ಭಾವೈಕ್ಯತೆ, ಸೌಹಾರ್ದತೆಯಿಂದ ದೇಶದ ಬೆಳವಣಿಗೆ

KannadaprabhaNewsNetwork |  
Published : May 13, 2025, 01:27 AM ISTUpdated : May 13, 2025, 01:28 AM IST
ಕೊಲ್ಹಾರ ಪಟ್ಟಣದ ಸರ್ವಧರ್ಮ ಸದ್ಭಾವನಾ ಸಮಾರಂಭದಲ್ಲಿ ಡಾ ಬಖ್ತಿಯಾರಖಾನ ಕಾದ್ರಿ, ಸಚಿವ ಶಿವಾನಂದ ಪಾಟೀಲ,ಮಾಜಿ ಸಚಿವ ಎಸ್ ಕೆ ಬೆಳ್ಳುಬ್ಬಿ ಪ್ರಶಸ್ತಿ ನೀಡಿ ಗೌರವಿಸುತ್ತೀರುವುದು. ಈ ವೇಳೆ ಪ್ರಭುಕುಮಾರ ಶಿವಾಚಾರ್ಯರು, ಕಲ್ಲಿನಾಥ ದೇವರು,ಡಾ ಕೈಲಾಸನಾಥ ಶ್ರೀಗಳು ಇದ್ದರು. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಕೊಲ್ಹಾರ ಮನುಷ್ಯ ಬದುಕಲು ಉಸಿರು ಹೇಗೆ ಅಗತ್ಯವೋ, ದೇಶ ಬದುಕಲು ಭಾವೈಕ್ಯತೆ ಮತ್ತು ಸೌಹಾರ್ದತೆ ಎಂಬ ಉಸಿರಿನಿಂದ ಮಾತ್ರ ಸಾಧ್ಯವಿದೆ. ಭಾರತ ದೇಶ ರಾಮಾಯಣ, ಮಹಾಭಾರತ ಸಂಸ್ಕೃತಿಯ ಮೇಲೆ ತಲೆ ಎತ್ತಿದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.

ಕನ್ನಡಪ್ರಭ ವಾರ್ತೆ ಕೊಲ್ಹಾರ

ಮನುಷ್ಯ ಬದುಕಲು ಉಸಿರು ಹೇಗೆ ಅಗತ್ಯವೋ, ದೇಶ ಬದುಕಲು ಭಾವೈಕ್ಯತೆ ಮತ್ತು ಸೌಹಾರ್ದತೆ ಎಂಬ ಉಸಿರಿನಿಂದ ಮಾತ್ರ ಸಾಧ್ಯವಿದೆ. ಭಾರತ ದೇಶ ರಾಮಾಯಣ, ಮಹಾಭಾರತ ಸಂಸ್ಕೃತಿಯ ಮೇಲೆ ತಲೆ ಎತ್ತಿದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.

ಪಟ್ಟಣದಲ್ಲಿ ಸೋಮವಾರ 20ನೇ ಶತಮಾನದ ಸೂಫಿಸಂತ ಗುರು ಅಲಹಾಜ ಶಾಹ ಮಹ್ಮದ ಅಬ್ದುಲಗಫಾರ ಖಾದ್ರಿ ಅವರ 32ನೇ ಉರುಸ್‌ ನಿಮಿತ್ತ ಹಮ್ಮಿಕೊಂಡ ಸರ್ವಧರ್ಮ ಸದ್ಭಾವನಾ ಸಮಾರಂಭ ಹಾಗೂ 20ನೇ ಅಲಹಾಬಾದ ಮೌಲಾನಾ ಭಾವ್ಯೆಕ್ಯತಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಅಲಹಾಬಾದ ಮೌಲಾನಾ ಭಾವೈಕ್ಯತಾ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಸರ್ವಧರ್ಮದ, ಜಾತಿಗಳ ಗುರುಗಳನ್ನು, ಹಿರಿಯರನ್ನು ಸೇರಿಸಿ ಪರಸ್ಪರ ಸಂಸ್ಕೃತಿ, ಪರಂಪರೆಯನ್ನು ಹಂಚಿಕೊಳ್ಳುವ ಮೂಲಕ ವಿಶ್ವಾಸಭರಿತ ಸಮಾಜ, ಅಭಿವೃದ್ಧಿಯ ಕರ್ನಾಟಕ, ಬಲಿಷ್ಠವಾದ ಭಾರತವನ್ನು ನಿರ್ಮಾಣ ಮಾಡುವುದೇ ಮುಖ್ಯ ಉದ್ದೇಶ ಎಂದರು.

ಯುದ್ಧದಲ್ಲಿ ಭಾಗವಹಿಸಿ ನಮ್ಮ ದೇಶವನ್ನು ಕಾಪಾಡಿದ ಎಲ್ಲ ಸೈನಿಕರಲ್ಲಿ, ರಾಜಕೀಯ ಎಲ್ಲ ಪಕ್ಷದ ಮುಖಂಡರಲ್ಲಿ, ಪ್ರಧಾನ ಮಂತ್ರಿಗಳಲ್ಲಿ, ಪ್ರತಿಪಕ್ಷದ ನಾಯಕರಲ್ಲಿ, ಸಹಕಾರ ನೀಡಿದ ಎಲ್ಲ ಸಂಘ ಸಂಸ್ಥೆಗಳನ್ನು ಸ್ಮರಿಸುವೆ. ಯುದ್ಧದಲ್ಲಿ ಅಭೂತಪೂರ್ವ ವಿಜಯ ಸಿಗಲಿ. ನಮ್ಮ ಯಾವ ಸೈನಿಕರಿಗೆ ಹಾನಿಯಾಗದ ರೀತಿಯಲ್ಲಿ ದೇವರು ಅವರನ್ನು ರಕ್ಷಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು.

ಈ ವೇಳೆ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್‌ ಅವರಿಗೆ 2025ನೇ ಸಾಲಿನ ಅಲಾಹಬಾದ ಮೌಲಾನಾ ಭಾವೈಕ್ಯತಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ವೇಳೆ ಪಪಂ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರು, ರಾಜಕೀಯ ಮುಖಂಡರು, ವಿವಿಧ ಸಂಘ ಸಂಸ್ಥೆಗಳ ಮುಖಂಡರು ಸನ್ಮಾನಿಸಿದರು. ಸಾನಿಧ್ಯ ವಹಿಸಿದ್ದ ವಿಜಯಪುರ ಹಾಶಿಂಪೀರ ದರ್ಗಾದ ಸೈಯ್ಯದ ಶಾ ಮುರ್ತುಜಾ ಹುಸೇನಿ ಹಾಷ್ಮಿ, ಬೇಲೂರು, ಕೊಲ್ಹಾರ ಹಿರೇಮಠದ ಪ್ರಭುಕುಮಾರ ಶಿವಾಚಾರ್ಯ ಸ್ವಾಮೀಜಿ, ದಿಗಂಬರೇಶ್ವರ ಮಠದ ಕಲ್ಲಿನಾಥ ದೇವರು, ಶೀಲವಂತ ಹಿರೇಮಠದ ಡಾ.ಕೈಲಾಸನಾಥ ಮಹಾಸ್ವಾಮಿಜಿ, ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ಖಾನಕಾಯೇ ಗಪ್ಫಾರಿಯಾ ಉತ್ತರಾಧಿಕಾರಿ ಡಾ.ಬಖ್ತಿಯಾರಖಾನ ಕಾದ್ರಿ ಆಶೀರ್ವಚನ ನೀಡಿದರು. ಅಧ್ಯಕ್ಷತೆಯನ್ನು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ವಹಿಸಿದ್ದರು. ಅತಿಥಿಗಳಾಗಿ ಮಾಜಿ ಸಚಿವ ಎಸ್.ಆರ್.ಪಾಟೀಲ, ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ, ಪ್ರವಚನಕಾರ ಲಾಲ್ ಹುಸೇನ ಕಂದಗಲ್, ಡಾ.ಕೌಸರ ಅತ್ತಾರ, ಪಪಂ ಅಧ್ಯಕ್ಷ ಸಿ.ಎಸ್.ಗಿಡ್ಡಪ್ಪಗೋಳ, ಸ್ವಾಗತ ಸಮಿತಿ ಅಧ್ಯಕ್ಷ ಉಸ್ಮಾನ್ ಪಟೇಲ ಖಾನವಾಲೆ, ಮುಖಂಡರಾದ ಕೆ.ಎಸ್.ದೇಸಾಯಿ, ಆರ್.ಬಿ.ಪಕಾಲಿ, ಎಸ್.ಬಿ.ಪತಂಗಿ, ಡಾ.ಅಮರೇಶ ಮೀಣಜಗಿ, ಈರಣ್ಣ ಔರಸಂಗ ಸೇರಿ ಅನೇಕರು ಹಾಜರಿದ್ದರು.

ಖುದಾದಖಾನ ಪಠಾಣ ಸ್ವಾಗತಿಸಿದರು. ಶಿಕ್ಷಕ ಎಮ್.ಆರ್.ಬಿದರಿ ಹಾಗೂ ಪತ್ರಕರ್ತ ಪರಶುರಾಮ ಗಣಿ ಕಾರ್ಯಕ್ರಮ ನಡೆಸಿಕೊಟ್ಟರು.

------

ಕೋಟ್‌

ಈ ಕಾರ್ಯಕ್ರಮ ಮಣ್ಣಿನ ಸಂಸ್ಕೃತಿ, ಪರಂಪರೆ, ಆಚಾರ, ವಿಚಾರಗಳನ್ನು ತಿಳಿಸುತ್ತದೆ. ಭವಿಷ್ಯದಲ್ಲಿ ಯುವ ಜನಾಂಗಕ್ಕೆ ಶಕ್ತಿ, ಪ್ರೇರಣೆಯಾಗಬೇಕು. ಎಲ್ಲ ಧರ್ಮಗಳ ಹಾಗೂ ಧರ್ಮ ಗುರುಗಳ, ಮಹಾಪುರುಷರ ಸಂದೇಶವು ಸಹೋದರತೆ, ಸಮಾನತೆ, ಪ್ರೀತಿ, ವಿಶ್ವಾಸ ಹಾಗೂ ನೆಮ್ಮದಿಯ ಜೀವನ ಸಾಗಿಸುವುದೇ ಆಗಿದೆ. ನಾವು ಎಷ್ಟು ವರ್ಷ ಬದಕುತ್ತೇವೆ ಎಂಬುದು ಮುಖ್ಯವಲ್ಲ, ಇರುವಷ್ಟು ದಿನ ನೆಮ್ಮದಿಯಿಂದ ಬದುಕಬೇಕು.

- ಯು.ಟಿ.ಖಾದರ್‌, ವಿಧಾನಸಭೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಾಳಿಪಟ ದಾರ ಕುತ್ತಿಗೆ ಸೀಳಿ ಮಗಳನ್ನು ಹಾಸ್ಟೆಲ್‌ನಿಂದ ಕರೆತರಲು ಹೊರಟಿದ್ದ ಅಪ್ಪ ದಾರುಣ ಸಾವು
ಪೌರಾಯುಕ್ತೆಗೆ ಬೆಂಕಿ: ಕಾಂಗ್ರೆಸ್ಸಿಗನಿಂದ ಧಮ್ಕಿ