ಹರಪನಹಳ್ಳಿ: ಸಹಕಾರ ಕ್ಷೇತ್ರವು ಸಮಾಜದ ಆರ್ಥಿಕ ಪ್ರಗತಿಯಲ್ಲಿ ಮಹತ್ವದ ಪಾತ್ರ ವಹಿಸಲಿದ್ದು, ಜನರಲ್ಲಿ ಉಳಿತಾಯದ ಮನೋಭಾವ ಬೆಳೆಸುವುದರ ಜತೆಗೆ ರೈತರು, ಸಣ್ಣ ವ್ಯಾಪಾರಿಗಳು ಹಾಗೂ ಮಧ್ಯಮ ವರ್ಗದ ಜನರ ಆರ್ಥಿಕ ಅಭಿವೃದ್ಧಿಗೆ ನೆರವಾಗುತ್ತವೆ ಎಂದು ವಾರಣಾಸಿಯ ಕಾಶೀ ಪೀಠದ ಜಂಗಮವಾಡಿ ಮಠದ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ರಾಜದೇಶಿಕೇಂದ್ರ ಭಗವತ್ಪಾದರು ಹೇಳಿದರು.
ತೆಗ್ಗಿನ ಮಠದ ಪೀಠಧ್ಯಕ್ಷ ವರಸದ್ಯೋಜಾತ ಶಿವಾಚಾರ್ಯಸ್ವಾಮೀಜಿ, ಕೂಡ್ಲಿಗಿಯ ಡಾ. ಪ್ರಶಾಂತಸಾಗರ ಶಿವಾಚಾರ್ಯಸ್ವಾಮೀಜಿ, ಡಾ. ಟಿ.ಎಂ. ಚಂದ್ರಶೇಖರಯ್ಯ, ಟಿ.ಎಂ. ಗುರುಬಸವರಾಜ, ಟಿ.ಎಂ. ಚನ್ನವೀರಸ್ವಾಮಿ, ಟಿ.ಎಂ. ಪ್ರತೀಕ್, ಗೌಳಿ ನಾಗರಾಜ್, ಜಯಪ್ರಕಾಶಗೌಡ, ಟಿ.ಎಂ. ರಾಜಶೇಖರ, ಎ. ಕರಿಬಸವರಾಜ, ನಾಗೇಂದ್ರರಾವ್ ಸೇರಿದಂತೆ ಬ್ಯಾಂಕಿನ ನಿರ್ದೇಶಕರು ಹಾಗೂ ಕೇಂದ್ರ ಕಚೇರಿಯ ಸಿಬ್ಬಂದಿ ಉಪಸ್ಥಿತರಿದ್ದರು.