ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಗ್ರಾಮದ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿ, ಹಿರಿಯರು ಕಟ್ಟಿ ಬೆಳೆಸಿದ ಸಹಕಾರ ಸಂಘವನ್ನು ಇನ್ನೂ ಹೆಚ್ಚಿನ ಪ್ರಗತಿಯಡೆಗೆ ಕೊಂಡೋಯ್ಯಬೇಕಾದುದು ನಮ್ಮ ಕರ್ತವ್ಯ. ಈ ನಿಟ್ಟಿನಲ್ಲಿ ಸಕ್ರಿಯವಾಗಿ ಆಡಳಿತ ಮಂಡಳಿ ಕೆಲಸ ಮಾಡುತ್ತಿದೆ ಎಂದರು.
ಸರ್ಕಾರ ನೀಡಿದ ಸಾಲ ನೈಜ ಫಲಾನುಭವಿಗೆ ತಲುಪಬೇಕೆಂಬ ಉದ್ದೇಶದಿಂದ ಕಳೆದ 10-15 ವರ್ಷಗಳಿಂದಲೂ ಬಹಳ ಎಚ್ಚರಿಕೆಯಿಂದ ಕೆಲಸ ಮಾಡಿಕೊಂಡು ಬರಲಾಗಿದೆ. ನಾನೂ ಸಹ ಅಧ್ಯಕ್ಷನಾಗಿ ಸಂಘವನ್ನು ಅಭಿವೃದ್ಧಿಯತ್ತ ನಡೆಸಿಕೊಂಡು ಹೋಗಿದ್ದೇನೆ. ಸ್ವಂತ ನಿವೇಶನ ಸ್ವಂತ ಕಟ್ಟಡ, ಬ್ಯಾಂಕ್, ರಸಗೊಬ್ಬರ ಮಾರಾಟ ಕೇಂದ್ರ ಸೇರಿದಂತೆ ವಿವಿಧ ಉದ್ದೇಶ ಇಟ್ಟುಕೊಂಡು ಸಂಘದ ಏಳಿಗೆಗೆ ಕಳೆದ 3-4 ಆಡಳಿತ ಮಂಡಳಿಯ ಸದಸ್ಯರು ಶ್ರಮಿಸಿದ್ದಾರೆ ಎಂದರು.ಸಂಘವು ತಾಲೂಕಿನಲ್ಲಿ ಮಾದರಿಯಾಗಿ ಬೆಳೆದಿದೆ. 73 ಮಹಿಳಾ ಸ್ವಸಹಾಯ ಸಂಘಗಳಿಗೆ ಆರ್ಥಿಕ ನೆರವು ನೀಡುವ ಮೂಲಕ ಮಹಿಳೆಯರ ಸಬಲೀಕರಣದ ಕೆಲಸ ಮಾಡುತ್ತಿದೆ. ಏಳೆಂಟು ಕೋಟಿ ಮುಂಗಡ ನೀಡಿ 1 ಕೋಟಿಗೂ ಅಧಿಕ ಲಾಭದಲ್ಲಿ ನಡೆಯುತ್ತಿದೆ. ಅಲ್ಲದೇ, ರಸಗೊಬ್ಬರ ಕಂಪನಿಗಳಿಂದ ನೇರವಾಗಿ ಗೊಬ್ಬರ ಖರೀದಿಸುವ 3-4 ಸೊಸೈಟಿಗಳಲ್ಲಿ ನಮ್ಮದೂ ಒಂದು. ಸದಸ್ಯರು ಹೆಚ್ಚು ಆಸಕ್ತಿಯಿಂದ ಕೆಲಸ ಮಾಡಿದರೆ ಯಾವುದೇ ಸಹಕಾರಿ ಸಂಘಗಳು ಲಾಭದತ್ತ ಸಾಗುತ್ತವೆ ಎಂದರು.