ಧರ್ಮ ರಕ್ಷಣೆಯಿಂದ ದೇಶ ಉಳಿಯಲು ಸಾಧ್ಯ

KannadaprabhaNewsNetwork |  
Published : Mar 30, 2025, 03:01 AM IST
ಚಿತ್ರ 29ಬಿಡಿಆರ್5ಭಾಲ್ಕಿ ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಜಗದ್ಗುರು ರೇಣುಕಾಚಾರ್ಯ ಭಾವಚಿತ್ರದ ಮೆರವಣಿಗೆಗೆ ಉದ್ಯಮಿ ಚನ್ನಬಸವಣ್ಣ ಬಳತೆ ಚಾಲನೆ ನೀಡಿದರು. | Kannada Prabha

ಸಾರಾಂಶ

ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದ ಅವರಣದಲ್ಲಿ ಜಗದ್ಗುರು ರೇಣುಕಾಚಾರ್ಯ ಜಯಂತಿ, ಯುಗಮಾನೋತ್ಸವ ನಿಮಿತ್ತ ಶನಿವಾರ ಜಗದ್ಗುರು ರೇಣುಕಾಚಾರ್ಯ ಭಾವಚಿತ್ರ ಹಾಗೂ ವೀರುಪಾಕ್ಷ ಶಿವಾಚಾರ್ಯ ಮತ್ತು ಮಹಾರಾಷ್ಟ್ರದ ಜಗದ್ಗುರುಗಳನ್ನು ವೈಭವದಿಂದ ಮೆರವಣಿಗೆ ಮಾಡಲಾಯಿತು.

ಭಾಲ್ಕಿ: ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದ ಅವರಣದಲ್ಲಿ ಜಗದ್ಗುರು ರೇಣುಕಾಚಾರ್ಯ ಜಯಂತಿ, ಯುಗಮಾನೋತ್ಸವ ನಿಮಿತ್ತ ಶನಿವಾರ ಜಗದ್ಗುರು ರೇಣುಕಾಚಾರ್ಯ ಭಾವಚಿತ್ರ ಹಾಗೂ ವೀರುಪಾಕ್ಷ ಶಿವಾಚಾರ್ಯ ಮತ್ತು ಮಹಾರಾಷ್ಟ್ರದ ಜಗದ್ಗುರುಗಳನ್ನು ವೈಭವದಿಂದ ಮೆರವಣಿಗೆ ಮಾಡಲಾಯಿತು.ಕಟ್ಟಿಮನಿ ಹಿರೇಮಠ ಸಂಸ್ಥಾನ ಮೆಹಕರದ ರಾಜೇಶ್ವರ ಶಿವಾಚಾರ್ಯರು ಮಾತನಾಡಿ, ಧರ್ಮದ ರಕ್ಷಣೆಯಲ್ಲಿಯೇ ದೇಶದ ಉಳಿವು ಇದೆ. ಮಾನವ ಧರ್ಮ ಪಂಚಾಚಾರ್ಯರ ಜಗದ್ಗುರುಗಳ ಧರ್ಮವಾಗಿದೆ. ಮಾನವ ಧರ್ಮ ರಕ್ಷಿಸಿದಲ್ಲಿ ಮನುಕುಲಕ್ಕೆ ಶಾಂತಿ ಸಿಗುವುದು. ಈ ನಿಟ್ಟಿನಲ್ಲಿ ಜಗದ್ಗುರು ರೇಣುಕಾಚಾರ್ಯರು ಮನುಷ್ಯ ಕುಲಕ್ಕೆ ಮಾಡಿದ ಮಹಾನ್‌ ಕಾರ್ಯ ಮೆಚ್ಚುವಂತಹದ್ದಾಗಿದೆ ಎಂದು ಹೇಳಿದರು.ಪಟ್ಟಣದ ವೀರಭದ್ರೇಶ್ವರ ಮಂದಿರದಿಂದ ಪ್ರಾರಂಭವಾದ ಮೆರವಣಿಗೆಯು ಹಳೆಯ ಪಟ್ಟಣದ ಕೋಟೆ ಆವರಣ, ಪುರಸಭೆ, ಬೊಮ್ಮಗೊಂಡೇಶ್ವರ ವೃತ್ತ, ಬಸ್‌ ನಿಲ್ದಾಣ, ಡಾ. ಅಂಬೇಡ್ಕರ್‌ ವೃತ್ತ, ಮಹಾತ್ಮಾಗಾಂಧಿ ವೃತ್ತ, ಬಸವೇಶ್ವರ ವೃತ್ತ ಸೇರಿದಂತೆ ಚನ್ನಬಸವಾಶ್ರಮದ ಮೂಲಕ ಪುರಭವನದಲ್ಲಿ ಸಮಾವೇಶಗೊಂಡಿತು. ಮೆರವಣಿಗೆಯಲ್ಲಿ ಕಾರಣಿಕರ ಕುಣಿತ, ಡೊಳ್ಳು ಕುಣಿತ, ವಿದ್ಯಾರ್ಥಿಗಳ ಶರಣರ ವೇಶಗಳು ಗಮನ ಸೆಳೆದವು.ವಿರುಪಾಕ್ಷ ಶಿವಾಚಾರ್ಯರು, ಹಾವಗಿಲಿಂಗೇಶ್ವರ ಶಿವಾಚಾರ್ಯರು, ರಾಜೇಶ್ವರ ಶಿವಾಚಾರ್ಯರು, ಅಖಿಲ ಭಾರತ ವೀರಶೈವ ಮಹಾಸಭಾಧ್ಯಕ್ಷ ಮಲ್ಲಿಕಾರ್ಜುನ ಹಲಮಂಡಗೆ, ಕಸಾಪ ಅಧ್ಯಕ್ಷ ನಾಗಭೂಷಣ ಮಾಮಡಿ, ಉತ್ಸವ ಸಮಿತಿಯ ಅಧ್ಯಕ್ಷ ಡಾ. ಪ್ರಭುಲಿಂಗ ಸವಾಮಿ, ಬೇಡ ಜಂಗಮ ಸಮಿತಿಯ ಅಧ್ಯಕ್ಷ ಗುರಯ್ಯ ಸ್ವಾಮಿ, ಪುರಸಭೆ ಅಧ್ಯಕ್ಷೆ ಶಕುಂತಲಾ ಸಿಂಧನಕೆರೆ, ಉಪಾಧ್ಯಕ್ಷ ವಿಜಯಕುಮಾರ ರಾಜಭವನ, ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ್‌ ವಂಕೆ, ಮಹಾದೇವ ಸ್ವಾಮಿ, ಮನ್ಮಥ ಸ್ವಾಮಿ, ಭದ್ರೇಶ ಗುರಯ್ಯ ಸ್ವಾಮಿ, ಸಂತೋಷ ಬಿಜಿಪಾಟೀಲ್‌, ಅಶೋಕ ಬಾವುಗೆ, ಗಣೇಶ ಪಾಟೀಲ್‌ ಜ್ಯಾಂತಿ, ಸಂಗಮೇಶ ಬಾಬುರಾವ್‌ ಬಿರಾದಾರ ಡೋಣಗಾಪೂರ, ಸಂಗಮೇಶ ವಂಕೆ, ಮಹೇಶ ಪಾತ್ರೆ ಇದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ