ಕೊಪ್ಪಳ: ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಭಾರತದ ಮಾಜಿ ಪ್ರಧಾನಿ, ಭಾರತರತ್ನ ಪುರಸ್ಕೃತೆ ಇಂದಿರಾ ಗಾಂಧಿ ಅವರ ಪುಣ್ಯಸ್ಮರಣೆ ಹಾಗೂ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನವನ್ನು ಆಚರಿಸಲಾಯಿತು.
ದೇಶದ ಅಭಿವೃದ್ಧಿ, ಏಕತೆ ಮತ್ತು ಸಮಗ್ರತೆಗಾಗಿ ಇಂದಿರಾ ಗಾಂಧಿ ನೀಡಿದ ಕೊಡುಗೆ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ರಾಷ್ಟ್ರ ನಿರ್ಮಾಣದ ಸಾಧನೆಗಳು ಮುಂದಿನ ಪೀಳಿಗೆಗೆ ಸದಾ ಪ್ರೇರಣೆಯಾಗಿವೆ. ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಪಕ್ಷದ ಹಿರಿಯರಾದ ವಿರೂಪಣ್ಣ ನವೋದಯ, ಮಾಜಿ ನಗರಸಭಾ ಸದಸ್ಯ ಮಾನ್ವಿ ಪಾಶಾ, ಹುಸೇನ್ ಪೀರಾ ಮುಂಜಾವರ್, ಅಜೀಮ್ ಅತ್ತಾರ್, ಕಾಂಗ್ರೆಸ್ ಮುಖಂಡರಾದ ಮಲ್ಲಿಕಾರ್ಜುನ ಪೂಜಾರ, ಗಪಾರ್ ದಿಡ್ಡಿಕೇರಿ, ರೆಹಮಾನ್, ಯುವ ಕಾಂಗ್ರೆಸ್ ಅಧ್ಯಕ್ಷ ಸಂತೋಷ ಬೂದಿಹಾಳ, ಎನ್‌ಎಸ್‌ಯುಐ ತಾಲೂಕು ಅಧ್ಯಕ್ಷ ಹನುಮೇಶ ಬೆಣ್ಣೆ, ರೈನಾ ಪೂಜಾರ, ಜಿಲ್ಲಾ ಕಿಸಾನ್ ಘಟಕದ ಅಧ್ಯಕ್ಷ ಗವಿಸಿದ್ದನಗೌಡ ಪಾಟೀಲ್, ಆರ್‌ಜಿಪಿಆರ್‌ಎಸ್ ಜಿಲ್ಲಾ ಸಂಯೋಜಕ ಸುರೇಶ ದಾಸರಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪದ್ಮಾವತಿ ಕಂಬಳಿ, ಸಯ್ಯದ್ ನಾಸಿರ್ ಹುಸೇನ್, ಸಯ್ಯದ್ ಹಯಾತ್ ಹುಸೇನಿ ಉಪಸ್ಥಿತರಿದ್ದರು.