ಕ್ಷೇತ್ರದ ರಾಜಕೀಯದಲ್ಲಿ ಯುವ ನಾಯಕರು ಸ್ವತಂತ್ರವಾಗಿ ಬೆಳೆದು ತಮ್ಮದೇ ಆದ ಗುರುತನ್ನು ಮೂಡಿಸಿಕೊಳ್ಳಬೇಕು ಎಂಬುದು ರವೀಂದ್ರ ಅವರ ಬಯಕೆಯಾಗಿತ್ತು.

ಹರಪನಹಳ್ಳಿ: ನಮ್ಮ ಎಂ.ಪಿ.ಪ್ರಕಾಶ್ ಕುಟುಂಬಕ್ಕೆ ನೀವು ನೀಡಿರುವ ಸಹಕಾರ ಮತ್ತು ಬೆಂಬಲ ಸಾಕು. ನಮ್ಮ ಕುಟುಂಬಕ್ಕೆ ತೀರಿಸಲಾಗದಷ್ಟು ಸಹಾಯವನ್ನು ನೀವೆಲ್ಲರೂ ಮಾಡಿದ್ದೀರಿ. ಇನ್ನು ಮುಂದೆ ನಮ್ಮ ಕುಟುಂಬದ ಬೆಂಬಲದ ನಿರೀಕ್ಷೆಯಲ್ಲಿರದೆ, ನೀವೆಲ್ಲರೂ ಒಗ್ಗಟ್ಟಿನಿಂದ ಶ್ರಮಿಸಿ ಕ್ಷೇತ್ರದಲ್ಲಿ ಸ್ವತಂತ್ರರಾಗಿ ಗುರುತಿಸಿಕೊಳ್ಳಿ ಎಂದು ಕಾರ್ಯಕರ್ತರಿಗೆ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ತಿಳಿಸಿದ್ದಾರೆ.ನಗರದ ಕಾಂಗ್ರೆಸ್ ಭವನದಲ್ಲಿ ನಡೆದ ಮಾಜಿ ಶಾಸಕ ದಿ.ಎಂ.ಪಿ. ರವೀಂದ್ರ ಅವರ 8 ನೇ ಪುಣ್ಯಸ್ಮರಣೆ ನುಡಿ ನಮನ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಸೋಮವಾರ ಅವರು ಮಾತನಾಡಿದರು.ಕ್ಷೇತ್ರದ ರಾಜಕೀಯದಲ್ಲಿ ಯುವ ನಾಯಕರು ಸ್ವತಂತ್ರವಾಗಿ ಬೆಳೆದು ತಮ್ಮದೇ ಆದ ಗುರುತನ್ನು ಮೂಡಿಸಿಕೊಳ್ಳಬೇಕು ಎಂಬುದು ರವೀಂದ್ರ ಅವರ ಬಯಕೆಯಾಗಿತ್ತು. ಕುಟುಂಬದ ರಾಜಕೀಯ ಹಿನ್ನೆಲೆಯನ್ನು ಮೀರಿ ಸ್ವಂತ ಸಾಮರ್ಥ್ಯ ಮತ್ತು ಜನರ ಬೆಂಬಲದೊಂದಿಗೆ ನಾಯಕತ್ವ ರೂಪಿಸಿಕೊಳ್ಳುವಂತೆ ಅವರು ಪ್ರೇರೇಪಿಸುತ್ತಿದ್ದರು ಎಂದು ತಿಳಿಸಿದರು.ಹರಪನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ ಮಾತನಾಡಿ, ಎಂ.ಪಿ. ರವೀಂದ್ರ ಅವರು ಕ್ಷೇತ್ರದ ರಾಜಕೀಯ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ನಾಯಕರು. ಜನರ ಆಶೋತ್ತರಗಳಿಗೆ ಸ್ಪಂದಿಸುವ ಮೂಲಕ ಜನಪ್ರತಿನಿಧಿಯ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದರು. ಅವರ ಸೇವಾ ಕಾರ್ಯಗಳು ಹಾಗೂ ಕ್ಷೇತ್ರದ ಅಭಿವೃದ್ಧಿಗೆ ನೀಡಿದ ಕೊಡುಗೆಗಳು ಸದಾ ಸ್ಮರಣೀಯವಾಗಿದ್ದು, ಅವರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ ಎಂದು ತಿಳಿಸಿದರು. ಚಿಗಟೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುಬೇರ್ ಗೌಡ್ರು, ತಾ.ಪಂ ಮಾಜಿ ಸದಸ್ಯ ಮೈದೂರು ರಾಮಪ್ಪ, ಮಾತನಾಡಿದರು.ಎಂ.ಪಿ.ರವೀಂದ್ರ ಪ್ರತಿಷ್ಠಾನದ ಅಧ್ಯಕ್ಷ ಗೌತಮ ಪ್ರಭು, ತಾಲ್ಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷ ಉದಯ್ ಶಂಕರ್, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಕಂಚಿಕೇರಿ ಜಯಲಕ್ಷ್ಮೀ, ಹಲುವಾಗಲು ವನಜಾಕ್ಷಮ್ಮ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಆರ್.ಶಶಿಕುಮಾರ್ ನಾಯ್ಕ್, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಕನಕನಬಸ್ಸಪುರ ಮಂಜುನಾಥ, ಪ್ರಚಾರ ಸಮಿತಿ ಅಧ್ಯಕ್ಷ ದೇವೇಂದ್ರ ಗೌಡ,ಟಿಎಪಿಸಿಎಂಎಸ್ ಸಹಕಾರ ಸಂಘದ ಅಧ್ಯಕ್ಷ ತೆಲಿಗಿ ಉಮಾಕಾಂತ್, ನಗರಸಭೆ ಮಾಜಿ ಸದಸ್ಯ ಅಬ್ದುಲ್ ರೆಹಮಾನ್ ಸಾಹೇಬ್, ಗೊಂಗಡಿ ನಾಗರಾಜ್, ಲಾಟಿ ದಾದಾಪೀರ್, ಪೈಲ್ವಾನ್ ಗಣೇಶ್, ಮಲ್ಲಿಕಾರ್ಜುನ ಸ್ವಾಮಿ ಕಲ್ಮಠ ,ಚಿಕ್ಕೇರಿ ಬಸಪ್ಪ, ಗುಡಿ ನಾಗರಾಜ್, ಟಿ.ವೆಂಕಟೇಶ್, ಅಗ್ರಹಾರ ರವಿ, ಎಲ್. ಮಂಜಾನಾಯ್ಕ್, ಗುಡೇಕೋಟೆ ಅಂಜಿನಪ್ಪ, ಅಗ್ರಹಾರ ಹಾಲೇಶ, ಯಲ್ಲಾಪುರ ಕೆಂಚಪ್ಪ, ಎರೆಡೇತ್ತಿನಹಳ್ಳಿ ಹೊನ್ನಪ್ಪ, ಭೋವಿ ವಾಸುದೇವ, ಹರಿಯಮ್ಮನಹಳ್ಳಿ ಶಿವರಾಜ್, ಪ್ರಸಾದ್ ಕಾವಡಿ, ಮಲ್ಲಿಕಾರ್ಜುನ, ಅಲಗಿಲವಾಡ ಶಂಕರ್, ಸಿದ್ದಲಿಂಗ ಸ್ವಾಮಿ, ಚಿಗಟೇರಿ ಕರಿಬಸಪ್ಪ, ಕಂಚಿಕೆರೆ ಎಂ.ಬಿ.ಅಂಜಿನಪ್ಪ, ಅರಸೀಕೆರೆ ನಾಗರಾಜ್, ಉಮಾಮಹೇಶ್ವರಿ, ಸುಮಾಜಗದೀಶ ಸೇರಿದಂತ್ತೆ ಕಾಂಗ್ರೆಸ್ ಪಕ್ಷದ ಮುಖಂಡರು,ಕಾರ್ಯಕರ್ತರು ಹಾಗೂ ಎಂ.ಪಿ.ರವೀಂದ್ರ ಅಭಿಮಾನಿ ಬಳಗದವರು ಉಪಸ್ಥಿತರಿದ್ದರು.