ಸಂಘದ ಅಭಿವೃದ್ಧಿಗೆ ಸದಸ್ಯರ ಸಹಕಾರ ಅಗತ್ಯ

KannadaprabhaNewsNetwork |  
Published : Oct 20, 2024, 01:48 AM IST
ಫೋಟೋ: 19 ಹೆಚ್‌ಎಸ್‌ಕೆ 4ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿಯ ನೆಲವಾಗಿಲು ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಆವರಣದಲ್ಲಿ ಮುಖ್ಯಕಾರ್ಯ ನಿರ್ವಾಹಕರ ಅಧಿಕಾರಿಯಾಗಿ ನಾಗೇಶ್ ಅಧಿಕಾರ ಸ್ವೀಕಾರ ಮಾಡಿದರು. | Kannada Prabha

ಸಾರಾಂಶ

ಹೊಸಕೋಟೆ: ರೈತರು ಸಕಾಲಕ್ಕೆ ಸಾಲ ಮರು ಪಾವತಿಸುತ್ತಿರುವುದರಿಂದ ಪ್ರಗತಿ ಪಥದಲ್ಲಿ ಮುನ್ನಡೆಯಲು ಸಾಧ್ಯವಾಗಿದೆ ಎಂದು ಸಂಘದ ನಿವೃತ್ತ ಸಿಇಒ ಹೆಚ್.ಎಂ.ಗುರುದೇವ್‌ ತಿಳಿಸಿದರು.

ಹೊಸಕೋಟೆ: ರೈತರು ಸಕಾಲಕ್ಕೆ ಸಾಲ ಮರು ಪಾವತಿಸುತ್ತಿರುವುದರಿಂದ ಪ್ರಗತಿ ಪಥದಲ್ಲಿ ಮುನ್ನಡೆಯಲು ಸಾಧ್ಯವಾಗಿದೆ ಎಂದು ಸಂಘದ ನಿವೃತ್ತ ಸಿಇಒ ಹೆಚ್.ಎಂ.ಗುರುದೇವ್‌ ತಿಳಿಸಿದರು.

ನಂದಗುಡಿ ಹೋಬಳಿಯ ನೆಲವಾಗಿಲು ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದಲ್ಲಿ ನಡೆದ ಮುಖ್ಯ ಕಾರ್ಯ ನಿರ್ವಾಹಕರ ಅಧಿಕಾರ ಹಸ್ತಾಂತರ ಕಾರ್ಯಕ್ರಮ ಕುರಿತು ಮಾತನಾಡಿದರು.

ಸಹಕಾರ ಸಂಘಗಳು ಆರ್ಥಿಕವಾಗಿ ಸದೃಢವಾಗಲು ಷೇರುದಾರರು, ಆಡಳಿತ ಮಂಡಳಿ, ಸಿಬ್ಬಂದಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿದಾಗ ಲಾಭದತ್ತ ಮುನ್ನಡೆಯಲು ಸಾಧ್ಯ. ನನ್ನಅಧಿಕಾರಾವಧಿಯಲ್ಲಿ ನಂದಗುಡಿ ಹಾಗೂ ನೆಲವಾಗಿಲಿನಲ್ಲಿ ಗೋದಾಮುಗಳ ಸ್ವಂತ ಕಟ್ಟಡ ನಿರ್ಮಾಣ ಮಾಡಲಾಗಿದೆ. ಪ್ರತಿ ವರ್ಷ ಷೇರುದಾರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಿಸುತ್ತಿದೆ. ಸಂಘದ ಸಂಘದ ಲಾಭಾಂಶದಲ್ಲಿ ಸಂಘದ ವ್ಯಾಪ್ತಿಗೆ ಬರುವ ೧೦ಕ್ಕೂಹೆಚ್ಚು ಗ್ರಾಮಗಳಲ್ಲಿ ಪಡಿತರ ವಿತರಣಾ ಕೇಂದ್ರ ನಿರ್ಮಿಸಲಾಗಿದೆ ಎಂದು ಹೇಳಿದರು.

ಸಿಇಒ ಎಸ್.ನಾಗೇಶ್ ಮಾತನಾಡಿ, ಸಿಇಒ ಗುರುದೇವ್ ಅಧಿಕಾರ ಅವಧಿಯಲ್ಲಿ ಸಂಘ ಲಾಭದಲ್ಲಿದ್ದು, ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದವರ ಒಮ್ಮತದೊಂದಿಗೆ ಸಂಘವನ್ನು ಆರ್ಥಿಕವಾಗಿ ಮುನ್ನಡೆಸಲು ಪ್ರಾಮಾಣಿಕವಾಗಿ ಶ್ರಮಿಸಲಾಗುವುದು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ನಿವೃತ್ತ ಸಿಇಒ ಎಚ್.ಎಂ.ಗುರುದೇವ್‌ ಅವರು ಸಿಇಒ ಆಗಿ ಬಡ್ತಿ ಪಡೆದ ಎಸ್.ನಾಗೇಶ್‌ರವರಿಗೆ ಅಧಿಕಾರ ಹಸ್ತಾಂತರಿಸಿ ಶುಭಕೋರಿದರು.

ಕಾರ್ಯಕ್ರಮದಲ್ಲಿ ಎಸ್‌ಎಫ್‌ಸಿಎಸ್‌ನ ಅಧ್ಯಕ್ಷ ರವಿಶಂಕರ್, ಉಪಾಧ್ಯಕ್ಷ ಎ.ಆರ್.ಕೃಷ್ಣಪ್ಪ, ಮಾಜಿ ಅಧ್ಯಕ್ಷರಾದ ಕೆ.ಮಂಜುನಾಥ್, ಎಚ್.ಕೆ.ನಾರಾಯಣಗೌಡ, ಎಸ್.ಮಂಜುನಾಥ್, ನಿರ್ದೇಶಕರಾದ ಎನ್.ಡಿ.ರಮೇಶ್, ಎಸ್.ಕೆ.ರಾಜೇಶ್, ಎನ್. ಮಂಜುನಾಥ್, ವಿ.ನಾರಾಯಣಸ್ವಾಮಿ, ಟಿ.ಮುನಿರಾಜು, ಮುನಿನಾರಾಯಣಪ್ಪ, ಲಕ್ಷ್ಮೀದೇವಿ, ನಾರಾಯಣಸ್ವಾಮಿ, ಜಯಮ್ಮ, ಲೆಕ್ಕಪಾಲಕ ಅಶೋಕ್ ಹಾಗೂ ಸಿಬ್ಬಂದಿ ಹಾಜರಿದ್ದರು.

ಫೋಟೋ: 19 ಹೆಚ್‌ಎಸ್‌ಕೆ 4

ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿಯ ನೆಲವಾಗಿಲು ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಆವರಣದಲ್ಲಿ ಮುಖ್ಯಕಾರ್ಯ ನಿರ್ವಾಹಕರ ಅಧಿಕಾರಿಯಾಗಿ ನಾಗೇಶ್ ಅಧಿಕಾರ ಸ್ವೀಕರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೈಲಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚುಕೇಸ್‌ನ 2ನೇ ಆರೋಪಪಟ್ಟಿ ಸಲ್ಲಿಕೆ
ನೊಂದವರಿಗೆ ನೆರವು'''' ವಿನೂತನ ಕಾರ್ಯಕ್ರಮಕ್ಕೆ ಚಾಲನೆ