ರೈತಾಪಿ ಜನರ ಆರ್ಥಿಕತೆಗೆ ಎಸ್‌ಆರ್‌ಪಿ ಕೊಡುಗೆ ಅಪಾರ

KannadaprabhaNewsNetwork |  
Published : May 23, 2025, 12:06 AM IST
ತಾಲೂಕಿನ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಗುರುವಾರ ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ್ ನಿಯಮಿತ, ಬೀಳಗಿಯ ಇದರ ರಜತ ಮಹೋತ್ಸವ-2025ರ ಅಂಗವಾಗಿ ಹಮ್ಮಿಕೊಂಡ ಪುರುಷರ ಹಾಗೂ ಮಹಿಳೆಯರ ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾವಳಿಯನ್ನು  ವಿಧಾನ ಪರಿಷತ್ ಶಾಸಕ ಎಚ್.ಆರ್.ನಿರಾಣಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಎಸ್.ಆರ್.ಪಾಟೀಲ ಅವರುರು ನಾಡಿಗೆ ನಾಡಿನ ಜನತೆಗೆ ಏನಾದರು ಮಾಡಬೇಕು ಎಂಬ ದೃಷ್ಟಿಯಲ್ಲಿ ಸಹಕಾರ, ಶಿಕ್ಷಣ, ವೈದ್ಯಕೀಯ, ಉದ್ಯಮ ಕ್ಷೇತ್ರದಲ್ಲಿ ದಾಪುಗಾಲು ಇಡುತ್ತ ಎಲ್ಲರಿಗೂ ಅನೂಕೂಲ ಮಾಡುತ್ತಾ ನಡೆಯುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಬೀಳಗಿ

ಮಾಜಿ ಸಚಿವ ಎಸ್.ಆರ್.ಪಾಟೀಲರು ಮುಳುಗಡೆ ಸಂತ್ರಸ್ತರ ಬದುಕಿಗೆ 25 ವರ್ಷಗಳ ಹಿಂದೆ ಬೀಳಗಿ ಪಟ್ಟಣದಲ್ಲಿ ಪ್ರಥಮದಲ್ಲಿ ಸಹಕಾರಿ ಕ್ಷೇತ್ರದ ಬ್ಯಾಂಕನ್ನು ತೆರೆದು ಇಂದು ಸಾವಿರಾರೂ ರೈತಾಪಿ ಜನರಿಗೆ ಆರ್ಥಿಕವಾಗಿ ಸಹಾಯ, ಸಹಕಾರ ನೀಡುತ್ತಿರುವುದು ನಾಡಿಗೆ ಅವರ ಕೊಡುಗೆ ಅಪಾರವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ಆರ್.ನಿರಾಣಿ ಬಣ್ಣಿಸಿದರು.

ಸ್ಥಳೀಯ ಪ್ರತಿಷ್ಠಿತ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಆವರಣದಲ್ಲಿ ಗುರುವಾರ ಪಟ್ಟಣ ಸಹಕಾರಿ ಬ್ಯಾಂಕ್ ನಿಯಮಿತಯ ಇದರ ರಜತ ಮಹೋತ್ಸವ-2025ರ ಅಂಗವಾಗಿ ಹಮ್ಮಿಕೊಂಡ ಪುರುಷರ ಹಾಗೂ ಮಹಿಳೆಯರ ರಾಷ್ಟ್ರಮಟ್ಟದ ಕಬಡ್ಡಿ ವೈಭವ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಅವರು, ಎಸ್.ಆರ್.ಪಾಟೀಲರು ನಾಡಿಗೆ ನಾಡಿನ ಜನತೆಗೆ ಏನಾದರು ಮಾಡಬೇಕು, ಎಲ್ಲರನ್ನೂ ಆರ್ಥಿಕವಾಗಿ ಸಧೃಡಗೊಳಿಸಿ ಆರೋಗ್ಯವಂತರನ್ನಾಗಿ ಮಾಡುವ ದೃಷ್ಟಿಯಲ್ಲಿ ಸಹಕಾರ, ಶಿಕ್ಷಣ, ವೈದ್ಯಕೀಯ, ಉದ್ಯಮ ಕ್ಷೇತ್ರದಲ್ಲಿ ದಾಪುಗಾಲು ಇಡುತ್ತ ಎಲ್ಲರಿಗೂ ಅನೂಕೂಲ ಮಾಡಿ ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎನ್ನುವ ತತ್ವದಡಿಯಲ್ಲಿ ನಡೆಯುತ್ತ ಬಂದಿದ್ದಾರೆ ಎಂದರು.

ಹಿರಿಯರಾದ ಎಸ್.ಆರ್.ಪಾಟೀಲರು ತಮ್ಮ ಜನ್ಮ ನೀಡಿದ ಗ್ರಾಮೀಣ ಪ್ರದೇಶವಾದ ಬಾಡಗಂಡಿ ಪುಣ್ಯ ನೆಲದಲ್ಲಿ ಅವರು ದಿಟ್ಟ ನಿರ್ಧಾರ ಮಾಡಿ ಗ್ರಾಮೀಣ ಬಾಗದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂದು ಶಿಕ್ಷಣ ಸಂಸ್ಥೆ, ಆರೋಗ್ಯಕ್ಕಾಗಿ ಮೆಡಿಕಲ್ ಕಾಲೇಜು ಆರಂಭಿಸಿ ಸಾಮಾಜಿಕ, ರಾಜಕೀಯ ಕ್ಷೇತ್ರದಲ್ಲಿ ತಮ್ಮದೆಯಾದ ಕೊಡುಗೆ ನೀಡುತ್ತ ನಿರೂದ್ಯೋಗಿಗಳಿಗೆ ಉದ್ಯೋಗ ಹಾಗೂ ರೈತಾಪಿ ಜನರ ಕಲ್ಯಾಣಕ್ಕಾಗಿ ಮತ್ತು ಯುವ ಜನತೆಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಸಹಕಾರಿ ಬ್ಯಾಂಕ್ ಹಾಗೂ ಸಕ್ಕರೆ ಕಾರ್ಖಾನೆ, ಮೆಡಿಕಲ್ ಕಾಲೇಜು ಪ್ರಾರಂಭ ಮಾಡುವ ಮೂಲಕ ಬಾಡಗಂಡಿ ಮತ್ತು ಬೀಳಗಿ ಹೆಸರು ಇತಿಹಾಸದ ಪುಟದಲ್ಲಿ ಬರುವಂತೆ ಮಾಡಿದ ಮಹಾನ್ ದಿಮಂತ ನಾಯಕರು. ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕಿನ ರಜತ ಮಹೋತ್ಸವ ನಿಮಿತ್ತ ಬೀಳಗಿ ಪಟ್ಟಣದಲ್ಲಿ ಕಳೆದ 25 ದಿನಗಳಿಂದ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಬೀಳಗಿ ಬ್ಯಾಂಕ್‌ ಹಾಗೂ ಬಾಪೂಜಿ ಬ್ಯಾಂಕಗಳು ಇಂದು ಸಾವಿರಾರೂ ಕೋಟಿ ವಹಿವಾಟು ಮಾಡುತ್ತಾ ರಾಜ್ಯದ ತುಂಬೆಲ್ಲ ತಮ್ಮದಾದ ಶಾಖೆಗಳನ್ನು ಹೊಂದಿದೆ. ಕ್ರೀಡಾ ಪಂದ್ಯಾವಳಿಯಲ್ಲಿ ಭಾಗವಹಿಸಿದ ಕ್ರೀಡಾಪಟುಗಳು ತಮ್ಮ ಪ್ರತಿಭೆಯನ್ನು ಪ್ರದರ್ಶನ ಮಾಡುವುದು ಮುಖ್ಯವಾಗಿದೆ ಎಂದ ಅವರು ಇನ್ನೂ ಹೆಚ್ಚಿನ ಶಕ್ತಿಯನ್ನು ಎಸ ಆರ ಪಾಟೀಲ ಅವರಿಗೆ ನೀಡುವಲ್ಲಿ ನಾಡಿನ ಜನತೆ ಸದಾ ಅವರ ಜತೆಯಲ್ಲಿ ಇರುತ್ತಾರೆ ಎಂದರು.

ಈ ಸಂದರ್ಭದಲ್ಲಿ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಎಲ್.ಬಿ.ಕುರ್ತಕೋಟಿ ಮಾತನಾಡಿ, ರಾಷ್ಟ್ರಮಟ್ಟದ ಈ ಕಬ್ಬಡ್ಡಿ ಪಂದ್ಯಾವಳಿಯಲ್ಲಿ ದೇಶದ ವಿವಿದ ರಾಜ್ಯಗಳಿಂದ ಪುರುಷರ 22 ತಂಡಗಳು ಹಾಗೂ ಮಹಿಳೆಯರ 16 ತಂಡಗಳು ಭಾಗಿಯಾಗಿದ್ದು ದಿ 23 ರಂದು ಶುಕ್ರವಾರ ಪೂರ್ತಿ ದಿನಾ ಪಂದ್ಯಗಳನ್ನು ಆಡಿಸಲಾಗುವುದು ಗೆದ್ದ ಪುರುಷ ಮತ್ತು ಮಹಿಳ ತಂಡಕ್ಕೆ ಪ್ರಥಮ ಬಹುಮಾನ ತಲಾ 2 ಲಕ್ಷ ರೂ ಇದ್ದು ಪಂದ್ಯಾವಳಿಯಲ್ಲಿ ಎಲ್ಲ ರೀತಿಯ ಸಿದ್ದತೆಯನ್ನು ಮಾಡಿಕೊಳ್ಳಲಾಗಿದೆ ಎಂದರು.

ಮಾಜಿ ಸಚಿವರು ಹಾಗೂ ಬೀಳಗಿ ಪಟ್ಟಣ ಬ್ಯಾಂಕಿನ ಅಧ್ಯಕ್ಷರಾದ ಎಸ್.ಆರ್.ಪಾಟೀಲ ಕಾರ್ಯಕ್ರಮದ ಅಧ್ಯಕ್ಷವಹಿಸಿದ್ದರು. ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಎಂ.ಎನ್.ಪಾಟೀಲ, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಎಸ್.ಟಿ.ಪಾಟೀಲ, ಮಾಜಿ ಕೆಪಿಸಿಸಿ ಕಾರ್ಯದರ್ಶಿ ಬಸವಪ್ರಭು ಸರನಾಡಗೌಡ, ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷ ಸತ್ಯಪ್ಪ ಮೇಲ್ನಾಡ, ಜಿಲ್ಲಾ ನೋಂದಣಾಕಾರಿ ಎಸ್.ಜಿ.ನ್ಯಾಮಗೌಡ, ಸಿಪಿಐ ಎಚ್.ಬಿ.ಸಣ್ಣಮನಿ, ಸಾಯಿ ಅಗ್ರೋ ಮಾಲೀಕರಾದ ಎಸ್.ಎಸ್.ರಂಗನಗೌಡರ, ನಿರ್ದೇಶಕ ಎಂ.ಎನ್.ಕೆಂಪಲಿಂಗನ್ನವರ, ಕೆ.ಎಸ್.ಪತ್ರಿ,ಗಂಗಣ್ಣ ಕೆರೂರ, ಎಚ್.ಎ.ಕೊಪ್ಪಳ, ಎ.ಎಚ್.ಬೀಳಗಿ, ದೊಡ್ಡಣ್ಣ ದೇಸಾಯಿ, ವೆಂಕನಗೌಡ ಪಾಟೀಲ,ಉಸಮಾನ್ ಪಟೇಲ್,ಸಿದ್ದು ಸಾರಾವರಿ,ಬಸವರಾಜ ಹಳ್ಳದಮನಿ,ಯಮನಪ್ಪ ರೋಳ್ಳಿ ಹಾಗೂ ಇನ್ನೂ ಅನೇಕರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!