ಕೈ ಪಕ್ಷ ಪಾಕಿಸ್ತಾನ-ಬಾಂಗ್ಲಾದವರ ಮತ ಕೈಬಿಟ್ರೆ ಸಹಿಸಲ್ಲ

KannadaprabhaNewsNetwork |  
Published : Oct 02, 2026, 01:15 AM IST
1ಕೆಆರ್ ಎಂಎನ್ 1.ಜೆಪಿಜಿರಾಮನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿರುವ ವಿಶೇಷ ಚೇತನರನ್ನು ವಿಪಕ್ಷ ನಾಯಕ ಆರ್.ಅಶೋಕ್ ಭೇಟಿ ನೀಡಿ ಅಹವಾಲು ಆಲಿಸಿದರು. | Kannada Prabha

ಸಾರಾಂಶ

ರಾಮನಗರ: ರಾಜ್ಯದ ಮತಗಳು ಕೈಬಿಟ್ಟು ಹೋದರು ಸುಮ್ಮನಿರುತ್ತೀರ. ಅದೇ ಪಾಕಿಸ್ತಾನ-ಬಾಂಗ್ಲಾದೇಶದವರ ಮತ ಕೈಬಿಟ್ಟರೆ ನಿಮಗೆ ಹೊಟ್ಟೆ ಉರಿ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದರು

ರಾಮನಗರ: ರಾಜ್ಯದ ಮತಗಳು ಕೈಬಿಟ್ಟು ಹೋದರು ಸುಮ್ಮನಿರುತ್ತೀರ. ಅದೇ ಪಾಕಿಸ್ತಾನ-ಬಾಂಗ್ಲಾದೇಶದವರ ಮತ ಕೈಬಿಟ್ಟರೆ ನಿಮಗೆ ಹೊಟ್ಟೆ ಉರಿ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದರು.

ರಾಮನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಳೆದ 11 ದಿನಗಳಿಂದ ವಿಶೇಷ ಚೇತನರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಹೋರಾಟ ಸ್ಥಳಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತದಾರರ ಪಟ್ಟಿಯಲ್ಲಿ ಹೆಸರು ಕೈಬಿಟ್ಟಿರುವ ಬಗ್ಗೆ ಶೀಘ್ರದಲ್ಲೇ ದಾಖಲೆ ಬಿಡುಗಡೆ ಮಾಡುತ್ತೇನೆ. ಎಸ್ಐಆರ್ ಪ್ರಕ್ರಿಯೆಯಲ್ಲಿ ಷಡ್ಯಂತ್ರ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅಶೋಕ್, ರಾಜ್ಯ ಚುನಾವಣಾ ಆಯೋಗ ಮೊನ್ನೆ ಕಾರ್ಪೊರೇಷನ್ ಎಲೆಕ್ಷನ್ ಪಟ್ಟಿ ಬಿಡುಗಡೆ ಮಾಡಿದೆ. ಸುಮಾರು 40 ಲಕ್ಷ ಮತದಾರರನ್ನು ಪಟ್ಟಿಯಿಂದ ಕೈಬಿಟ್ಟಿದ್ದಾರೆ. ಕಾಂಗ್ರೆಸ್ ನಾಯಕರು ರಾಜ್ಯದ ಮತಗಳನ್ನು ಕೈಬಿಟ್ಟರೆ ಸುಮ್ಮನಿರುತ್ತಾರೆ. ಪಾಕಿಸ್ತಾನ-ಬಾಂಗ್ಲಾದೇಶದವರ ಮತ ಕೈಬಿಟ್ಟರೆ ಸಹಿಸುವುದಿಲ್ಲ. ಈ ಕಾಂಗ್ರೆಸ್ ಸರ್ಕಾರವನ್ನು ಓಡಿಸಲು ಜನ ರೆಡಿ ಆಗಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್‌ನವರ ಮೇಲೆ ಎಷ್ಟು ಕೇಸ್ ಹಾಕುತ್ತಾರೊ ಹಾಕಲಿ ಎಂದು ಸವಾಲು ಹಾಕಿದರು.

ಅನ್ನದಾತ ರೈತನನ್ನು ರಾಜ್ಯ ಸರ್ಕಾರ ಭಿಕ್ಷುಕರ ರೀತಿ ಕಾಣುತ್ತಿದೆ. ಭಾರತ್ ಜೋಡೊ ಸಂಘದಂತಹ ಕಾಂಗ್ರೆಸ್ಸಿನ ಗಂಜಿ ಕೇಂದ್ರಕ್ಕೆ 2.5 ಸಾವಿರ ಕೋಟಿ ರುಪಾಯಿ ಕೊಡುತ್ತೀದ್ದೀರಿ. ಸರ್ಕಾರ ಘೋಷಣೆ ಮಾಡಿರುವ 2,500 ರು. ಯಾವುದಕ್ಕೂ ಸಾಲುವುದಿಲ್ಲ. ರೈತರಿಗೆ ಕೇವಲ ಒಂದು ಸಾವಿರ ಕೋಟಿ ಏನಕ್ಕೂ ಸಾಲದಾಗಿದೆ. ರಾಜ್ಯದಾದ್ಯಂತ ಬರ ಅಧ್ಯಯನಕ್ಕಾಗಿ ನಾನು ಹಾಗೂ ಛಲವಾದಿ ನಾರಾಯಣಸ್ವಾಮಿ ಇಬ್ಬರು ಪ್ರವಾಸ ಮಾಡುತ್ತಿದ್ದೇವೆ ಎಂದರು.

ರಾಜ್ಯದಲ್ಲಿ ಬಿಜೆಪಿಗಿಂತ ಈಗ ಕಾಂಗ್ರೆಸ್ ಪಕ್ಷದವರೇ ಗ್ಯಾರಂಟಿಯಿಂದ ಅಭಿವೃದ್ಧಿಗೆ ಹಣ ಸಿಗುತ್ತಿಲ್ಲ ಅಂತ ಟೀಕೆ ಮಾಡುತ್ತಿದ್ದಾರೆ. ವೋಟ್ ಹಾಕಿಸಿಕೊಳ್ಳುವ ತನಕ ಗ್ಯಾರಂಟಿ ಬೇಕಿತ್ತು. ಈಗ ಮಾತ್ರ ಗ್ಯಾರಂಟಿ ಕಷ್ಟ ಆಗುತ್ತಿದಿಯೇ. ಶೀಘ್ರದಲ್ಲೇ ಶೇ.50ರಷ್ಟು ಗ್ಯಾರಂಟಿ ರದ್ದು‌ ಮಾಡುತ್ತಾರೆ. ಅದಕ್ಕಾಗಿ ಸದ್ಯಕ್ಕೆ ಗ್ಯಾರಂಟಿ ನಿಲ್ಲಿಸಿದ್ದಾರೆ.

ಗ್ಯಾರೆಂಟಿ ಯೋಜನೆಗಳಿಂದಾಗಿ ಮುಂದೆ ಅಧಿಕಾರಿಗಳಿಗೆ ಸಂಬಳ ಕೊಡೊಕು ಸರ್ಕಾರದಲ್ಲಿ ಹಣ ಇರಲ್ಲ ಎಂದು ಪೌರಾಡಳಿತ ಸಚಿವ ಹೆಚ್.ಸಿ.ಬಾಲಕೃಷ್ಣ ಹೇಳಿದ್ದಾರೆ. ಗ್ಯಾರಂಟಿಯಿಂದ ಒದ್ದಾಡುತ್ತಿರುವ ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ಮತದಾರರೇ ಬುದ್ಧಿ ಕಲಿಸುತ್ತಾರೆ ಎಂದು ತಿರುಗೇಟು ನೀಡಿದರು.

ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕುಟುಂಬದ ಬಗ್ಗೆ ಸ್ವಾಮೀಜಿಯೊಬ್ಬರು ಅವಹೇಳನ ಮಾಡಿದ್ದಾರೆ. ಆ ಸ್ವಾಮೀಜಿ ರಾಜ್ಯದ ಜನತೆ ಎದುರು ಕ್ಷಮೆ ಕೇಳಬೇಕು. ಒಬ್ಬ ಸ್ವಾಮೀಜಿಯಾಗಿ ಇಂತಹ ಹೇಳಿಕೆ ಕೊಡಲು ನಾಚಿಕೆ ಆಗುವುದಿಲ್ಲವೇ ಎಂದು ಅಶೋಕ್ ಕಿಡಿಕಾರಿದರು.

ಈ ಸಂದರ್ಭದಲ್ಲಿ ಬಿಜೆಪಿ ರಾಮನಗರ ಮಂಡಲ ಅಧ್ಯಕ್ಷ ಗೌತಮ್ ಗೌಡ, ಬಿಜೆಪಿ ಮಾಧ್ಯಮ ವಿಭಾಗ ಸದಸ್ಯ ರುದ್ರದೇವರು, ಮುಖಂಡರಾದ ಹುಲುವಾಡಿ ದೇವರಾಜು, ಎಸ್.ಆರ್.ನಾಗರಾಜ್ ಮತ್ತಿತರರು ಹಾಜರಿದ್ದರು.

ಬಾಕ್ಸ್ ... ...............

ವಿಶೇಷ ಚೇತನರ ಅಹವಾಲು ಆಲಿಸಿದ ಅಶೋಕ್‌

ಕಳೆದ 11 ದಿನಗಳಿಂದ ಬಿಸಿಲು, ಮಳೆ ನಡುವೆಯೂ ಬಾಕಿ ಮಾಸಾಶನ, ಉದ್ಯೋಗ ಕಾಯಂ ಹಾಗೂ ಕನಿಷ್ಠ ವೇತನ ಸೇರಿ ಹಲವು ಬೇಡಿಕೆಗಳಿಗಾಗಿ ಹೋರಾಟ ಮಾಡುತ್ತಿದ್ದೇವೆ. ಸರ್ಕಾರ ನಮ್ಮ ಹೋರಾಟದ ಬಗ್ಗೆ ಗಮನ ಹರಿಸುತ್ತಿಲ್ಲ. ಸ್ಥಳಕ್ಕೆ ಒಂದು ದಿನವೂ ಜಿಲ್ಲಾಧಿಕಾರಿ ಬಂದು ನಮ್ಮ ಮನವಿ ಸ್ವೀಕಾರ ಮಾಡಿಲ್ಲ. ನಮ್ಮ ಬೇಡಿಕೆ ಈಡೇರಿಸಿ ಇಲ್ಲಾ ದಯಾಮರಣ ನೀಡಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಎದುರು ವಿಶೇಷ ಚೇತನರ ಅಳಲು ತೋಡಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿಂದ ಅಶೋಕ್, ಸರ್ಕಾರದ ಮೇಲೆ ಒತ್ತಡ ಹೇರಿ ನಿಮ್ಮ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.1ಕೆಆರ್ ಎಂಎನ್ 1.ಜೆಪಿಜಿ

ರಾಮನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿರುವ ವಿಶೇಷ ಚೇತನರನ್ನು ವಿಪಕ್ಷ ನಾಯಕ ಆರ್.ಅಶೋಕ್ ಭೇಟಿ ನೀಡಿ ಅಹವಾಲು ಆಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅರಸೀಕೆರೆಯ ಶಾನುಭೋಗರ ಬೀದಿಯಲ್ಲಿ ಸಂಭ್ರಮದ ಗಣೇಶೋತ್ಸವ
ಹಿಂದೂ ಸಮಾಜ ವಿಭಜಿಸುವ ಷಡ್ಯಂತ್ರ ನಡೆಯುತ್ತಿದೆ: ಶ್ರೀಕಾಂತ್ ಶೆಟ್ಟಿ