ಕನ್ನಡಪ್ರಭ ವಾರ್ತೆ ಕಲಬುರಗಿ.
ಕಲಬುರಗಿಯ ಪಂಡಿತ ರಂಗ ಮಂದಿರದಲ್ಲಿ ಶನಿವಾರ ನಡೆದ ಸುಮೇಧ ಪ್ರಕಾಶನ ಹೊರತಂದಿರುವ ಧೀಮಂತ ಧುರಿಣ ಡಾ. ಮಲ್ಲಿಕಾರ್ಜುನ ಖರ್ಗೆ ಅಭಿನಂದನಾ ಕೃತಿಯ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ತಮ್ಮ ಮಾತಿನುದ್ದಕ್ಕೂ ಪ್ರಧಾನಿ ಮೋದಿ, ಷಾ, ಬಿಜೆಪಿ, ಸಂಘ ಪರಿವಾರ, ಸರಸಂಘ ಸಂಚಾಲಕ ಮೋಹನ ಭಾಗವತ್ ವಿರುದ್ಧ ಆಕ್ರೋಶ ಹೊರಹಾಕಿದ ಖರ್ಗೆ, ಇವರಿಗೆ ಮತ ಬೇಕು, ಅಧಿಕಾರ ಬೇಕು, ದೇಶ ಬೇಡ. ವಂದೇ ಮಾತರಂ 2 ಚರಣ ಹೇಳ್ತೀವಿ ಅಂದ್ರೆ ದೇಶದ್ರೋಹಿ ಅಂತಾರೆ, ಇವರೇ ಬ್ರಿಟೀಷರಿಗೆ ಮಾಫೀನಾಮಾ ಬರೆದು ಕೊಟ್ಟರು, ಅವರ ಕಾಲು ಹಿಡಿದರು, ಬ್ರಿಟೀಷರ ಗುಲಾಮರಾಗಿದ್ದರು ಎಂದು ಸಂಘ ಪರಿವಾರ, ಬಿಜೆಪಿಯತ್ತ ಮಾತಿನ ಚಾಟಿ ಬೀಸಿದ್ದಾರೆ.ಪ್ರಗತಿಪರ ಚಿಂತಕರಿಗೆ ಧಿಮಾಗಿ ನಕ್ಸಲ್ ಅನ್ನೋದು, ವಂದೇ ಮಾತರಂ 2 ಚರಣ ಹಾಡ್ತೀವಿ ಅಂದ್ರೆ ದೇಶದ್ರೋಹಿ ಅನ್ನೋದು ಇದೆಲ್ಲಾ ಬಿಟ್ಟು ಬಿಡಿ, ಯುವಕರಿಗೆ ಶಿಕ್ಷಣ ಕೊಡಿ, ಪರೀಕ್ಷೆ ಸರಿಯಾಗಿ ನಡೆಸಿ, ಉದ್ಯೋಗದ ಬಗ್ಗೆ ಮಾತಾಡಿ, ಪ್ರಗತಿಯ ಮಾತಾಡಿ, ಇದನ್ನೆಲ್ಲ ಬಿಟ್ಟು ಕೋಮು ಭಾವನೆ ಕೆರಳಿಸುವ ನಿಮ್ಮ ಧೋರಣೆ ಹೀಂಗೆ ಮುಂದುವರಿದ್ರೆ ಈ ದೇಶದ ಯುವಕರು ನಿಮ್ಮನ್ನ ಹಂಗೇ ಬಿಡೋದಿಲ್ಲ, ಅಟ್ಟಾಡಿಸಿಕೊಡು ಬರ್ತಾರೆ ಎಂದು ಮೋದಿ- ಷಾ ಜೋಡಿಯತ್ತ ಚಾಟಿ ಬೀಸಿದರು.
ಮೋದಿ, ಷಾ ತುಂಬಾ ತೊಂದರೆ ಕೊಡುತ್ತಿದ್ದಾರೆಂದು ಹೇಳುತ್ತಲೇ ತಾವು ಕುಳಿತ ಜಾಗದ ಶುದ್ಧೀಕರಣ ಪ್ರಸಂಗ ಸ್ಮರಿಸಿದ ಖರ್ಗೆ ತಾವು ನೈನಿತಾಲ್‌ನಲ್ಲಿ ಭಾಗವಹಿಸಿದ್ದ ಸಮಾರಂಭದಲ್ಲಿ ಸೇರಿದ್ದ ಜನಸ್ತೋಮ ಕಂಡು ಬಿಜೆಪಿ ಹಿಂದುಗಳ ಗಮನ ಸೆಳೆಯಲು ಈ ಶುದ್ಧೀಕರಣ ಷಡ್ಯಂತ್ರ ರೂಪಿಸಿರಬಹುದು. ಯಾರು ಎಷ್ಟೇ ಬೊಬ್ಬೆ ಹೊಡೆದರೂ ನನ್ನ ತತ್ವ, ಸಿದ್ಧಾಂತ, ನಂಬಿಕೆಗಳನ್ನು ಬಿಡುವವನಲ್ಲ ಎಂದು ಖರ್ಗೆ ಸ್ಪಷ್ಟಪಡಸಿದರು.
ಕೆಪಿಸಿಸಿ ಅದ್ಯಕ್ಷ ಬಿಕೆ ಹರಿಪ್ರಸಾದ್ ಮಾತನಾಡಿ, ಸಂವಿಧಾನ ಬದಲಾಯಿಸಲು ಹೊರಟವರಿಗೆ ಖರ್ಗೆ ಗಟ್ಟಿಯಾಗಿ ಉತ್ತರ ನೀಡಿದ್ದಾರೆ. ಬೂಟಾಟಿಕೆ ಮಾಡುವವರನ್ನು ನಂಬಬೇಡಿ ಎಂದರು. ಕೃತಿಯ ಅನುವಾದಕ ಪ್ರೊ. ಆರ್ ಕ ಹುಡಗಿ ಪ್ರಾಸ್ತಾವಿಕ ಮಾತನಾಡಿದರು, ರಾಜ್ಯ ಪತ್ರಾಗಾರ ಇಲಾಖೆಯ ವೀರಶೆಟ್ಟಿ ಗಾರಂಪಳ್ಳಿ ಕೃತಿ ಕುರಿತು ಮಾತಾಡಿದರು. ಸಚಿವ ಡಾ. ಶರಣಪ್ರಕಾಶ ಪಾಟೀಲ್, ಕೆಬಿಎನ್ ವಿವಿ ಕುಲಪತಿ ಡಾ. ಸೈಯ್ಯದ್ ಮೊಹ್ಮದ್ ಅಲ್ ಅಲಿ ಹುಸೇನಿ, ಎಸ್ಬಿ ಶಿಕ್ಷಣ ಸಂಘದ ಕಾರ್ದರ್ಶಿ ಬಸವರಾಜ ದೇಶಮುಖ, ಪತ್ರಕರ್ತ ದೇವಯ್ಯ ಗುತ್ತೇದಾರ್, ಕಲಬುರಗಿ ಶಾಸಕರಾದ ಅಲ್ಲಂಪ್ರಭು ಪಾಟೀಲ್, ಬಿಆರ್ ಪಾಟೀಲ್, ತಿಪ್ಪಣ್ಣ ಕಮಕನೂರ್, ಖನೀಜ್ ಫತಾತೀಮಾ, ಮೇಯರ್ ವರ್ಷಾ ಜಾನೆ, ಜಗದೇವ ಗುತ್ತೇದಾರ್, ಸುಮೇಧ ಪ್ರಕಾಶನ ಪರವಾಗಿ ದತ್ತಾತ್ರೇಯ ಇಕ್ಕಳಕಿ ಸೇರಿದಂತೆ ಅನೇಕರಿದ್ದರು.