- ಸಾರಥಿ ಗ್ರಾಮದಲ್ಲಿ ದೇಗುಲ ಉದ್ಘಾಟನೆ ಸಮಾರಂಭದಲ್ಲಿ ಹರಿಹರ ಶಾಸಕ ಹರೀಶ್
ಕನ್ನಡಪ್ರಭ ವಾರ್ತೆ ಹರಿಹರ
ನಾಡಿನಲ್ಲಿ ರೆಡ್ಡಿ ಸಮಾಜದವರು ಯಾವುದೇ ಸಂದರ್ಭ ಬಂದರೂ ಸ್ವಾಭಿಮಾನ ಬಿಟ್ಟು ಬದುಕುವಂಥವರಲ್ಲ. ರೆಡ್ಡಿ ಸಮಾಜದ ಜನರು ರೆಡ್ಡಿ ಲಿಂಗಾಯತರು ಎಂದು ಬಿಂಬಿತವಾಗಿದ್ದು, ಮಧ್ಯ ಕರ್ನಾಟಕ, ಹಿರಿಯೂರು, ಕಡೂರು ಸೇರಿದಂತೆ ಇತರೆ ಭಾಗದಲ್ಲಿ ಹೆಚ್ಚು ಜನಸಂಖ್ಯೆ ಹೊಂದಿದ್ದಾರೆ ಎಂದು ಶಾಸಕ ಬಿ.ಪಿ. ಹರೀಶ್ ಹೇಳಿದರು.ತಾಲೂಕಿನ ಸಾರಥಿ ಗ್ರಾಮದಲ್ಲಿ ಸೋಮವಾರ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನ ಉದ್ಘಾಟನೆಯ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಗ್ರಾಮದಲ್ಲಿ ಹೇಮರೆಡ್ಡಿ ಮಲ್ಲಮ್ಮನವರ ವಿಶಾಲವಾದ ದೊಡ್ಡ ದೇವಸ್ಥಾನ ನಿರ್ಮಾಸಿದ್ದು ಶ್ಲಾಘನೀಯ. ಸುಮಾರು ₹2 ಕೋಟಿ ಸಂಗ್ರಹಿಸಿ ಗ್ರಾಮಸ್ಥರು, ಭಕ್ತರು ಒಗ್ಗಟ್ಟಿನಿಂದ ಆ ಧರ್ಮ ಕಾರ್ಯ ಸಂಪೂರ್ಣಗೊಳಿಸಿದ್ದು ಅನುಕರಣೀಯ ಎಂದರು.
ರೆಡ್ಡಿ ಸಮಾಜದ ಜನರು ಕೂಡ ಎಲ್ಲರಂತೆ ತಮ್ಮ ಮಕ್ಕಳಿಗೂ ಉತ್ತಮ ಶಿಕ್ಷಣ ಕೊಡಿಸಿ ಅವರಿಗೆ ಧರ್ಮ, ಸಂಸ್ಕಾರ, ಪರಂಪರೆಯ ವಿಚಾರಗಳನ್ನು ತಿಳಿಸಬೇಕು. ಆಗ ಅವರು ಕೂಡ ಭಾರತದ ಉತ್ತಮ ಪ್ರಜೆಗಳಾಗಿ ಹೊರಹೊಮ್ಮವರು ಎಂದು ಹೇಳಿದರು.
ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್ ಮಾತನಾಡಿ, ಸಾರಥಿ ಗ್ರಾಮದಲ್ಲಿ ನಿರ್ಮಿಸಿರುವ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನ ಮುಂದಿನ ದಿನಗಳಲ್ಲಿ ಧಾರ್ಮಿಕ ಕೇಂದ್ರವಾಗಿ ಹಾಗೂ ಶಕ್ತಿದೇವತೆಯಾಗಿ ರೂಪಗೊಳ್ಳುತ್ತದೆ. ಈ ದೇವಸ್ಥಾನದಲ್ಲಿ ಮುಂದಿನ ದಿನಗಳಲ್ಲಿ ಸತ್ಸಂಗ ಮುಂತಾದ ಧಾರ್ಮಿಕ ಸಾಮಾಜಿಕ ಸಾಂಸ್ಕೃತಿಕ ಸದ್ವಿಚಾರಗಳಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ ಎಂದು ಹೇಳಿದರು.
ಷಡಕ್ಷರಿ ಶ್ರೀ, ವಿಶ್ವಕರ್ಮ ಶಂಕರಾತ್ಮಾನಂದ ಸರಸ್ವತಿ ಶ್ರೀ, ಪದ್ಮಸಾಲಿ ಸಮಾಜದ ಪ್ರಭುಲಿಂಗ ಶ್ರೀ, ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಶ್ರೀ, ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಶ್ರೀ, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ, ಕಾಂಗ್ರೆಸ್ ಮುಖಂಡ ಜಿ.ಬಿ. ಹಾಲೇಶ್ ಗೌಡ ಗುತ್ತೂರು ಗ್ರಾಪಂ ಅಧ್ಯಕ್ಷ ಪರಶುರಾಮ್, ನಡುಮನೆ ನಿಂಗಪ್ಪ, ಎಸ್.ಬಿ. ರಾಜಶೇಖರ, ಹೇಮರೆಡ್ಡಿ ಮಲ್ಲಮ್ಮ ಟ್ರಸ್ಟ್ ಅಧ್ಯಕ್ಷ ಜಿ ಹನುಮಂತಗೌಡ, ದಿಟೂರು ಶೇಖರಪ್ಪ, ಕಡ್ಲೆಗೊಂದಿ ಹನುಮಂತಪ್ಪ, ನೀರು ಬಳಕೆದಾರರ ಸಂಘದ ದ್ಯಾಮಪ್ಪ ರೆಡ್ಡಿ ಇತರರು ಹಾಜರಿದ್ದರು.
-27HRR02: