ಸಮಾಜ ಸರಿದಾರಿಯಲ್ಲಿ ಸಾಗಲು ಜಂಗಮರ ಕೊಡುಗೆ ಅಪಾರ: ಶಾಸಕ ಬಸವರಾಜ ಶಿವಣ್ಣನವರ

KannadaprabhaNewsNetwork |  
Published : Sep 01, 2025, 01:04 AM IST
ಬ್ಯಾಡಗಿಯಲ್ಲಿ ಜರುಗಿದ ಜಗದ್ಗುರು ಪಂಚಾಚಾರ‍್ಯ ವೇದಿಕೆಯ ಆಶ್ರಯದಲ್ಲಿ ಸಮುದಾಯ ಭವನ ಕಟ್ಟಡಕ್ಕೆ ಶಾಸಕ ಬಸವರಾಜ ಶಿವಣ್ಣನವರ ಭೂಮಿಪೂಜೆ ನೆರವೇರಿಸಿದರು. | Kannada Prabha

ಸಾರಾಂಶ

ಸಮಾಜದ ಜನರಲ್ಲಿ ವೈದಿಕ ವಿಚಾರ ಬಿತ್ತುವ ಮೂಲಕ ಸಮಾಜವು ಸರಿದಾರಿಯಲ್ಲಿ ನಡೆಯುವ ನಿಟ್ಟಿನಲ್ಲಿ ಜಂಗಮ ವರ್ಗದ ಕೊಡುಗೆ ಬಹಳಷ್ಟಿದೆ.

ಬ್ಯಾಡಗಿ: ಪಂಚಾಚಾರ್ಯ ಯುವ ವೇದಿಕೆ ಆಶ್ರಯದಲ್ಲಿ ಪಟ್ಟಣದ ರಾಮಗೊಡನಹಳ್ಳಿ ರಸ್ತೆಯಲ್ಲಿ ನಿರ್ಮಿಸುತ್ತಿರುವ ನೂತನ ಸಮುದಾಯ ಭವನ ನಿರ್ಮಾಣಕ್ಕೆ ಅರಣ್ಯ ಅಭಿವೃದ್ಧಿ ನಿಗಮ ಅಧ್ಯಕ್ಷ ಹಾಗೂ ಶಾಸಕ ಬಸವರಾಜ ಶಿವಣ್ಣನವರ ಭೂಮಿಪೂಜೆ ನೆರವೇರಿಸಿದರು.

ಈ ವೇಳೆ ಮಾತನಾಡಿದ ಅವರು, ಸಮಾಜದ ಜನರಲ್ಲಿ ವೈದಿಕ ವಿಚಾರ ಬಿತ್ತುವ ಮೂಲಕ ಸಮಾಜವು ಸರಿದಾರಿಯಲ್ಲಿ ನಡೆಯುವ ನಿಟ್ಟಿನಲ್ಲಿ ಜಂಗಮ ವರ್ಗದ ಕೊಡುಗೆ ಬಹಳಷ್ಟಿದೆ. ಒಂದೊಮ್ಮೆ ಜಂಗಮರ ಮಂತ್ರಘೋಷಗಳಿಲ್ಲದೇ ಬಹುತೇಕ ಧಾರ್ಮಿಕ ಕೈಂಕರ‍್ಯಗಳು ಸೇರಿದಂತೆ ಯಾವುದೇ ಹಬ್ಬ ಹರಿದಿನಗಳು ಪೂರ್ಣಗೊಳ್ಳಲು ಸಾಧ್ಯವಿಲ್ಲ ಎಂದರು.

ಮಾಜಿ ಶಾಸಕ ಸುರೇಶಗೌಡ ಪಾಟೀಲ ಮಾತನಾಡಿ, ಜಂಗಮರು ಪಂಚಪೀಠಗಳ ತತ್ವ ಸಿದ್ಧಾಂತ ಮೈಗೂಡಿಸಿಕೊಂಡು ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎನ್ನುವ ಸಂದೇಶ ಪರಿಪಾಲಿಸುತ್ತಿದ್ದಾರೆ ಎಂದರು.

ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಸ್ವಾತಂತ್ರ್ಯ ದೊರೆತು 75 ವರ್ಷ ಗತಿಸಿದರೂ ಜಂಗಮ ಸಮಾಜ ಇಂದಿಗೂ ಆರ್ಥಿಕ ಹಾಗೂ ಶೈಕ್ಷಣಿಕ ಸಾಮಾಜಿಕವಾಗಿ ಹಿಂದುಳಿದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಈ ವೇಳೆ ಆರ್.ವಿ. ಬೆಳಕೇರಿಮಠ ವಿ.ವಿ. ಹಿರೇಮಠ, ಕವಿತಾ ಸೊಪ್ಪಿನಮಠ, ವಿನಯಕುಮಾರ ಹಿರೇಮಠ, ಪ್ರೊ. ಲಿಂಗಯ್ಯ ಹಿರೇಮಠ, ಮಲ್ಲಮ್ಮ ಪಾಟೀಲ, ಬಿ.ಎಂ. ಜಗಾಪುರ, ದಾನಪ್ಪ ಚೂರಿ, ನಿಂಗಪ್ಪ ಬಟ್ಟಲಕಟ್ಟೆ ಪಂಚಾಚಾರ್ಯ ವೇದಿಕೆ ಶರಣಯ್ಯ ಬೂದಿಹಾಳಮಠ, ರಾಚಯ್ಯಸ್ವಾಮಿ ಓದಿಸೋಮಠ, ಚಂದ್ರಣ್ಣ ಆಲದಗೇರಿ, ರಾಜಶೇಖರ ಹಾಲೇವಾಡಿಮಠ, ಎಂ.ಎಚ್. ಬೇತೂರುಮಠ, ವೀರಯ್ಯ ಹನಗೋಡಿಮಠ, ಗಿರೀಶ ಇಂಡಿಮಠ, ವಾಗೀಶ ಹಿರೇಮಠ, ಕರಬಸಯ್ಯ ಹಿರೇಮಠ, ಮೃತ್ಯುಂಜಯ ಹಿರೇಮಠ, ಕೆ.ಸಿ. ಸೊಪ್ಪಿನಮಠ, ಸಿದ್ದಲಿಂಗಯ್ಯ ಬೂದಿಹಾಳಮಠ, ಮಂಜಯ್ಯ ಹಿರೇಮಠ ಇತರರಿದ್ದರು.ಕುನ್ನೂರ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ದೀಪ ಕಾರ್ಯಕ್ರಮ

ಶಿಗ್ಗಾಂವಿ: ನಿಯಮಿತವಾಗಿ ರಾಮರಕ್ಷಾ ಸ್ತೋತ್ರ ಜಪಿಸುವುದರಿಂದ ವಿದ್ಯಾರ್ಥಿಗಳಲ್ಲಿ ಸ್ಮರಣಶಕ್ತಿ, ಏಕಾಗ್ರತೆ, ಆತ್ಮವಿಶ್ವಾಸ ವೃದ್ಧಿಯಾಗುತ್ತದೆ ಎಂದು ಡಿವೈನ್ ಪಾರ್ಕ್‌ ತರಬೇತುದಾರರಾದ ಸುಚೇತನಾ ಬೇವಿನಕಟ್ಟಿ ತಿಳಿಸಿದರು.

ಪಟ್ಟಣದ ಶ್ರೀ ಚನ್ನಪ್ಪ ಕುನ್ನೂರ ಪ್ರೌಢಶಾಲೆ ಆಶ್ರಯದಲ್ಲಿ ವಿವೇಕ ಜಾಗೃತ ಬಳಗ ಹಾಗೂ ಡಿವೈನ್ ಪಾರ್ಕ್‌ ಏರ್ಪಡಿಸಿದ ವಿದ್ಯಾರ್ಥಿ ದೀಪ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಂಡು ಒಳ್ಳೆಯ ಗುಣ, ನಡತೆಗಳನ್ನು ಬೆಳೆಸಿಕೊಳ್ಳುವ ಮೂಲಕ ಸಮಗ್ರ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ನಾಗರಾಜ ಜಿ. ದ್ಯಾಮನಕೊಪ್ಪ, ಸನ್ನಡತೆ ಜೀವನದ ಯಶಸ್ಸಿನ ಒಂದು ಭಾಗ. ವಿದ್ಯಾರ್ಥಿಗಳು ಸನ್ನಡತೆ ರೂಢಿಸಿಕೊಂಡು ಜೀವನದಲ್ಲಿ ಯಶಸ್ಸು ಪಡೆಯಬೇಕು ಎಂದರು.ಇದೇ ಸಂದರ್ಭದಲ್ಲಿ ಬದರಿನಾಥ ಬೇವಿನಕಟ್ಟಿ ಅವರು ವಿದ್ಯಾರ್ಥಿಗಳಿಗೆ ಸನ್ನಡತೆಯ ಪ್ರಮಾಣವಚನ ಬೋಧಿಸಿ ರಾಮರಕ್ಷಾ ಸ್ತೋತ್ರದ ಪಠಣ ಮಾಡಿಸಿದರು.

ಸುಜಾತಾ ಮಡಿವಾಳರ, ಲಲಿತಾ ಮೆಳ್ಳೆಗಟ್ಟಿ, ಅಶೋಕ ಖುರ್ಷಾಪುರ, ವೀರಣ್ಣ ಬಡ್ಡಿ, ರಾಜು ಹೆಬ್ಬಳ್ಳಿ, ಎಸ್.ಎಸ್. ಘೋಡಗೇರಿ ಮತ್ತು ನಂದಾ ಗಾಂಜಿ ಮುಂತಾದವರು ಇದ್ದರು. ಪ್ರಾರಂಭದಲ್ಲಿ ಮುಖ್ಯೋಪಾಧ್ಯಾಯಿನಿ ಜಿ.ಎಂ. ಅರಗೋಳ ಸ್ವಾಗತಿಸಿದರು. ಶಿಕ್ಷಕ ಕೆ.ಜಿ. ಮಲ್ಲೂರ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಆರ್.ವಿ. ಹಿರೇಗೌಡ್ರ ವಂದಿಸಿದರು.

PREV

Recommended Stories

ದಕ್ಷಿಣ ಭಾರತದ ಮೊದಲ ಆ್ಯಪಲ್ ಸ್ಟೋರ್ ಬೆಂಗಳೂರಲ್ಲಿ ಆರಂಭ
ಜೈಲಲ್ಲಿರುವ ಸಿಎಂ, ಸಚಿವರ ಆಗಬೇಕು. ಏಕೆ ಗೊತ್ತಾ?