. ಬರಿದಾದ ಕೆರೆಗಳಿಗೆ ನೀರು ತುಂಬಿಸಲು ಆಗುತ್ತಿಲ್ಲ. ಅಭಿವೃದ್ಧಿ ಕೆಲಸಗಳು ಏನಿದ್ದರೂ ಅದು ಬಿಜೆಪಿಯಿಂದ ಮಾತ್ರ ಸಾಧ್ಯ ಎಂದರು.
ವಿಪ ಸದಸ್ಯ ಶಶಿಲ್ ನಮೋಶಿ ಮಾತನಾಡಿ, 2028ರ ಚುನಾವಣೆಗೆ ವಿಪ ಸ್ಥಾನಗಳ ಗೆಲುವು ಮುನ್ನುಡಿಯಾಗಿದೆ ಎಂದು ಹೇಳಿದರು.ಯಲಬುರ್ಗಾ ಬಿಜೆಪಿ ಮಂಡಲ ಅಧ್ಯಕ್ಷ ಮಾರುತಿ ಹೊಸಮನಿ, ಮುಖಂಡ ಸಿ.ಎಚ್. ಪೊಪಾ ಮಾತನಾಡಿದರು. ಪ್ರಮುಖರಾದ ವೀರಣ್ಣ ಹುಬ್ಬಳ್ಳಿ, ಹಂಚ್ಯಾಳಪ್ಪ ತಳವಾರ, ವಕೀಲ ಶಂಕ್ರಪ್ಪ ಸುರಪುರ, ಅಯ್ಯನಗೌಡ ಕೆಂಚಮ್ಮನವರ್, ಶಿವಕುಮಾರ ನಾಗಲಾಪುರಮಠ, ವಿಶ್ವನಾಥ ಮರಿಸಬಪ್ಪನವರ್, ಬಸಮಲಿಂಗಪ್ಪ ಭೂತೆ, ಶರಣಪ್ಪ ಬಣ್ಣದಬಾವಿ, ಬಸವರಾಜ ರಾಜೂರು, ಅಮರೇಶ ಹುಬ್ಬಳ್ಳಿ, ಶರಣಪ್ಪ ಈಳಗೇರ, ಶೇಖರಗೌಡ, ಸೋಮಶೇಖರಗೌಡ ಹರ್ತಿ, ಸಂತೋಷಿಮಾ ಜೋಶಿ, ಪ್ರಭು ಹಳ್ಳಿ, ಕರಬಸಯ್ಯ ಬಿನ್ನಾಳ, ಲಕ್ಷ್ಮಣ ಕಾಳಿ, ಕನಕಪ್ಪ ಬ್ಯಾಡರ್, ನಾಗರಾಜ ವೆಂಕಟಾಪುರ, ಪಪಂ ಸದಸ್ಯರಾದ ಸಿದ್ದು ಉಳ್ಳಾಗಡ್ಡಿ, ಬಾಲರಾಜ ಗಾಳಿ, ಮಲ್ಲಿಕಾರ್ಜುನ ಚೌದ್ರಿ ಇತರರಿದ್ದರು.