ಶಿಕ್ಷಣ, ಅನ್ನದಾಸೋಹಕ್ಕೆ ಮಠಗಳ ಕೊಡುಗೆ ಅಪಾರ

KannadaprabhaNewsNetwork |  
Published : Jan 08, 2024, 01:45 AM IST
ಪೂರ್ವಭಾವಿ ಸಭೆಯಲ್ಲಿ ಮುಪ್ಪಿನಬಸವಲಿಂಗ ಸ್ವಾಮಿಗಳು ಮಾತನಾಡಿದರು. | Kannada Prabha

ಸಾರಾಂಶ

ದುಶ್ಚಟಗಳಿಗೆ ದಾಸರಾಗದೇ, ಉತ್ತಮ ಸಂಸ್ಕಾರ, ಸಂಸ್ಕೃತಿ, ಆಚಾರ- ವಿಚಾರಗಳನ್ನು ಅಳವಡಿಸಿಕೊಂಡು ಉತ್ತಮ ಜೀವನ ಸಾಗಿಸಲು ಮುಂದಾಗಬೇಕು.

ಮರಿಯಮ್ಮನಹಳ್ಳಿ: ಶೈಕ್ಷಣಿಕ ಹಾಗೂ ದಾಸೋಹದ ವಿಚಾರದಲ್ಲಿ ವೀರಶೈವ ಮಠಗಳ ಕೊಡುಗೆ ಅಪಾರ ಎಂದು ಹೊಸಪೇಟೆಯ ಕೊಟ್ಟೂರುಸ್ವಾಮಿ ಮಠದ ಮುಪ್ಪಿನಬಸವಲಿಂಗ ಸ್ವಾಮಿಗಳು ತಿಳಿಸಿದರು.ಸಮೀಪದ ಜಿ. ನಾಗಲಾಪುರ ಗ್ರಾಮದ ಗುರುಒಪ್ಪತ್ತೇಶ್ವರ ಸ್ವಾಮಿ ಮಠದ ನಿರಂಜನ ಪ್ರಭುದೇವರ ಚರಪಟ್ಟಾಧಿಕಾರ ಮಹೋತ್ಸವದ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

ದುಶ್ಚಟಗಳಿಗೆ ದಾಸರಾಗದೇ, ಉತ್ತಮ ಸಂಸ್ಕಾರ, ಸಂಸ್ಕೃತಿ, ಆಚಾರ- ವಿಚಾರಗಳನ್ನು ಅಳವಡಿಸಿಕೊಂಡು ಉತ್ತಮ ಜೀವನ ಸಾಗಿಸಲು ಮುಂದಾಗಬೇಕು. ಯಾರು ಮದ್ಯಪಾನ, ಧೂಮಪಾನ ಸೇರಿದಂತೆ ಇತರ ದುಶ್ಚಟಗಳಿಂದ ದೂರ ಉಳಿಯುತ್ತಾರೋ ಅವರು ಆರೋಗ್ಯದಿಂದ ಜೀವಿಸಲು ಸಾಧ್ಯವಾಗಲಿದೆ ಎಂದರು.

ಜಿ. ನಾಗಲಾಪುರ ಗ್ರಾಮದಲ್ಲಿ ಎಲ್ಲರೂ ಸೇರಿ ಶ್ರದ್ಧಾ- ಭಕ್ತಿಯಿಂದ ಮಹತ್ವದ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿರುವುದರಿಂದ ಪ್ರತಿಯೊಬ್ಬರೂ ಗ್ರಾಮದಲ್ಲಿ ಸುಮಾರು 25 ದಿನಗಳಕಾಲ ಮದ್ಯಪಾನ ಸೇರಿದಂತೆ ಇತರೆ ದುಶ್ಚಟಗಳಿಂದ ದೂರ ಇದ್ದರೆ ಉತ್ತಮ. ಇಲ್ಲ ಸಂಪೂರ್ಣ ಮದ್ಯಪಾನ ಸೇರಿದಂತೆ ಇತರ ದುಶ್ಟಗಳಿಂದ ದೂರ ಉಳಿಯುತ್ತೇವೆ ಎಂದು ಹೇಳಿದರೆ ಇನ್ನೂ ಒಳ್ಳೆಯದು ಎಂದರು. ಮಠಗಳ ಪರಂಪರೆ ಜಾತಿ​ಮತಗಳನ್ನು ಮೀರಿರುವುದು ಎಂದರು.ಈ ಪಟ್ಟಾಧಿಕಾರ ಕಾರ್ಯಕ್ರಮದಲ್ಲಿ ಮಾ. 1ರಿಂದ ಪ್ರಾರಂಭವಾಗಿ 9 ದಿನಗಳ ಕಾಲ ಪುರಾಣ ಪ್ರವಚನ ಕಾರ್ಯಕ್ರಮ ನಡೆಯಲಿದೆ. ಮಾ. 13, 14, 15ರ ಮೂರು ದಿನ ಚರಪಟ್ಟಾಧಿಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಕಾರ್ಯಕ್ರಮದಲ್ಲಿ ವಿಚಾರ ಗೋಷ್ಠಿ, ವಿಚಾರ ಸಂಕಿರಣ, ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಪುರಾಣ ಪ್ರವಚನಗಳನ್ನು ಹಮ್ಮಿಕೊಳ್ಳಲಾಗುವುದು. ವಿವಿಧ ಮಠಾಧೀಶರು, ಗಣ್ಯವ್ಯಕ್ತಿಗಳು, ರಾಜಕೀಯ ಮುಖಂಡರು ಸೇರಿಂತೆ ಇತರರು ಭಾಗವಹಿಸಲಿದ್ದಾರೆ ಎಂದರು. ಶಾಸಕ ಕೆ. ನೇಮರಾಜ್ ನಾಯ್ಕ್ ಮಾತನಾಡಿ, ಪ್ರತಿಯೊಬ್ಬ ತಂದೆ- ತಾಯಿಗಳು ಆಸ್ತಿ ಗಳಿಸದೆ, ತಮ್ಮ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು ಹಾಗೂ ಮಕ್ಕಳಿಗೆ ಶಿಕ್ಷಣ, ಉತ್ತಮ ಸಂಸ್ಕಾರ ನೀಡಿ ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸಬೇಕು ಎಂದರು.

ಪ್ರತಿಯೊಬ್ಬರೂ ಜಾತಿ, ಧರ್ಮ, ಭೇದ ಮರೆತು ಹಾಗೂ ರಾಜಕೀಯ ಹೊರತುಪಡಿಸಿ ಮರಿಯಮ್ಮನಹಳ್ಳಿ ಹೋಬಳಿ ವ್ಯಾಪ್ತಿಯ 33 ಹಳ್ಳಿಗಳ ಜನರು ಭಾಗವಹಿಸಿ ಪ್ರತಿಯೊಬ್ಬರೂ ತನುಮನದಿಂದ ಪಟ್ಟಾಧಿಕಾರದ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದರು.ಜಿ. ನಾಗಲಾಪುರ, ಬ್ಯಾಲಕುಂದಿ, ಗರಗ, ಗೊಲ್ಲರಹಳ್ಳಿ, ಡಣಾಯಕನಕೆರೆ, ದೇವಲಾಪುರ, ಮರಿಯಮ್ಮನಹಳ್ಳಿ, ಡಣಾಪುರ, ಹನುಮನಹಳ್ಳಿ, ಗುಂಡಾ, ಚಿಲಕನಹಟ್ಟಿ, ತಿಮ್ಮಲಾಪುರ, ಹಾರುವನಹಳ್ಳಿ, ನಂದಿಬಂಡಿ, ಪೋತಲಕಟ್ಟೆ, ಗ್ರಾಮಗಳ ಭಕ್ತರು ಭಾಗವಹಿಸಿದ್ದರು.ಒಪ್ಪತ್ತೇಶ್ವರ ಮಠದ ನಿರಂಜನ ಪ್ರಭು ದೇವರು, ಮುಖಂಡರಾದ ವಸ್ತ್ರದ ಶಿವಶಂಕರಯ್ಯ, ಗಂಡಿ ಬಸವರಾಜ್, ಹುಲಿಮನಿ ಕೊಟ್ರೇಶ್‌, ಅವಳಿ ತೋಟೇಶ್‌, ವಿರೂಪಾಕ್ಷಯ್ಯ, ಶಿವನಾಗಪ್ಪ, ಗಜೇಂದ್ರ ನಾಯಕ, ಬ್ಯಾಲಕುಂದಿ ಸಿದ್ರಾಮಪ್ಪ, ಗರಗ ಪ್ರಕಾಶ್ ಪೂಜಾರ್‌, ಗುಂಡಾ ಸೋಮಣ್ಣ, ಪಿ. ಓಬಪ್ಪ, ರಾಜಪ್ಪ, ಸೋಮ್ಲನಾಯ್ಕ್, ನಂದಿಬಂಡಿ ಸೋಮಪ್ಪ, ಪೋತಲಕಟ್ಟೆ ನಾಗರಾಜ, ಮಂಜುನಾಥ, ನಂದೀಶ್, ವೆಂಕಟೇಶ್‌ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಗ್ರಾಮದ ಮುಖಂಡರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ