ಕನ್ನಡಪ್ರಭ ವಾರ್ತೆ ಕೋಲಾರಮಹಿಳೆಯು ಅಬಲೆ ಅಲ್ಲಾ ಸಬಲೆ ಎಂಬುದನ್ನು ಎಲ್ಲಾ ರಂಗಗಳಲ್ಲಿ ತನ್ನ ಪಾತ್ರವನ್ನು ನಿರ್ವಹಿಸುತ್ತಿದ್ದಾಳೆ. ಇತ್ತೀಚೆಗೆ ಮಹಿಳೆಯರು ಒಂದೇ ಕ್ಷೇತ್ರಕ್ಕೆ ಮೀಸಲಿರದೆ ಪ್ರತಿಯೊಂದು ಕ್ಷೇತ್ರದಲ್ಲಿ ತಮ್ಮದೇ ಆದ ಚಾಪನ್ನು ಮೂಡಿಸಿರುತ್ತಾರೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನಿಲ ಎಸ್ ಹೊಸಮನಿ ತಿಳಿಸಿದರು.ವಿಶ್ವ ಮಹಿಳಾ ದಿನಾಚರಣೆಯ ಹಾಗೂ ವಿಶ್ವ ಗ್ರಾಹಕರ ಹಕ್ಕುಗಳ ದಿನ ಅಂಗವಾಗಿ ಮಾಲೂರಿನ ಸಿಲ್ವರ್ ಕ್ರಸ್ಟ್ ಕ್ಲಾತಿಂಗ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಮಹಿಳಾ ಸಾಧಕರನ್ನು ಸ್ಮರಿಸಿ
ಕಾನೂನು ಅರಿವು ಕಾರ್ಯಕ್ರಮ
ಆ ಹಿನ್ನೆಲೆಯಲ್ಲಿ ಈ ದಿವಸ ಗಾಮೆಂಟ್ಸ್ ಕಾರ್ಖಾನೆಯಲ್ಲಿ ಕಾರ್ಮಿಕರ ಕಾನೂನುಗಳ ಅರಿವು ಕಾರ್ಯಕ್ರಮ ಹಮ್ಮಿಕೊಂಡಿದೆ, ಕಾನೂನುಗಳ ಅಡಿಯಲ್ಲಿ ಕಾರ್ಮಿಕರ ಸೌಲಭ್ಯಗಳ ಬಗ್ಗೆ ಹಾಗೂ ಸಮಸ್ಕೆಗಳ ಪರಿಹಾರ ಪಡೆದುಕೊಳ್ಳಬೇಕು ಎಂದು ತಿಳಿಸಿದರು.ಕಾರ್ಮಿಕ ಅಧಿಕಾರಿ ವರಲಕ್ಷ್ಮಿ ಆರ್, ಕಾರ್ಮಿಕ ನಿರೀಕ್ಷಕ ರೇಣುಕಾ ಪ್ರಸನ್ನ, ಸಿಲ್ವರ್ ಕ್ರಸ್ಟ್ ಪ್ರೈವೇಟ್ ಲಿಮಿಟೆಡ್ ಮೇಲ್ವಿಚಾರಕಿ ಸೌಮೃ, ಜಾನಪದ ಕಲಾವಿದ ಬಿ. ವೆಂಕಟಾಚಲಪತಿ ಇದ್ದರು.